ಬೆಂಗಳೂರಿನಿಂದ ಮ್ಯೂನಿಚ್‌ಗೆ ನೇರ ವಿಮಾನ ಸೇವೆ ಆರಂಭಿಸಿದ ಲುಫ್ಥಾನ್ಸ

ಲುಫ್ಥಾನ್ಸ ಸಮೂಹವು ಬೆಂಗಳೂರಿನಿಂದ ಜರ್ಮನಿಯ ಬವೇರಿಯಾದ ರಾಜಧಾನಿ ಮ್ಯೂನಿಚ್‌ಗೆ ನವೆಂಬರ್ 4 ರಂದು ನೇರ ವಿಮಾನ ಸೇವೆಯನ್ನು ಆರಂಭಿಸಿತು. ಬೆಂಗಳೂರು ಲುಫ್ಥಾನ್ಸದ ನೇರ ವಿಮಾನಯಾನ ಹೊಂದಿರುವ ಭಾರತದ ಮೂರನೇ ನಗರವಾಗಿದೆ.

ಬೆಂಗಳೂರಿನಿಂದ ಮ್ಯೂನಿಚ್‌ಗೆ ನೇರ ವಿಮಾನ ಸೇವೆ ಆರಂಭಿಸಿದ ಲುಫ್ಥಾನ್ಸ
ಲುಫ್ಥಾನ್ಸ ವಿಮಾನಯಾನImage Credit source: Reuters file photo
Follow us
|

Updated on: Nov 07, 2023 | 6:58 AM

ಬೆಂಗಳೂರು, ನ.6: ಲುಫ್ಥಾನ್ಸ ಸಮೂಹವು ಬೆಂಗಳೂರಿನಿಂದ (Bengaluru) ಜರ್ಮನಿಯ ಬವೇರಿಯಾದ ರಾಜಧಾನಿ ಮ್ಯೂನಿಚ್‌ಗೆ ನವೆಂಬರ್ 4 ರಂದು ನೇರ ಸೇವೆಯನ್ನು ಪ್ರಾರಂಭಿಸಿತು. ಕೋವಿಡ್ ನಂತರದ ಲುಫ್ಥಾನ್ಸ (Lufthansa) ಗ್ರೂಪ್ ನೆಟ್‌ವರ್ಕ್‌ನಲ್ಲಿ ಬೆಂಗಳೂರನ್ನು ಮೊದಲ ತಾಣವಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ, ಬೆಂಗಳೂರು ಲುಫ್ಥಾನ್ಸದ ನೇರ ವಿಮಾನಯಾನ ಹೊಂದಿರುವ ಭಾರತದ ಮೂರನೇ ನಗರವಾಗಿದೆ. ಈಗಾಗಲೇ ದೆಹಲಿ ಮತ್ತು ಮುಂಬೈನಿಂದ ನೇರ ವಿಮಾನ ಸೇವೆ ನೀಡುತ್ತಿದೆ.

ಜನವರಿ 2024 ರ ವೇಳೆಗೆ ಭಾರತ ಮತ್ತು ಯುರೋಪ್ ನಡುವೆ ವಾರಕ್ಕೆ 64 ಆವರ್ತನಗಳನ್ನು ನಿರ್ವಹಿಸುವುದಾಗಿ ಗ್ರೂಪ್ ಹೇಳಿದೆ. “ಬೆಂಗಳೂರು-ಮ್ಯೂನಿಚ್ ಸೇವೆಯು ಭಾರತೀಯ ಮಾರುಕಟ್ಟೆಗೆ ಲುಫ್ಥಾನ್ಸದ ಬಲವಾದ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಲುಫ್ಥಾನ್ಸ ಗ್ರೂಪ್‌ನ ಸಾಮರ್ಥ್ಯವು ಈಗ ಕೋವಿಡ್-ಪೂರ್ವ ಮಟ್ಟವನ್ನು ಮೀರಿದೆ” ಎಂದು ಅದು ಹೇಳಿದೆ.

ಇದನ್ನೂ ಓದಿ: ಇಸ್ರೇಲ್-ಹಮಾಸ್ ಸಂಘರ್ಷ: ನವೆಂಬರ್​ 30ರವರೆಗೆ ಟೆಲ್ ಅವೀವ್​ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ ಏರ್​ ಇಂಡಿಯಾ

ಲುಫ್ಥಾನ್ಸ ಗ್ರೂಪ್‌ನ ಹಿರಿಯ ನಿರ್ದೇಶಕ – ದಕ್ಷಿಣ ಏಷ್ಯಾ, ಜಾರ್ಜ್ ಎಟ್ಟಿಯಿಲ್ ಪ್ರಕಾರ, “ನಾವು ಭಾರತದಲ್ಲಿ 90 ವರ್ಷಗಳಿಗೂ ಹೆಚ್ಚು ಕಾಲ ಹೂಡಿಕೆ ಮಾಡಿದ್ದೇವೆ ಮತ್ತು ಸಾಂಕ್ರಾಮಿಕ ರೋಗದ ನಂತರ ನಮ್ಮ ಮೊದಲ ಹೊಸ APAC ಗಮ್ಯಸ್ಥಾನವನ್ನು ಹುಡುಕುತ್ತಿರುವಾಗ, ನೈಸರ್ಗಿಕವಾಗಿ ಹೊಂದಿಕೊಳ್ಳುವ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಪ್ರಸ್ತುತ ವಾರಕ್ಕೆ ಮೂರು ಬಾರಿ ಕಾರ್ಯನಿರ್ವಹಿಸುತ್ತಿದ್ದು, ಲುಫ್ಥಾನ್ಸ ಅತಿಥಿಗಳು ಅತ್ಯಂತ ಆಧುನಿಕ ಮತ್ತು ಇಂಧನ-ಸಮರ್ಥ ದೀರ್ಘ-ಪ್ರಯಾಣದ ವಿಮಾನಗಳಲ್ಲಿ ಒಂದಾದ Airbus A350-900 ನಲ್ಲಿ ತಮ್ಮ ಅನುಭವವನ್ನು ಆನಂದಿಸುತ್ತಾರೆ ಎಂದು ಗ್ರೂಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ