ಶಾಲಾ ಪಠ್ಯ ಪುಸ್ತಕ ‘ಪಕ್ಷ ಪುಸ್ತಕ’ಗಳನ್ನಾಗಿ ಮಾಡುವುದಕ್ಕೆ ನನ್ನ ಧಿಕ್ಕಾರವಿದೆ, ನನ್ನ ಜತೆ ಮೈತ್ರಿ ಸರ್ಕಾರ ಮಾಡಿದಾಗ ಇದಕ್ಕೆ ಅವಕಾಶ ಕೊಡಲಿಲ್ಲ- ಹೆಚ್ ​ಡಿ ಕುಮಾರಸ್ವಾಮಿ ಗರಂ

HD Kumaraswamy: ಶಾಲಾ ಪಠ್ಯಪುಸ್ತಕಗಳನ್ನು ‘ಪಕ್ಷಪುಸ್ತಕ’ಗಳನ್ನಾಗಿ ಮಾಡುವುದಕ್ಕೆ ನನ್ನ ಧಿಕ್ಕಾರವಿದೆ. ರಾಜ್ಯ ಸರ್ಕಾರದ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ ಎಂದು ಹೆಚ್​ಡಿಕೆ ಕಿಡಿಕಾರಿದ್ದಾರೆ. ಜೊತೆಗೆ, ನನ್ನ ಜತೆ ಮೈತ್ರಿ ಸರ್ಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ ಎಂಬ ಮಾತನ್ನೂ ಹೇಳಿದ್ದಾರೆ. #ಪಠ್ಯಪುಸ್ತಕ_ಪಕ್ಷಪುಸ್ತಕ ಎಂಬ ಹ್ಯಾಷ್​ ಟ್ಯಾಗ್​ ಬಳಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಶಾಲಾ ಪಠ್ಯ ಪುಸ್ತಕ ‘ಪಕ್ಷ ಪುಸ್ತಕ’ಗಳನ್ನಾಗಿ ಮಾಡುವುದಕ್ಕೆ ನನ್ನ ಧಿಕ್ಕಾರವಿದೆ, ನನ್ನ ಜತೆ ಮೈತ್ರಿ ಸರ್ಕಾರ ಮಾಡಿದಾಗ ಇದಕ್ಕೆ ಅವಕಾಶ ಕೊಡಲಿಲ್ಲ-  ಹೆಚ್ ​ಡಿ ಕುಮಾರಸ್ವಾಮಿ ಗರಂ
ಎಚ್.ಡಿ.ಕುಮಾರಸ್ವಾಮಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 17, 2022 | 2:56 PM

ಬೆಂಗಳೂರು: ಕರ್ನಾಟಕ ಸರ್ಕಾರ ಹಾಲಿ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಕೆಲ ಶಾಲಾ ಪಠ್ಯಪುಸ್ತಕಗಳಿಂದ ಕೆಲ ವಿಷಯ ಕೈಬಿಟ್ಟು, ಕೆಲವು ಸೇರಿಸಿ, ಕೆಲವನ್ನು ಮೊಟಕುಗೊಳಿಸಿರುವ ವಿಚಾರಕ್ಕೆ (karnataka school syllabus revision) ಸಂಬಂಧಪಟ್ಟಂತೆ ಪ್ರತಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ (HD Kumaraswamy) ಅವರು ಟ್ವೀಟ್ ಮೂಲಕ (Tweet) ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶಾಲಾ ಪಠ್ಯಪುಸ್ತಕಗಳನ್ನು ‘ಪಕ್ಷಪುಸ್ತಕ’ಗಳನ್ನಾಗಿ ಮಾಡುವುದಕ್ಕೆ ನನ್ನ ಧಿಕ್ಕಾರವಿದೆ. ರಾಜ್ಯ ಸರ್ಕಾರದ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ ಎಂದು ಹೆಚ್​ಡಿಕೆ ಕಿಡಿಕಾರಿದ್ದಾರೆ. ಜೊತೆಗೆ, ನನ್ನ ಜತೆ ಮೈತ್ರಿ ಸರ್ಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ ಎಂಬ ಮಾತನ್ನೂ ಹೇಳಿದ್ದಾರೆ. #ಪಠ್ಯಪುಸ್ತಕ_ಪಕ್ಷಪುಸ್ತಕ ಎಂಬ ಹ್ಯಾಷ್​ ಟ್ಯಾಗ್​ ಬಳಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳ ಟಾರ್ಗೆಟ್‌. ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದಾಗಿದೆ. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನಿಲ್ಲ. ನನ್ನ ಜತೆ ಮೈತ್ರಿ ಸರ್ಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ಸ್ವಘೋಷಿತ ಡೋಂಗಿ ರಾಷ್ಟ್ರಭಕ್ತರು ಇನ್ನೇನು ಮಾಡಲು ಸಾಧ್ಯ? ‘ಆಪರೇಷನ್‌ ಕಮಲ’ದ ಅನೈತಿಕ ಮಾರ್ಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಕ್ರಾಂತಿಕಾರಿ ಭಗತ್‌ ಸಿಂಗ್‌ ಕುರಿತ ವಿಷಯಕ್ಕೆ ಕೊಕ್‌ ಕೊಟ್ಟಿದ್ದಾರೆ. RSS ಸಂಸ್ಥಾಪಕ ಹೆಡ್ಗೆವಾರ್‌ ಕುರಿತ ಮಾಹಿತಿ ಅಳವಡಿಸುತ್ತಿದ್ದಾರೆ. ಇದು ಬಿಜೆಪಿ ಮತ್ತವರ ಪಟಾಲಂ ವಿಕೃತಿಯ ಪರಾಕಾಷ್ಠೆಯಾಗಿದೆ ಎಂದಿದ್ದಾರೆ ಹೆಚ್​ಡಿಕೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ ಟ್ವೀಟ್ ಸಾರಾಂಶ ಹೀಗಿದೆ; ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದು. 1/7 #ಪಠ್ಯಪುಸ್ತಕ_ಪಕ್ಷಪುಸ್ತಕ

ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜತೆ ಮೈತ್ರಿ ಸರಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ʼಆಪರೇಷನ್‌ ಕಮಲʼದ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ʼಸ್ವಘೋಷಿತ ಡೋಂಗಿ ರಾಷ್ಟ್ರಭಕ್ತರುʼ ಇನ್ನೇನು ಮಾಡಲು ಸಾಧ್ಯ? 2/7 #ಪಠ್ಯಪುಸ್ತಕ_ಪಕ್ಷಪುಸ್ತಕ

ಮಹಾನ್‌ ರಾಷ್ಟ್ರಪ್ರೇಮಿ, ಬ್ರಿಟೀಷರಿಗೆ ಸಿಂಹಸ್ವಪ್ನ, ಭಾರತಮಾತೆಯ ಹೆಮ್ಮೆಯ ಪುತ್ರ ಸರ್ದಾರ್‌ ಭಗತ್‌ ಸಿಂಗ್‌ ಅವರ ಪಠ್ಯಕ್ಕೆ ಕೊಕ್‌ ಕೊಟ್ಟು, ಆರೆಸ್ಸೆಸ್‌ ಸಂಸ್ಥಾಪಕ ಹೆಡಗೇವಾರ್‌ ಕುರಿತ ಮಾಹಿತಿಯನ್ನು ಪಠ್ಯಕ್ಕೆ ತುರುಕುತ್ತಿರುವ ಬಿಜೆಪಿ ಮತ್ತವರ ಪಟಾಲಂ ವಿಕೃತಿಗೆ ಇದು ಪರಾಕಾಷ್ಠೆ. 3/7 #ಪಠ್ಯಪುಸ್ತಕ_ಪಕ್ಷಪುಸ್ತಕ

ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Tue, 17 May 22