ಪ್ರವಾಸಿಗರಿಗೆ ಗುಡ್​ ನ್ಯೂಸ್​: ಮಂಗಳವಾರವೂ ಬನ್ನೇರುಘಟ್ಟ ಉದ್ಯಾನವನ ಓಪನ್​

ದೀಪಾವಳಿ ಹಬ್ಬದ ನಿಮಿತ್ತ ಸಾಲು ಸಾಲು ರಜೆ ಇದ್ದು, ನೀವು ಪ್ರವಾಸಕ್ಕೆ ಹೋಗಲು ಪ್ಲ್ಯಾನ್​​ ಮಾಡುತ್ತಿದ್ದರೇ ಇಲ್ಲಿದೆ ಸಿಹಿ ಸುದ್ದಿ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮಂಗಳವಾರ ರಜೆ ದಿನವೂ ಬನ್ನೇರುಘಟ್ಟ ಜೈವಿಕ ಉದ್ಯಾನವನ ತೆರದಿರಲಿದೆ.

ಪ್ರವಾಸಿಗರಿಗೆ ಗುಡ್​ ನ್ಯೂಸ್​: ಮಂಗಳವಾರವೂ ಬನ್ನೇರುಘಟ್ಟ ಉದ್ಯಾನವನ ಓಪನ್​
ಬನ್ನೇರುಘಟ್ಟ ಜೈವಿಕ ಉದ್ಯಾನವನ
Edited By:

Updated on: Nov 13, 2023 | 10:16 AM

ಆನೇಕಲ್ ನ.13: ದೀಪಾವಳಿ (Deepavali) ಹಬ್ಬದ ನಿಮಿತ್ತ ಸಾಲು ಸಾಲು ರಜೆ ಇದ್ದು, ನೀವು ಪ್ರವಾಸಕ್ಕೆ ಹೋಗಲು ಪ್ಲ್ಯಾನ್​​ ಮಾಡುತ್ತಿದ್ದರೇ ಇಲ್ಲಿದೆ ಸಿಹಿ ಸುದ್ದಿ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮಂಗಳವಾರ ರಜೆ ದಿನವೂ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park) ತೆರದಿರಲಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರತಿ ಮಂಗಳವಾರ ರಜೆ ಇರುತ್ತದೆ. ಆದರೆ ದೀಪಾವಳಿ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉದ್ಯಾನವನಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿ ಈ ಮಂಗಳವಾರ ಬನ್ನೇರುಘಟ್ಟ ಉದ್ಯಾನವನ ತೆರೆದಿದರಲಿದೆ.

ಮಂಗಳವಾರ ಪಾರ್ಕ್​​ ಅನ್ನು ಓಪನ್ ಮಾಡಿ ಬುಧವಾರ ರಜೆ ಮಾಡಲು ಬನ್ನೇರುಘಟ್ಟ ಜೈವಿಕ ಉದ್ಯಾನವನ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಸಂಬಂಧ ಬುಧವಾರ (ನ.15) ದಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ