ಕೆಪಿಸಿಸಿ ಶಿಸ್ತು ಸಮಿತಿಯಿಂದ ಕೆಜಿಎಫ್ ಬಾಬುಗೆ ನೋಟಿಸ್: ಪಕ್ಷದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಆಕ್ರೋಶ
ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ 350 ಕೋಟಿ ಯೋಜನೆ ರೂಪಿಸುವಂತೆ ಕರೆ ನೀಡಿದ್ದರು. ಇದರಿಂದ ಪಕ್ಷದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ನೋಟಿಸ್ ನೀಡಿದ್ದಾರೆ.
ಬೆಂಗಳೂರು: ಕೆಜಿಎಫ್ ಬಾಬುಗೆ(KGF Babu) ಕೆಪಿಸಿಸಿ(KPCC) ನೋಟಿಸ್ ನೀಡಿದೆ. ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಕೆಜಿಎಫ್ ಬಾಬು ಹೇಳಿಕೆ ನೀಡಿದ್ದರು. ಹಾಗೂ ಚಿಕ್ಕಪೇಟೆ ಕ್ಷೇತ್ರಕ್ಕೆ ಸಂಬಂಧಿಸಿ 350 ಕೋಟಿ ಯೋಜನೆ ರೂಪಿಸುವಂತೆ ಕರೆ ನೀಡಿದ್ದರು. ಇದರಿಂದ ಪಕ್ಷದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದು ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ನೋಟಿಸ್ ನೀಡಿದ್ದಾರೆ.
ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಕಾಂಗ್ರೆಸ್‌ನಿಂದ ಚಿಕ್ಕಪೇಟೆ ವಿಧಾನಸಭಾ ಸ್ಥಾನದ ಆಕಾಂಕ್ಷಿ ಎಂದು ಘೋಷಿಸಿದ್ದರು. ಹಾಗೂ ತಮ್ಮ ಕ್ಷೇತ್ರದ ಪ್ರತಿ ಮನೆಗೆ 5,000 ರೂಪಾಯಿಗಳನ್ನು ತಮ್ಮ ವೈಯಕ್ತಿಕ ನಿಧಿಯಿಂದ ಸುಮಾರು 350 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಯೋಜಿಸಿದ್ದೇನೆ ಎಂದಿದ್ದರು. ಈ ಘೋಷಣೆಯ ನಂತರ, ಅವರು ತಮ್ಮ ನಿವಾಸದಲ್ಲಿ ಸಾಕಷ್ಟು ಸಭೆಗಳನ್ನು ನಡೆಸಿದ್ದರು. ನಾನು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಣ ಹಂಚುತ್ತಿಲ್ಲ. ನಾನು ಬೆಳೆದ ಸ್ಥಳವಾದ ಚಿಕ್ಕಪೇಟೆಯ ಜನರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ. ನಾನು ಸಮಾಜಕ್ಕೆ ಮರಳಿ ನೀಡಲು ಬಯಸುತ್ತೇನೆ. ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದೇನೆ. ನೀವು ಈಗ ನನ್ನನ್ನು ನೋಡುತ್ತಿದ್ದೀರಿ, ಆದರೆ ನನ್ನ ಕೆಲಸ ಹಲವಾರು ವರ್ಷಗಳ ಹಿಂದೆ ಪ್ರಾರಂಭವಾಯಿತು” ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಔದಲ್ಲಿ ಹೇಳಿದ್ದರು.
ಏನು ದೇವರಾಜ್ ಕುಟುಂಬಕ್ಕೇ ಚಿಕ್ಕಪೇಟೆ ಕ್ಷೇತ್ರ ಮೀಸಲಾಗಿದೆಯಾ? ಈ ಬಾರಿ ಇಲ್ಲಿಂದ ನಾನು ನಿಲ್ಲುವೆ -ಕೆಜಿಎಫ್ ಬಾಬು ಸಮರ ಘೋಷಣೆ
ದೆಹಲಿ(ಆಗಸ್ಟ್ 23): ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂದು ದೆಹಲಿಯ ಕರ್ನಾಟಕ ಭವನದಲ್ಲಿ ಕೆಜಿಎಫ್ ಬಾಬು ತಾವು ಚುನಾವಣೆಗೆ ನಿಲ್ಲುವ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಗೆ ಸಮರ ಸಾರಿದ್ದಾರೆ. ನಾನು, ನನ್ನ ಪೂರ್ವಿಕರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಕ್ಷೇತ್ರದ ಜನರು ಚುನಾವಣೆ ನಿಲ್ಲಲು ಒತ್ತಾಯ ಮಾಡುತ್ತಿದ್ದಾರೆ ಎಂದರು.
ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್.ವಿ ದೇವರಾಜ್ ಮಾತ್ರ ಸ್ಪರ್ಧಿಸಬೇಕಾ? ಅವರ ಮಗಾ, ಪತ್ನಿ ಮಾತ್ರ ಸ್ಪರ್ಧಿಸಬೇಕಾ? ಅವರ ಕುಟುಂಬ ಬಿಟ್ಟು ಬೇರೆ ಯಾರು ಸ್ಪರ್ಧೆ ಮಾಡಬಾರದ. ನಾನು, ನನ್ನ ಪೂರ್ವಿಕರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಕ್ಷೇತ್ರದ ಜನರು ಚುನಾವಣೆ ನಿಲ್ಲಲ್ಲು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ನಾನು ಸ್ಪರ್ಧಿಸುತ್ತೇನೆ. ಹೈಕಮಾಂಡ್ ನಾಯಕರು ನನ್ನ ಕೆಲಸ ಗಮನಿಸಬೇಕು. ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಜನರಿಗೆ ಸಹಾಯ ಮಾಡಲು ಅವಕಾಶ ನೀಡಬೇಕು. ಚಿಕ್ಕಪೇಟೆಯಲ್ಲಿ ನಾನು ಆಡಿ ಬೆಳೆದಿದ್ದೇನೆ. ನಾನೇ ಸ್ಪರ್ಧೆ ಮಾಡಬೇಕು ಎಂದು ಜನರು ಕೇಳುತ್ತಿದ್ದಾರೆ. ಹೈಕಮಾಂಡ್ ನಾಯಕರು ಗಮನಿಸಬೇಕು ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ. ಇನ್ನು ಈ ಹಿಂದೆ ಇಡಿ ವಿಚಾರಣೆ ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕೆಜಿಎಫ್ ಬಾಬು ತಿಳಿಸಿದ್ದರು.
ಮುಂದಿನ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಆದಾಯದ ಶೇ.25ರಷ್ಟು ಮೊತ್ತವನ್ನು ಕ್ಷೇತ್ರಕ್ಕೆ ಖರ್ಚುಮಾಡುವೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಹಣ ಖರ್ಚು ಮಾಡುತ್ತೇವೆ ಎಂದು ಕೆಜಿಎಫ್ ಬಾಬು ತಿಳಿಸಿದ್ದರು.
Published On - 8:08 pm, Wed, 24 August 22