ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಸುತ್ತಮುತ್ತ ಪೊಲೀಸ್​ ರೌಂಡ್ಸ್

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು ಇತ್ತೀಚೆಗೆ ಡಿಕೆ ಶಿವಕುಮಾರ್, ಕಾಂಗ್ರೆಸ್ ವಿರುದ್ಧ ಪದೇ ಪದೇ ಆರೋಪಗಳನ್ನು ಮಾಡುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು, ಇತರರು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್​ ವಾರ್ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಹೆಚ್​ಡಿಕೆಗೆ ವ್ಯಂಗ್ಯವಾಡಿದ ಪೋಸ್ಟರ್​ಗಳು ಗೋಡೆಗಳ ಮೇಲೆ ರಾರಾಜಿಸುತ್ತಿವೆ.

ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್ ವಾರ್, ಜೆಡಿಎಸ್ ಕಚೇರಿ ಸುತ್ತಮುತ್ತ ಪೊಲೀಸ್​ ರೌಂಡ್ಸ್
ಹೆಚ್​ಡಿ ಕುಮಾರಸ್ವಾಮಿ ಪೋಸ್ಟರ್
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Nov 21, 2023 | 9:10 AM

ಬೆಂಗಳೂರು, ನ.21: ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ (HD Kumaraswamy) ವಿರುದ್ಧ ಮತ್ತೆ ಪೋಸ್ಟರ್ ವಾರ್ ಶುರುವಾಗಿದೆ. ಇತ್ತೀಚೆಗೆ ಹೆಚ್​ಡಿ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿದ್ದರು. ಜೊತೆಗೆ ಹೆಚ್​ಡಿಕೆಯ ಹೇಳಿಕೆಗೆ ಕೆರಳಿದ ದುಷ್ಕರ್ಮಿಗಳು ಸಿನಿಮಾ ಮಾದರಿಯ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದ್ದಾರೆ. ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್  (Poster) ಅಂಟಿಸಿ ಆಕ್ರೋಶ ಹೊರ ಹಾಕಿದ್ದಾರೆ. ಗೋಡೆಗಳ ಮೇಲೆ ಅಂಟಿಸಲಾಗಿದ್ದ ಪೋಸ್ಟರ್​ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಮಾಹಿತಿ ಬಂದ ಕೂಡಲೇ ಪೊಲೀಸರು ಹುಡುಕಾಟ ನಡೆಸಿದ್ದು ಎಲ್ಲೂ ಕೂಡ ಪೋಸ್ಟರ್ಸ್ ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.

ಪೋಸ್ಟರ್​ನಲ್ಲಿ ಏನಿದೆ?

ಕರೆಂಟ್ ಕಳ್ಳ ಖ್ಯಾತಿಯ ಹೆಚ್​ಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್”. ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ. ಬರೀ ಟೀಸರ್​ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68000 ಎಂದು ಪೋಸ್ಟರ್​ನಲ್ಲಿ ವ್ಯಂಗ್ಯವಾಡಲಾಗಿದೆ.

ಹೆಚ್​ಡಿ ಕುಮಾರಸ್ವಾಮಿಯವರ ಯಾವ ಹೇಳಿಕೆಗೆ ಆಕ್ರೋಶ?

ಇನ್ನು ಇತ್ತೀಚೆಗೆ ತಮ್ಮ ವಿರುದ್ಧ ನಡೆಯುತ್ತಿರುವ ಪೋಸ್ಟರ್ ಅಭಿಯಾನಕ್ಕೆ ಡಿ.ಕೆ. ಶಿವಕುಮಾರ್ ಅವರೇ ಕಾರಣ ಎಂದು ಹೆಚ್​ಡಿ ಕುಮಾರಸ್ವಾಮಿಯವರು ಆರೋಪಿಸಿದ್ದರು. ಈ ವೇಳೆ “ನನ್ನ ವಿರುದ್ಧ ಪೋಸ್ಟರ್ ಅಭಿಯಾನ ಮಾಡುತ್ತಿರುವವರು ಹಿಂದೆ ಟೆಂಟ್ ಗಳಲ್ಲಿ ಬ್ಲೂ ಫಿಲಂ ಕನೆಕ್ಷನ್ ತೆಗೆದುಕೊಂಡು ಅಂಥ ಸಿನಿಮಾಗಳನ್ನು ಜನರಿಗೆ ತೋರಿಸಿಕೊಂಡು ಬಂದವರು. ಅಂಥವರಿಂದಲೇ ಇಂಥ ಪೋಸ್ಟರ್ ಅಭಿಯಾನ ನಡೆಯುತ್ತಿದೆ” ಎಂದು ಹೇಳಿದ್ದರು. ಇದರಿಂದ ಕೆರಳಿದ ಜನ ಮತ್ತೊಂದು ರೀತಿಯ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ. ಟೀಸರ್​ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಎನ್ನುವ ಪೋಸ್ಟರ್​ ಅಂಟಿಸುತ್ತಿದ್ದಾರೆ.

ಇದನ್ನೂ ಓದಿ: ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲ್ಮ್‌ ನಡೆಸುತ್ತಿದ್ರಲ್ಲಾ: ಮತ್ತೆ ಡಿಕೆ ಶಿವಕುಮಾರ್ ಗುಮ್ಮಿದ ಹೆಚ್​ಡಿ ಕುಮಾರಸ್ವಾಮಿ

ಜೆಡಿಎಸ್ ಕೇಂದ್ರ ಕಚೇರಿ ಬಳಿ ಪೊಲೀಸರಿಂದ ನಿರಂತರ ರೌಂಡ್ಸ್

ಜೆಡಿಎಸ್ ಕೇಂದ್ರ ಕಚೇರಿ ಬಳಿ ಪೊಲೀಸರು ನಿರಂತರ ರೌಂಡ್ಸ್ ಹಾಕುತ್ತಿದ್ದಾರೆ. ಎರಡು ಹೊಯ್ಸಳ ವಾಹನ ಗಸ್ತು ಹಾಕಲಾಗಿದೆ. ಕಚೇರಿ ಕಾಂಪೌಂಡ್ ಗೆ ಕಳೆದ 14 ರಂದು ಅವಹೇಳನಕಾರಿ ಪೋಸ್ಟರ್ ಅಂಟಿಸಲಾಗಿತ್ತು. ಕುಮಾರಸ್ವಾಮಿ ಅವರು ತಮ್ಮ ಜೆಪಿ ನಗರ ನಿವಾಸಕ್ಕೆ ಪಬ್ಲಿಕ್ ಲೈಟ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದಿದ್ದರು. ಹೀಗಾಗಿ ಲೇವಡಿ ಮಾಡಿ ಹೆಚ್​ಡಿ‌ ಕುಮಾರಸ್ವಾಮಿ ಕರೆಂಟ್ ಕಳ್ಳ ಎನ್ನುವ ಪೋಸ್ಟರ್ ಹಂಟಿಸಲಾಗಿತ್ತು. ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇದು ರಾಜಕೀಯ ವಾಕ್ ಸಮರಕ್ಕೆ ಕೂಡ ಕಾರಣವಾಗಿತ್ತು. ಈ ಕುರಿತು ‌ಕುಮಾರಸ್ವಾಮಿ ‌ಸ್ಪಷ್ಟನೆ ನೀಡಿ, ಇದು ಎಲೆಕ್ಟ್ರೀಷಿಯನ್ ಮಾಡಿದ‌ ತಪ್ಪು. ಇದರ ಬಗ್ಗೆ ವಿಷಾದವಿದೆ ದಂಡ ಕಟ್ಟುತ್ತೇನೆ ಎಂದು ಹೇಳಿದ್ದರು. ಬೆಸ್ಕಾಂ ಅಧಿಕಾರಿಗಳು ಪರಿಶೀಲನೆ ಕೂಡ ಮಾಡಿ ದಂಡ ವಿಧಿಸಿದ್ದರು. ಈಗ ಹೆಚ್​ಡಿಕೆಯ ಮತ್ತೊಂದು ಹೇಳಿಕೆಯಿಂದಾಗಿ ಮತ್ತೊಂದು ಪೋಸ್ಟರ್​ ಅಂಟಿಸಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮಹಾರಾಷ್ಟ್ರ ನೂತನ ಸಿಎಂ ಪದಗ್ರಹಣ ಸಮಾರಂಭದ ನೇರಪ್ರಸಾರ
ಮಹಾರಾಷ್ಟ್ರ ನೂತನ ಸಿಎಂ ಪದಗ್ರಹಣ ಸಮಾರಂಭದ ನೇರಪ್ರಸಾರ
ಭಾಷಣದಲ್ಲಿ ದಿವಂಗತ ಡಾ ರಾಜ್​ಕುಮಾರ್​​ರನ್ನು ನೆನೆದ ಸಿಎಂ ಸಿದ್ದರಾಮಯ್ಯ
ಭಾಷಣದಲ್ಲಿ ದಿವಂಗತ ಡಾ ರಾಜ್​ಕುಮಾರ್​​ರನ್ನು ನೆನೆದ ಸಿಎಂ ಸಿದ್ದರಾಮಯ್ಯ
ರಜತ್​ಗೆ ಮಂಜಣ್ಣನ ಮೇಲೆ ಎಲ್ಲಿಲ್ಲದ ಪ್ರೀತಿ, ಕೊಟ್ಟೇ ಬಿಟ್ಟ ಮುತ್ತು
ರಜತ್​ಗೆ ಮಂಜಣ್ಣನ ಮೇಲೆ ಎಲ್ಲಿಲ್ಲದ ಪ್ರೀತಿ, ಕೊಟ್ಟೇ ಬಿಟ್ಟ ಮುತ್ತು
ಕುಮಾರಸ್ವಾಮಿಯವರ ಕುಟುಂಬವನ್ನು ಟಾರ್ಗೆಟ್ ಮಾಡಲು ಜನಕಲ್ಯಾಣ ಸಮಾವೇಶ?
ಕುಮಾರಸ್ವಾಮಿಯವರ ಕುಟುಂಬವನ್ನು ಟಾರ್ಗೆಟ್ ಮಾಡಲು ಜನಕಲ್ಯಾಣ ಸಮಾವೇಶ?
‘ಮೋದಿ ಅದಾನಿ ಒಂದೇ’ ಜಾಕೆಟ್‌ ಧರಿಸಿ ಸಂಸತ್ ಹೊರಗೆ ಇಂಡಿಯಾ ಬಣ ಪ್ರತಿಭಟನೆ
‘ಮೋದಿ ಅದಾನಿ ಒಂದೇ’ ಜಾಕೆಟ್‌ ಧರಿಸಿ ಸಂಸತ್ ಹೊರಗೆ ಇಂಡಿಯಾ ಬಣ ಪ್ರತಿಭಟನೆ
ಈ ಬಂಡೆ ಸಿದ್ದರಾಮಯ್ಯ ಜತೆ ಇದೆ: ಸಿಎಂ ಅಭಿಮಾನಿಗಳಿಗೆ ಡಿಕೆಶಿ ಅಭಯ
ಈ ಬಂಡೆ ಸಿದ್ದರಾಮಯ್ಯ ಜತೆ ಇದೆ: ಸಿಎಂ ಅಭಿಮಾನಿಗಳಿಗೆ ಡಿಕೆಶಿ ಅಭಯ
ಚೈತ್ರಾಗೆ ಹುಚ್ಚು ಜಾಸ್ತಿ ಆಗುತ್ತಿದೆ: ಮುಲಾಜಿಲ್ಲದೇ ಹೇಳಿದ ರಜತ್​
ಚೈತ್ರಾಗೆ ಹುಚ್ಚು ಜಾಸ್ತಿ ಆಗುತ್ತಿದೆ: ಮುಲಾಜಿಲ್ಲದೇ ಹೇಳಿದ ರಜತ್​
ನಾಗನ ಕಟ್ಟೆಗೆ ನುಗ್ಗಿ ದಾಂಧಲೆ ನಡೆಸಿದ ಮುಸ್ಲಿಂ ಯುವಕ, ಮುಂದೇನಾಯ್ತು..?
ನಾಗನ ಕಟ್ಟೆಗೆ ನುಗ್ಗಿ ದಾಂಧಲೆ ನಡೆಸಿದ ಮುಸ್ಲಿಂ ಯುವಕ, ಮುಂದೇನಾಯ್ತು..?
ವಿಡಿಯೋ: ‘ಪುಷ್ಪ 2’ ನೋಡಿ ತಗ್ಗೋದೆ ಇಲ್ಲ ಎಂದ ಅಭಿಮಾನಿಗಳು
ವಿಡಿಯೋ: ‘ಪುಷ್ಪ 2’ ನೋಡಿ ತಗ್ಗೋದೆ ಇಲ್ಲ ಎಂದ ಅಭಿಮಾನಿಗಳು
ನಟ ವಿನೋದ್ ರಾಜ್ ಅವರು ತಾಯಿ ನೆನಪಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇದರ
ನಟ ವಿನೋದ್ ರಾಜ್ ಅವರು ತಾಯಿ ನೆನಪಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಇದರ