ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ, ಪಟ್ಟಿ ಇಲ್ಲಿದೆ

| Updated By: ಆಯೇಷಾ ಬಾನು

Updated on: Aug 24, 2022 | 8:32 PM

ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಲಾಗಿದೆ.

ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ, ಪಟ್ಟಿ ಇಲ್ಲಿದೆ
ಚಕ್ರವರ್ತಿ ಸೂಲಿಬೆಲೆ
Follow us on

ಬೆಂಗಳೂರು: ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡಲಾಗಿದೆ. ಸರ್ಕಾರದಿಂದ ರಚಿಸಲ್ಪಟ್ಟ ಟ್ರಿಸ್ಟ್, ಪ್ರತಿಷ್ಠಾನಗಳ ಅಧ್ಯಕ್ಷರುಗಳು ಹಾಗೂ ಸದಸ್ಯರ ಅಧಿಕಾರಾವಧಿಯು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶಿಸಿದೆ.

ರಾಜ್ಯ ಸರ್ಕಾರದ ನೇಮಕಾತಿಗೆ ಒಪ್ಪದ ಚಕ್ರವರ್ತಿ ಸೂಲಿಬೆಲೆ

ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾಗಿ ಚಕ್ರವರ್ತಿ ಸೂಲಿಬೆಲೆ ಅವರನ್ನು ನೇಮಕ ಮಾಡಲಾಗಿದೆ. ಆದ್ರೆ ರಾಜ್ಯ ಸರ್ಕಾರದ ನೇಮಕಾತಿಯನ್ನು ಸೂಲಿಬೆಲೆ ತಿರಸ್ಕರಿಸಿದ್ದಾರೆ. ನೇಮಕಾತಿ ಸ್ಥಾನ ಮರಳಿಸಿದ್ದಾರೆ. ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಟ್ರಸ್ಟ್, ಪ್ರತಿಷ್ಠಾನಗಳ ಸದಸ್ಯರ ನೇಮಕಾತಿಯಲ್ಲಿ ಎಡವಟ್ಟು

ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಟ್ರಸ್ಟ್, ಪ್ರತಿಷ್ಠಾನಗಳ ನೇಮಕಾತಿಯಲ್ಲಿ ಎಡವಟ್ಟಾಗಿದೆ. ಚಿಕ್ಕಮಗಳೂರಿನ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಮಹಿಳಾ ಸದಸ್ಯರಾಗಿ ರಾಜೇಶ್ವರಿ ಹೆಸರು ಸೇರಿಸಲಾಗಿದೆ. ಸರ್ಕಾರ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ಹೆಸರು ಸೇರಿಸಿದೆ. ಆದ್ರೆ 2021ರ ಡಿಸೆಂಬರ್​ನಲ್ಲಿ ತೇಜಸ್ವಿ ಪತ್ನಿ ರಾಜೇಶ್ವರಿ ನಿಧನರಾಗಿದ್ದಾರೆ.

ಅಧ್ಯಕ್ಷರು, ಸದಸ್ಯರ ನೇಮಕ ಪಟ್ಟಿ ಹೀಗಿದೆ

  • ಡಾ. ದ.ರಾ. ಬೇಂದ್ರೆ ಸ್ಮಾರಕ ಟ್ರಸ್ಟ್ ಧಾರವಾಡ- ಮನೋಜ ಪಾಟೀಲ ಧಾರವಾಡ
  • ಡಾ. ಪು.ತಿ. ನ. ಟ್ರಸ್ಟ್ ಬೆಂಗಳೂರು- ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
  • ಮಲ್ಲಿಕಾರ್ಜುನ ಮನ್ಸೂರ್ ಸ್ಮಾರಕ ಟ್ರಸ್ಟ್ ಧಾರವಾಡ – ನಾಗರಾಜ ಹವಾಲದಾರ
  • ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರ – ಡಾ. ವತ್ಸಲಾ ಮೋಹನ್
  • ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಉಡುಪಿ – ಆನಂದ ಸಿ. ಕುಂದರ್
  • ಡಾ. ವಿ.ಕೃ. ಗೋಕಾಕ್ ಪ್ರತಿಷ್ಠಾನ ಹಾವೇರಿ- ಅನಿಲ ಗೋಕಾಕ್
  • ಬಸವರಾಜ ರಾಜಗುರು ಸ್ಮಾರಕ ಟ್ರಸ್ಟ್ ಧಾರವಾಡ- ಶ್ರೀಪಾದ ಹೆಗಡೆ ಧಾರವಾಡ
  • ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್- ಡಾ. ಶ್ರೀನಿವಾಸ ಪಾಡಿಗಾರ
  • ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ- ಡಾ. ಕವಿತಾ ಕುಸಗಲ್
  • ಮೈಲಾರ ಮಹಾದೇವಪ್ಪ ಸ್ಮಾರಕ ಟ್ರಸ್ಟ್ ಹಾವೇರಿ- ಸುಧೀರ್ ಸಿಂಹ ಘೋರ್ಪಡೆ
  • ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಬೆಳಗಾವಿ – ಡಾ. ಗುರುಪಾದ ಮರಿಗುದ್ದಿ
  • ಡಿ.ವಿ. ಹಾಲಭಾವಿ ಸ್ಮಾರಕ ಟ್ರಸ್ಟ್ ಧಾರವಾಡ- ಪಿ.ಎಸ್. ಕಡೆಮನಿ
  • ಡಿ.ವಿ.ಜಿ. ಪ್ರತಿಷ್ಠಾನ ಕೋಲಾರ- ಎಸ್. ದಿವಾಕರ
  • ಪಿ.ಬಿ. ಧುತ್ತರಗಿ ಪ್ರತಿಷ್ಠಾನ ಬಾಗಲಕೋಟೆ- ಶಿವಪ್ಪ ಭರಮಪ್ಪ ಅದರಗುಂಚಿ
  • ಗಳಗನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನ ಹಾವೇರಿ- ಚಕ್ರವರ್ತಿ ಸೂಲಿಬೆಲೆ
  • ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಮಂಡ್ಯ- ಡಾ. ಬಿ.ವಿ. ರಾಜಾರಾಮ್
  • ಡಾ. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು- ಡಾ. ಬಸವರಾಜ ಕಲ್ಗುಡಿ
  • ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಚಿಕ್ಕಮಗಳೂರು- ನರೇಂದ್ರ ರೈ ದೇರ್ಲ
  • ಹಲಸಂಗಿ ಗೆಳೆಯರ ಪ್ರತಿಷ್ಠಾನ ವಿಜಯಪುರ- ಸರಸ್ವತಿ ಚಿಮ್ಮಲಗಿ
  • ರನ್ನ ಪ್ರತಿಷ್ಠಾನ ಬಾಗಲಕೋಟೆ- ಡಾ. ನೀಲಗಿರಿ ತಳವಾರ್
  • ಗುಬ್ಬಿ ವೀರಣ್ಣ ಟ್ರಸ್ಟ್ ತುಮಕೂರು- ಡಾ. ಭೀಮಸೇನ್ ಗಂಗಾವತಿ.

Published On - 6:52 pm, Wed, 24 August 22