ಬೆಂಗಳೂರು: ನಕಲಿ ಮರಣಪತ್ರ ಸೃಷ್ಟಿಸಿ ಆಸ್ತಿ ಕಬಳಿಸಿದ್ದವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಬ್ರಿಜಿಸ್ಟ್ರಾರ್ ಸೇರಿ ನಾಲ್ವರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. R.R.ನಗರ ಜನನ-ಮರಣ ಸಬ್ ಸಬ್ರಿಜಿಸ್ಟ್ರಾರ್ ನವೀನ್, ಪುಟ್ಟಮ್ಮ, ಪ್ರಸಾದ್.ಎಂ.ಎಸ್, ದಿವ್ಯಾ.ಎಂ.ಎಸ್. ಬಂಧಿತ ಆರೋಪಿಗಳು. ಪುಟ್ಟಮ್ಮ ಪುತ್ರರಾದ ಜನಾರ್ಧನ್, ಅಕ್ಷಿತ್ ವಿರುದ್ಧವೂ ಕೇಸ್ ದಾಖಲಾಗಿದೆ. ಒಟ್ಟು ಆರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಸಬ್ರಿಜಿಸ್ಟ್ರಾರ್ ನವೀನ್ ಸೇರಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಆರ್.ಆರ್ ನಗರ ಸಮೀಪದ ಪಟ್ಟಣಗೆರೆಯ 3 ಎಕರೆ ಜಮೀನು, ಕೋಟ್ಯಂತರ ಮೌಲ್ಯದ ಖಾಸಗಿ ಜಮೀನು ಕಬಳಿಕೆ ಸಂಚು ರೂಪಿಸಿ ನಕಲಿ ದಾಖಲೆ ಸೃಷ್ಟಿಸಿ ಪುಟ್ಟಮ್ಮ, ಪ್ರಸಾದ್.ಎಂ.ಎಸ್, ದಿವ್ಯಾ.ಎಂ.ಎಸ್. ಸೋದರರು ಜಾಗವನ್ನು ಕಬಳಿಸಿ ಕಬ್ಜಾ ಮಾಡಿಕೊಂಡಿದ್ದರು. ಟ್ರನ್ಕೋ ಇನ್ಫ್ರಾ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ದೋಖಾ ಮಾಡಿದ್ದು ಆರೋಪಿಗಳ ವಿರುದ್ಧ ವಿವಿಧ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿತ್ತು. ಸದ್ಯ ಈ ಸಂಬಂಧ ಹಲಸೂರು ಗೇಟ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ದಿನಕ್ಕೆ 5 ಸಾವಿರ ಸಾವು, 10 ಲಕ್ಷ ಮಂದಿಗೆ ಸೋಂಕು: ಜಗತ್ತಿನಾದ್ಯಂತ ತಲ್ಲಣ ಹುಟ್ಟಿಸುತ್ತಿದೆ ಚೀನಾದ ಕೊವಿಡ್ ಪರಿಸ್ಥಿತಿ
ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಲಸಿನಮರದದೊಡ್ಡಿ ಗ್ರಾಮದಲ್ಲಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗ್ರಾಮದ ಮೂರ್ತಿ(35) ಕೊಲೆಯಾದ ವ್ಯಕ್ತಿ. ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೊಲೆ ನಡೆದಿದೆ. ಹತ್ಯೆಗೆ ನಿಖರಕಾರಣ ತಿಳಿದುಬಂದಿಲ್ಲ. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:36 am, Fri, 23 December 22