Gruha Jyothi Scheme: ಗೃಹಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಕೆಗೆ ಆರಂಭಿಕ ವಿಘ್ನ, ಸರ್ವರ್ ಫುಲ್ ಬ್ಯುಸಿ

200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಜುಲೈ 1 ರಿಂದ ಗ್ಯಾರಂಟಿ ಜಾರಿಯಾಗಲಿದ್ದು, ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಇಂದಿನಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ರೆ, ಆರಂಭಿಕ ವಿಷ್ನ ಎದುರಾಗಿದೆ.

Gruha Jyothi Scheme: ಗೃಹಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಕೆಗೆ ಆರಂಭಿಕ ವಿಘ್ನ, ಸರ್ವರ್ ಫುಲ್ ಬ್ಯುಸಿ
Follow us
ರಮೇಶ್ ಬಿ. ಜವಳಗೇರಾ
|

Updated on:Jun 18, 2023 | 1:07 PM

ಬೆಂಗಳೂರು: ಫ್ರೀ ಬಸ್ ಪ್ರಯಾಣದ ಗ್ಯಾರಂಟಿ ಜಾರಿ ಮೂಲಕ ಮಹಿಳೆಯರನ್ನ ಖುಷಿ ಪಡಿಸಿರುವ ಸರ್ಕಾರ, ಇದೀಗ ಮತ್ತೊಂದು ಗ್ಯಾರಂಟಿ ಜಾರಿಯಾಗಿದೆ 200 ಯೂನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ(Gruha Jyothi) ಯೋಜನೆಯ ಲಾಭ ಪಡೆಯಲು, ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದ್ರೆ, ಗೃಹಜ್ಯೋತಿ ಯೋಜನೆ ಅಡಿ ಅರ್ಜಿ ಸಲ್ಲಿಕೆಗೆ ಆರಂಭಿಕ ವಿಘ್ನ ಎದುರಾಗಿದೆ. ಪೋರ್ಟಲ್​​ ಓಪನ್ ಆದ ಕೆಲವೇ ಸಮಯದಲ್ಲಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಬೆಸ್ಕಾಂ ಪ್ರಾದೇಶಿಕ ಕಚೇರಿಯಲ್ಲಿ ವೆಬ್​​ಸೈಟ್ ಕ್ಲೋಸ್​ ಆಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಸೇವಾಸಿಂಧು ಸರ್ವರ್​ ಬ್ಯುಸಿ ಎಂದು ತೋರಿಸುತ್ತಿದೆ. ಇದರಿಂದ ಅರ್ಜಿ ಸಲ್ಲಿಕೆ ಸ್ಥಗಿತವಾಗಿದ್ದು, ಕಾದು ಕುಳಿತಿದ್ದ ಸಾರ್ವಜನಿಕರು ಅಧಿಕಾರಿಗಳ ವಿರುದ್ದ ಆಕ್ರೋಶಗೊಂಡಿದ್ದಾರೆ.

ಇದನ್ನೂ ಓದಿ: ಫ್ರೀ ವಿದ್ಯುತ್​ಗಾಗಿ 2.14 ಕೋಟಿ ಅರ್ಜಿದಾರರು ಕೇವಲ 20 ದಿನಗಳಲ್ಲಿ ಅರ್ಜಿ ಸಲ್ಲಿಸೋಕೆ ಸಾಧ್ಯನಾ? ಟೆಕ್ನಿಕಲ್ ಎಕ್ಸ್​ಪರ್ಟ್ಸ್​ ಹೇಳುವುದೇನು?  

ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳಲು ಜನ ಅರ್ಜಿ ಸಲ್ಲಿಸಲು ಇಂದು ಬೆಳಗ್ಗೆಯಿಂದ ಕಾದು ಕುಳಿತುಕೊಂಡಿದ್ದರು. ಆದ್ರೆ, ಇದೀಗ ಬೆಂಗಳೂರು ಒನ್, ಬೆಸ್ಕಾಂ ಆಫೀಸ್ ಗಳಲ್ಲಿ ಸರ್ವಾರ್ ಡೌನ್ ಆಗಿದ್ದು, ಅರ್ಜಿ ಹಾಕಲು ಬಂದಿದ್ದ ಜನರು ಜನರು ಕಾದು ಕಾದು ಸುಸ್ತಾಗಿದ್ದಾರೆ. ವಿಲ್ಸನ್ ಗಾರ್ಡಾನ್​ನಲ್ಲಿರುವ ಬೆಂಗಳೂರು ಒನ್ ಕೇಂದ್ರದಲ್ಲೂ ಸಹ ಜನ ಅರ್ಜಿ ಸಲ್ಲಿಸಲು ಕಾದು ಕುಳಿತ್ತಿದ್ದಾರೆ. ಇನ್ನು  ಮಧ್ಯಾಹ್ನವಾದರೂ ಗೃಹಜ್ಯೋತಿ ವೆಬ್ ಸೈಟ್ ಓಪನ್ ಆಗುತ್ತಿಲ್ಲ. ಇದರಿಂದ ಅರ್ಜಿ ಹಾಕುವುದಕ್ಕೆ ಬಂದಿದ್ದ ಕೆಲವು ಜನರು ವಾಪಾಸ್ ಹೋಗುತ್ತಿದ್ದಾರೆ.

ಈಗಾಗಲೇ ಉಚಿತ ಪ್ರಯಾಣದ ಗ್ಯಾರಂಟಿ ಜಾರಿ ಮಾಡಿರುವ ಸರ್ಕಾರ ಇದೀಗ ಜುಲೈ 1 ರಿಂದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ  ಗೃಹಜ್ಯೋತಿ ಗ್ಯಾರಂಟಿ ಜಾರಿ ಮಾಡಲಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಇಂದಿನಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ರೆ, ಅರ್ಜಿ ಸಲ್ಲಿಕೆ ಆರಂಭವಾದ ದಿನದಂದೇ ಸರ್ವರ್ ಸಮಸ್ಯೆ ಎದುರಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಸೇವಾ ಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. www.sevasindhugs.karnataka.gov.in ವೆಬ್​ಸೈಟ್​​ಗೆ ಲಾಗಿನ್ ಆಗಬೇಕಿದ್ದು. ಮೊಬೈಲ್, ಕಂಪ್ಯೂಟರ್, ಲ್ಯಾಪ್​ಟಾಪ್​ನಲ್ಲೂ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ವಿದ್ಯುತ್​ ಕಚೇರಿಗಳಲ್ಲೂ ನೋಂದಾಯಿಸಬಹುದು. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಆರ್​ಆರ್ ನಂಬರ್, ಮೊಬೈಲ್ ಸಂಖ್ಯೆ ಹಾಗೂ ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಗೊಂದಲ ನಿವಾರಿಸಲು ಸಹಾಯವಾಣಿಯನ್ನೂ ತೆರೆಯಲಾಗಿದ್ದು, 1912 ಕ್ಕೆ ಕರೆ ಮಾಡಿ ಮಾತನಾಡಬಹುದಾಗಿದೆ.

ಬಾಡಿಗೆ ಮನೆಯವರಿಗೂ ಫ್ರೀ ವಿದ್ಯುತ್

ಬಾಡಿಗೆ ಮನೆಯಲ್ಲಿದ್ದವರಿಗೂ ಯೋಜನೆ ಅನ್ವಯಿಸುತ್ತಾ ಎನ್ನುವ ಗೊಂದಲ ಇತ್ತು. ಇದಕ್ಕೆ ಉತ್ತರ ನೀಡಿರುವ ಬೆಸ್ಕಾಂಗ್, ಬಾಡಿಗೆ ಮನೆ ವಿಳಾಸ ಮತ್ತು ಆರ್​ಆರ್ ಸಂಖ್ಯೆಯನ್ನ ಸೇವಾ ಸಿಂಧು ಪೋರ್ಟಲ್​ನಲ್ಲಿ ನೋಂದಾಯಿಸಿ ಯೋಜನೆ ಲಾಭ ಪಡೆಯಬಹುದು ಎಂದು ಹೇಳಿದೆ. ಇನ್ನು ಯಾವುದಾದರೂ ಒಂದು ತಿಂಗಳಲ್ಲಿ 200 ಯೂನಿಟ್​ಗಿಂತ ಹೆಚ್ಚಾಗಿ ವಿದ್ಯುತ್ ಬಳಸಿದ್ರೆ ಏನ್ ಮಾಡಬೇಕು ಅನ್ನೋ ಗೊಂದಲ ಇತ್ತು. ಅದಕ್ಕೂ ಪರಿಹಾರ ನೀಡಿರುವ ಬೆಸ್ಕಾಂ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ ಪಾವತಿಸಿ ಯೋಜನೆಯಲ್ಲಿ ಮುಂದುವರಿಬಹುದು ಎಂದು ತಿಳಿಸಿದೆ.

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರಿಗೂ ಯೋಜನೆ ಅನ್ವಯ

ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರಿಗೆ ಯೋಜನೆ ಅನ್ವಯಿಸುತ್ತಾ ಅನ್ನೋ ಪ್ರಶ್ನೆ ಇತ್ತು. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರಿಗೆ, ಸರ್ಕಾರವೇ 53 ಯೂನಿಟ್ ವರೆಗೆ ಉಚಿತ ಸರಾಸರಿಯನ್ನ ನೀಡ್ತಿದ್ದು, 53 ಯೂನಿಟ್ ವರೆಗೆ ಫ್ರೀ ವಿದ್ಯುತ್ ಸಿಗಲಿದೆ.

2022-23ರಲ್ಲಿ, ಯಾರಾದರೂ ಒಂದು ವರ್ಷಕ್ಕಿಂತ ಕಡಿಮೆ ಸಮಯ ಮನೆಯಲ್ಲಿದ್ದರೆ ಅವರಿಗೆ ಹೇಗೆ ಸರಾಸರಿ ಮಿತಿ ಕೊಡುತ್ತಾರೆ ಎನ್ನುವ ಗೊಂದಲ ಇತ್ತು. ಅದಕ್ಕೂ ಪರಿಹಾರ ನೀಡಿರುವ ಬೆಸ್ಕಾಂ, ವರ್ಷಕ್ಕಿಂತ ಕಡಿಮೆ ಸಮಯ ಮನೆಯಲ್ಲಿದ್ರೆ, ಸರ್ಕಾರ ನಿಗದಿ ಪಡಿಸಿರುವ 53 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗಲಿದೆ. ಇನ್ನು ಅಪಾರ್ಟ್​ಮೆಂಟ್​ಗಳಿಗೂ ಈ ಯೋಜನೆ ಅನ್ವಯಿಸಲಿದ್ದು, ಯಾವ ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಆ ಎಲ್ಲಾ ಮನೆಗಳಿಗೂ ಈ ಯೋಜನೆ ಅನ್ವಯಿಸಲಿದೆ ಅಂತಾ ಬೆಸ್ಕಾಂ ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನ ನಿಗದಿ ಮಾಡದೇ ಇರುವುದರಿಂದ ಸಾಕಷ್ಟು ಸಮಯ ಸಿಗಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:05 pm, Sun, 18 June 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ