ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ನಂಬಿಕೆ ಮೂಡಿಸುವಲ್ಲಿ ವಿಫಲ: ಹೆಚ್ಡಿ ಕುಮಾರಸ್ವಾಮಿ
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆದವು. ಆಗಲೇ ಪ್ರಧಾನಿ ಎಚ್ಚೆತ್ತುಕೊಂಡಿದ್ದರೆ ಅನಾಹುತ ಆಗ್ತಿರಲಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳದ ಹಿನ್ನೆಲೆ ರೈತರು ಪ್ರಾಣ ಕಳಕೊಂಡ್ರು ಎಂದು ಬೆಂಗಳೂರಿನಲ್ಲಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಕೇಂದ್ರದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆದಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು (ನವೆಂಬರ್ 19) ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತರಲ್ಲಿ ನಂಬಿಕೆ ಮೂಡಿಸುವಲ್ಲಿ ವಿಫಲ ಆಗಿದ್ದಾರೆ. ಚುನಾವಣಾ ಲಾಭ ನಷ್ಟದ ಹಿನ್ನೆಲೆ ಸರ್ಕಾರದಿಂದ ಹೀಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಜ್ಞರ ಅಭಿಪ್ರಾಯವನ್ನೂ ಕೇಂದ್ರ ಸರ್ಕಾರ ಪಡೆದಿಲ್ಲ. ರೈತರನ್ನೂ ಕರೆಯದೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ಕೇಂದ್ರ ರೈತರಲ್ಲಿ ನಂಬಿಕೆ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
5 ರಾಜ್ಯಗಳ ಚುನಾವಣೆ ಮುಂದಿಟ್ಟುಕೊಂಡು ಈ ಕೆಲಸ ಮಾಡಲಾಗಿದೆ. ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಮಾಡಿರಬಹುದು. ಯಾಕಂದ್ರೆ ರೈತರ ಹೋರಾಟ ಹೆಚ್ಚು ಮಾಡಿದ್ದೆ ಉತ್ತರ ಪ್ರದೇಶದಲ್ಲಿ. ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆದವು. ಆಗಲೇ ಪ್ರಧಾನಿ ಎಚ್ಚೆತ್ತುಕೊಂಡಿದ್ದರೆ ಅನಾಹುತ ಆಗ್ತಿರಲಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳದ ಹಿನ್ನೆಲೆ ರೈತರು ಪ್ರಾಣ ಕಳಕೊಂಡ್ರು ಎಂದು ಬೆಂಗಳೂರಿನಲ್ಲಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಗೋಶಾಲೆಗಳನ್ನು ತೆಗೆಯುವುದಾಗಿ ಸರ್ಕಾರ ಹೇಳಿದೆ. ಆದರೆ ಈವರೆಗೂ ಒಂದು ಗೋಶಾಲೆಯನ್ನೂ ತೆರೆದಿಲ್ಲ. ಸುಮ್ಮನೆ ಶಂಖ ಊದಿಕೊಂಡು ಹೋಗುವುದಲ್ಲ. ಮೊದಲು ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಬಿಜೆಪಿಯಿಂದ ಕೆಲವರು ವಾಪಸ್ ಬರುತ್ತಾರೆಂಬ ವಿಚಾರವಾಗಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಬಹಳ ಅಚ್ಚರಿ ಏನೂ ಇಲ್ಲ. ಮುಂದಿನ ದಿನಗಳಲ್ಲಿ ಬಹುತೇಕರು ವಾಪಸ್ ಬರಬಹುದು ಎಂದು ಹೇಳಿದ್ದಾರೆ.
ದಿನೇಶ್ ಗೂಳಿಗೌಡಗೆ ಪರಿಷತ್ ಕಾಂಗ್ರೆಸ್ ಟಿಕೆಟ್ ಹಿನ್ನೆಲೆ ಕಾಂಗ್ರೆಸ್ ನಾಯಕರ ನಡೆಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರ ಆಪ್ತ ಸಹಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಈಗ ಕಾಂಗ್ರೆಸ್ ಬಿಜೆಪಿಯ ಸಿ ಟೀಂ ಅನ್ನೋದನ್ನು ಹೇಳಬೇಕು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ರೈತರ ಹೋರಾಟದ ಪರ ಇರುತ್ತೆ: ಡಿಕೆ ಶಿವಕುಮಾರ್ ರೈತರ ಹೋರಾಟಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ. ಕಾಂಗ್ರೆಸ್ ಪಕ್ಷ ರೈತರ ಹೋರಾಟದ ಪರ ಇರುತ್ತೆ. ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟದಲ್ಲಿ ಹಲವು ರೈತರು ಮೃತಪಟ್ಟಿದ್ದಾರೆ. ಅವರನ್ನು ಹುತಾತ್ಮರು ಎಂದು ಘೋಷಣೆ ಮಾಡಬೇಕು. ಮೃತ ರೈತರ ಕುಟುಂಬಕ್ಕೆ 5 ಎಕರೆ ಜಮೀನು ನೀಡಬೇಕು. ರೈತರನ್ನು ದಲ್ಲಾಳಿಗಳು, ದೇಶದ್ರೋಹಿಗಳು ಎಂದು ಕರೆದರು. ಅದನ್ನು ನನ್ನ ಬಾಯಿಂದ ಹೇಳುವುದಕ್ಕೆ ಕಷ್ಟವಾಗುತ್ತಿದೆ ಎಂದು ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Farmers Laws ರೈತರ ಆಂದೋಲನ ತಕ್ಷಣ ಹಿಂಪಡೆಯುವುದಿಲ್ಲ, ಸಂಸತ್ನಲ್ಲಿ ಕೃಷಿ ಕಾನೂನು ರದ್ದಾಗಲಿ: ರಾಕೇಶ್ ಟಿಕಾಯತ್