ಕರ್ನಾಟಕದಲ್ಲಿ ಅಕ್ಕಿ, ದಿನಸಿ ದರ ಮತ್ತಷ್ಟು ಏರಿಕೆ; ಕಾರಣವೇನು?

| Updated By: ಆಯೇಷಾ ಬಾನು

Updated on: Dec 21, 2023 | 12:28 PM

ಹೊಸ ಸ್ಟಾಕ್ ಬರುವುದಕ್ಕೆ ಒಂದು ತಿಂಗಳು ತಡವಾಗಲಿದೆ. ಸದ್ಯ ಹಳೆಯ ಸ್ಟಾಕ್ ಕಡಿಮೆ ಇರುವ ಕಾರಣ ಹಳೆಯ ಸ್ಟಾಕ್​ಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಮುಂದಾಗಿದ್ದಾರೆ. ದುಬಾರಿ ಬೆಲೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ತಿಂಗಳು ಒಂದು ಕೆಜಿ‌ ಅಕ್ಕಿಯ ಬೆಲೆ 50 ರೂ. ಇತ್ತು. ಈ ತಿಂಗಳು ಬರೋಬ್ಬರಿ 65 ರೂ.ಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಅಕ್ಕಿ, ದಿನಸಿ ದರ ಮತ್ತಷ್ಟು ಏರಿಕೆ; ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.21: ಸಾಮಾನ್ಯ ಜನರ ಬದುಕು ಇನ್ಮುಂದೆ ಬಲು ದುಬಾರಿಯಾಗಲಿದೆ. ಒಂದು ತಿಂಗಳ ಹಿಂದೆಯಷ್ಟೇ ಏರಿಕೆಯಾಗಿದ್ದ ಅಕ್ಕಿ, ಬೆಳೆಗಳ ಬೆಲೆ ಈಗ ಮತ್ತೆ ಏರಿಕೆಯಾಗಿದೆ (Grocery). ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆ ಇತ್ತು. ಅದೆಷ್ಟೋ ಜಿಲ್ಲೆಗಳಲ್ಲಿ ಬರ ಇತ್ತು. ಪ್ರತಿ ವರ್ಷದಂತೆ ಈ ವರ್ಷ ಬೆಳೆಗಳನ್ನು ಬೆಳೆಯಲಾಗಿಲ್ಲ (Karnataka Rain). ಅಲ್ಲದೆ ಹೊಸ ಸ್ಟಾಕ್ ಬಂದಿಲ್ಲ ಎನ್ನುವ ಕಾರಣ ಅಕ್ಕಿ, ಧಾನ್ಯಗಳ ಬೆಲೆ ಏರಿಕೆ ಮಾಡಲಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ಹೊಸ ಸ್ಟಾಕ್ ಬರುತ್ತಿತ್ತು. ಆದರೆ ಈ ತಿಂಗಳು ಹೊಸ ಸ್ಟಾಕ್ ಬಂದಿಲ್ಲ. ಅಕಾಲಿಕ ಮಳೆಯಿಂದಾಗಿ ಹೊಸ ಸ್ಟಾಕ್ ಬರುವುದಕ್ಕೆ ಸಮಸ್ಯೆಯಾಗಿದೆ. ಬೇಡಿಕೆಯಿಂತ ಉತ್ಪನ್ನ ಕಡಿಮೆ ಇರುವ ಹಿನ್ನಲೆ ದಿನಸಿ ಬೆಲೆ ಏರಿಕೆ ಮಾಡಲಾಗಿದೆ.

ಹೊಸ ಸ್ಟಾಕ್ ಬರುವುದಕ್ಕೆ ಒಂದು ತಿಂಗಳು ತಡವಾಗಲಿದೆ. ಸದ್ಯ ಹಳೆಯ ಸ್ಟಾಕ್ ಕಡಿಮೆ ಇರುವ ಕಾರಣ ಹಳೆಯ ಸ್ಟಾಕ್​ಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಮುಂದಾಗಿದ್ದಾರೆ. ದುಬಾರಿ ಬೆಲೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ತಿಂಗಳು ಒಂದು ಕೆಜಿ‌ ಅಕ್ಕಿಯ ಬೆಲೆ 50 ರೂ. ಇತ್ತು. ಈ ತಿಂಗಳು ಬರೋಬ್ಬರಿ 65 ರೂ.ಗೆ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಇನ್ನು ಬೇಳೆಕಾಳು 185 ರೂ ಇತ್ತು. ಈ ತಿಂಗಳು 170 ರಿಂದ 180 ಇದೆ. ತೊಗರಿ‌ ಬೇಳೆ ಕಳೆದ ತಿಂಗಳು 160 ರೂ ಇತ್ತು. ಈ ತಿಂಗಳು ಬರೋಬ್ಬರಿ 170 ರಿಂದ 180 ರೂ ಆಗಿದೆ. ಉದ್ದಿನ ಬೇಳೆ ಕಳೆದ ತಿಂಗಳು 130 ರೂ ಇತ್ತು. ಈ ತಿಂಗಳು 145 ರೂ. ಆಗಿದೆ. ಹೆಸರು ಬೇಳೆ ಕಳೆದ ತಿಂಗಳು 120 ರೂ ಇತ್ತು. ಈ ತಿಂಗಳು 150 ರಿಂದ 160 ರೂ ಜಾಸ್ತಿಯಾಗಿದೆ. ಜೀರಿಗೆ ಕೆಜಿಗೆ 500 ರೂ ಆಗಿದೆ. ರಾಗಿ ಕೆಜಿಗೆ ಕಳೆದ ತಿಂಗಳು 35 ರೂ ಇತ್ತು. ಈ ತಿಂಗಳು 45 ರೂ ಆಗಿದೆ.

ಇದನ್ನೂ ಓದಿ: ಕೊರೋನಾ ಜೆಎನ್.1 ಭೀತಿ: ಕರ್ನಾಟಕ-ಗೋವಾ ಗಡಿಭಾಗದಲ್ಲಿ ಇಲ್ಲ ಚೆಕ್​ಪೋಸ್ಟ್​ಗಳು, ನಿರ್ಬಂಧವಿಲ್ಲದೆ ಜನ ಓಡಾಟ!

ಕಡ್ಲೇಬೇಳೆ ಕಳೆದ ತಿಂಗಳು 85 ರೂ ಇತ್ತು. ಈ ತಿಂಗಳು 95 ರೂ ಇದೆ. ಇನ್ನು ಕಡ್ಳೆಕಾಳು 85 ರೂ ಇತ್ತು. ಈ ತಿಂಗಳು 95 ರೂ ಆಗಿದೆ. ಇನ್ನು ಬಟಾಣಿ ಕೆಜಿ 90 ರೂ ಇತ್ತು. ಈಗ 120 ರೂ ಆಗಿದೆ. ಗೋಧಿ ಕೆಜಿ 35 ರೂಪಾಯಿ ಇತ್ತು. ಇದೀಗಾ 45 ರೂ ಆಗಿದೆ. ರಾಜ್ ಮುಡಿ ಅಕ್ಕಿ 60 ರೂ ಇತ್ತು. ಈ ತಿಂಗಳು 95 ರೂಪಾಯಿ ಆಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ