ಬೆಂಗಳೂರು, ಆಗಸ್ಟ್.28: ರಾಜ್ಯ ಸರ್ಕಾರ (Karnataka Government) ನಿನ್ನೆಯಿಂದ (ಆಗಸ್ಟ್ 27) ಪ್ರೀಮಿಯಂ ವಿಸ್ಕಿ, ಸ್ಕಾಚ್ಗಳ ದರವನ್ನು ಕಡಿಮೆ ಮಾಡಲು ಮುಂದಾಗಿದೆ (Liquor). ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಸ್ಕಾಚ್ ಗಳದರ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗ್ತಿರೋದು. ಮದ್ಯದಲ್ಲಿ 16 ಸ್ಲ್ಯಾಬ್ಗಳಿವೆ. ಅದರಲ್ಲಿ ಒಂದರಿಂದ ಐದು ಸ್ಲ್ಯಾಬ್ಗಳ ವರೆಗೆ ಮದ್ಯದ ದರವನ್ನು ಕಡಿಮೆ ಮಾಡಿಲ್ಲ. ಅದು ಬಡ ವರ್ಗದ ಮದ್ಯಪ್ರಿಯರು ಕುಡಿಯುವ ಮದ್ಯ. 60% ರಷ್ಟು ಮದ್ಯಪ್ರಿಯರು ಈ ವರ್ಗದ ಮದ್ಯವನ್ನು ಕುಡಿಯುತ್ತಾರೆ. 6 ರಿಂದ 18 ರವರೆಗೆ ಮಧ್ಯಮವರ್ಗ, ಶ್ರೀಮಂತ ಮತ್ತು ಅತಿ ಶ್ರೀಮಂತ ವರ್ಗ ಕುಡಿಯುತ್ತಾರೆ. ಪ್ರೀಮಿಯಂ ಮದ್ಯವನ್ನು ರಾಜ್ಯದಲ್ಲಿ ಶೇ- 40% ರಷ್ಟು ಮದ್ಯಪ್ರಿಯರು ಕುಡಿಯುತ್ತಾರೆ. ಆರರಿಂದ ಹದಿನಾರರವರೆಗೆ ಬರುವ ಎಲ್ಲಾ ಮಾದರಿಯ ಮದ್ಯದ ದರವನ್ನು ಕಡಿಮೆ ಮಾಡಲಾಗ್ತಿದೆ.
ಕರ್ನಾಟಕ ರಾಜ್ಯದ ಅಕ್ಕಪಕ್ಕದ ರಾಜ್ಯಗಳಲ್ಲಿ ಮತ್ತು ಮಹಾರಾಷ್ಟ್ರ, ಗೋವಾ, ಗುರ್ಗಾವ್, ದೆಹಲಿ ರಾಜ್ಯಗಳಲ್ಲಿ ನಮ್ಮ ರಾಜ್ಯದಲ್ಲಿ 3 ಸಾವಿರಕ್ಕೆ ಮಾರಾಟ ಮಾಡುವ ಮದ್ಯ ಕೇವಲ 900 ರುಪಾಯಿಗೆ ಸಿಗುತ್ತದೆ. ಇದರಿಂದ ರಾಜ್ಯದ ಹೈಕ್ಲಾಸ್ ಮದ್ಯಪ್ರಿಯರು ಬೇರೆಬೇರೆ ರಾಜ್ಯದ ಮದ್ಯಕ್ಕೆ ಮೊರೆ ಹೋಗುತ್ತಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ಸುಮಾರು 2,500 ರಿಂದ 3 ಸಾವಿರ ಕೋಟಿಯಷ್ಟು ನಷ್ಟ ಆಗ್ತಿತ್ತು. ಇಂದಿನಿಂದ ದರ ಇಳಿಕೆ ಆಗ್ತಿರೋದ್ರಿಂದ ಆದಾಯ ಹೆಚ್ಚಾಗಲಿದೆ.
ಇದನ್ನೂ ಓದಿ: Petrol Diesel Price on August 28: ಕಚ್ಚಾತೈಲ ಬೆಲೆ ಏರಿಳಿತ ಹೊರತಾಗಿಯೂ ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್
ಈ ಹಿಂದೆ 2,500 ರಿಂದ 3 ಸಾವಿರ ರುಪಾಯಿ ಬೆಲೆ ಇರುವ ಒಂದು ಫುಲ್ ಬಾಟಲ್ ಪ್ರೀಮಿಯಂ ವಿಸ್ಕಿ ಬೆಲೆ ನಿನ್ನೆಯಿಂದ 600 ರಿಂದ 800 ರುಪಾಯಿ ವರೆಗೆ ಕಡಿಮೆ ಆಗಿದೆ. ಐದು ಸಾವಿರದಿಂದ ಎಂಟು ಸಾವಿರ ರುಪಾಯಿ ವರೆಗೆ ಇದ್ದ ಒಂದು ಫುಲ್ ಬಾಟಲ್ ಸ್ಕಾಚ್ ನ ಮೇಲೆ ಒಂದು ಸಾವಿರ ರುಪಾಯಿ ವರೆಗೆ ಕಡಿಮೆ ಆಗಿದೆ. ಸ್ಕಾಚ್ ಗಳ ಮೇಲೆ ಶೇ 20 ರಿಂದ 25% ರಷ್ಟು ಕಡಿಮೆ ಆಗಿದೆ ಎಂದು ಬೆಂಗಳೂರು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಕರುಣಾಕರ ಹೆಗ್ಡೆ ತಿಳಿಸಿದರು.
ಇನ್ನೂ ಇತ್ತ ರಾಜ್ಯ ಸರ್ಕಾರ ಕ್ಲಾಸ್ ಪೀಪಲ್ಸ್ ಕುಡಿಯುವ ಮದ್ಯದ ದರವನ್ನು ಇಳಿಕೆ ಮಾಡಿದ್ರೆ ಇತ್ತ ನಾರ್ಮಲ್ ಜನರು ಕುಡಿಯುವ ಪ್ರತಿ ಬಿಯರ್ ಮೇಲೆ 5 ರಿಂದ 30 ರುಪಾಯಿ ವರೆಗೂ ಹೆಚ್ಚಳ ಮಾಡಿದೆ. ಈ ಹಿಂದೆ 100 ರುಪಾಯಿ ಇದ್ದ ಬಿಯರ್ ಈಗ 120 ರುಪಾಯಿ. 120 ರುಪಾಯಿ ಇದ್ದ ಬಿಯರ್ 150 ರುಪಾಯಿ. 130 ರುಪಾಯಿ ಇದ್ದ ಬಿಯರ್ ಬೆಲೆ 150 ರುಪಾಯಿ ವರೆಗೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮದ್ಯಪ್ರಿಯರು ರಾಜ್ಯ ಸರ್ಕಾರ ಸ್ಕಾಚ್ ದರ ಕಡಿಮೆ ಮಾಡಿರುವುದು ಸಂತೋಷದ ವಿಚಾರ ಆದರೆ ಬಿಯರ್ ಈಗಾಗಲೇ ಮೂರು ಬಾರಿ ಹೆಚ್ಚಳ ಮಾಡಿದ್ರು. ಈಗ ಮತ್ತೆ ದರ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಒಟ್ನಲ್ಲಿ ರಾಜ್ಯ ಸರ್ಕಾರ ಇದೆ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೀಮಿಯಂ ವಿಸ್ಕಿ, ಸ್ಕಾಚ್ ಗಳ ಮೇಲೆ ದರ ಕಡಿಮೆ ಮಾಡಿ ಗುಡ್ ನ್ಯೂಸ್ ನೀಡಿದ್ರೆ, ಇತ್ತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದು ನಾಲ್ಕನೇ ಬಾರಿಗೆ ಬಿಯರ್ ಹೆಚ್ಚಳ ಮಾಡಿ ಶಾಕ್ ನೀಡಿರೋದಂತು ಸುಳ್ಳಲ್ಲ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:19 am, Wed, 28 August 24