ದೇವನಹಳ್ಳಿ ನ.08: ವಿಮಾನದಲ್ಲಿ (Airplane) ಸಹಪ್ರಯಾಣಿಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಂಗನಾಥ (50) ಕಿರುಕುಳ ನೀಡಿದ ಸಹಪ್ರಯಾಣಿಕ. ಸೋಮವಾರ (ನ.06) ರಂದು ರಾತ್ರಿ ಲುಪ್ತಾನ್ಸ ಏರ್ಲೈನ್ಸ್ನ LH 0754 ವಿಮಾನ ಪ್ರಾಂಕ್ಫರ್ಟ್ನಿಂದ ಬೆಂಗಳೂರಿಗೆ ಬರುತ್ತಿತ್ತು.
ಈ ವಿಮಾನದಲ್ಲಿ ಆಂದ್ರಪ್ರದೇಶದ ತಿರುಪತಿ ಮೂಲದ ಮಹಿಳೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಮಹಿಹಿಳೆ ವಿಮಾನದ ಸೀಟ್ ನಂ 38ಕೆಯಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಪ್ರಯಾಣ ಪ್ರಾರಂಭವಾದ ನಾಲ್ಕು ಗಂಟೆ ನಂತರ ಮಹಿಳೆ ನಿದ್ರೆಗೆ ಜಾರಿದ್ದಾರೆ. ರಾತ್ರಿ ಸುಮಾರು 11:45ಕ್ಕೆ ಮಹಿಳೆ ಎಚ್ಚರಗೊಂಡಾಗ ಸೀಟ್ ನಂ 38ಜೆನಲ್ಲಿ ಕುಳಿತಿದ್ದ ರಂಗನಾಥ್ ಅವರ ಖಾಸಗಿ ಅಂಗವನ್ನು ಮುಟ್ಟುತ್ತಿದ್ದನು.
ಇದನ್ನೂ ಓದಿ: ಬೆಂಗಳೂರಿನಿಂದ ಮ್ಯೂನಿಚ್‌ಗೆ ನೇರ ವಿಮಾನ ಸೇವೆ ಆರಂಭಿಸಿದ ಲುಫ್ಥಾನ್ಸ
ಆಗ ಮಹಿಳೆ ಆತನ ಕೈಯನ್ನು ತೆಗೆದು ಮತ್ತೆ ನಿದ್ರೆಗೆ ಜಾರಿದರು. ಬಳಿಕ ಮಧ್ಯರಾತ್ರಿ 12:00 ಗಂಟೆಗೆ ಮಹಿಳೆಗೆ ಎಚ್ಚರವಾದಾಗ ರಂಗನಾಥ ಮತ್ತೆ ಆಕೆಯ ಖಾಸಗಿ ಅಂಗವನ್ನು ಮುಟ್ಟುತ್ತಿದ್ದನು. ಈ ವೇಳೆ ಮಹಿಳೆ ರಂಗನಾಥ್ ಕೈಯನ್ನು ಎಳೆದು ವಿಮಾನ ಸಿಬ್ಬಂದಿಗಳನ್ನು ಕರೆದು ವಿಷಯ ತಿಳಿಸಿದ್ದಾರೆ. ಬಳಿಕ ಮಹಿಳೆ ಬೇರೆ ಸೀಟಿನಲ್ಲಿ ಹೋಗಿ ಕುಳಿತರು. ವಿಮಾನದಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ರಂಗನಾಥ್ ವಿರುದ್ಧ ದೂರು ದಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ