ಬೆಂಗಳೂರು: ಹೆಚ್ಡಿ ಕುಮಾರಸ್ವಾಮಿ ಹಾಗೂ ಬಿಕೆ ಹರಿಪ್ರಸಾದ್ ಹೇಳಿಕೆಗೆ ಶ್ರೀರಾಮ್ ಸೇನೆಯ ಗಂಗಾಧರ್ ಕುಲಕರ್ಣಿ ಕಿಡಿಕಾರಿದ್ದಾರೆ. ಕುಮಾರಸ್ವಾಮಿಯವರಿಗೆ ಮತಿಬ್ರಮಣೆಯಾಗಿ ಹುಚ್ಚು ಹಿಡಿದಿದೆ. ಅವರಿಗೆ ರಾಜಕೀಯ ಜೀವನ ಮುಗಿದಿದೆ ಅಂತ ಗೊತ್ತಾಗಿದೆ. ಹೀಗಾಗಿ ಹೇಗಾದ್ರು ಜೊಲ್ಲು ಸುರಿಸಿ ಮುಸಲ್ಮಾನರ ಓಟ್ ತೆಗೆದುಕೊಳ್ಳಬೇಕು ಅಂತ ತುಷ್ಟಿಕರಣ ಮಾಡ್ತಾ ಇದ್ದಾರೆ ಎಂದು ಗಂಗಾಧರ್ ಕುಲಕರ್ಣಿ, ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಡಿಜೆಹಳ್ಳಿ ಕೆಜಿಹಳ್ಳಿಯಲ್ಲಿ ಮುಸ್ಲಿಮರು ಬೆಂಕಿ ಹಾಕಿದಾಗ, ಒಬ್ಬ ಶಾಸಕನ ಮನೆಗೆ ಬೆಂಕಿ ಹಾಕಿದಾಗ ಅವರು ಬಾಯಲ್ಲಿ ಕಡಬು ಇಟ್ಟುಕೊಂಡಿದ್ರ. ಅವರನ್ನ ಒದ್ದು ಒಳಗೆ ಹಾಕಿ ಅಂತ ಹೇಳೋದಿಕ್ಕೆ ಆಗ್ಲಿಲ್ಲ. ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಹಾಗೂ ಪೊಲೀಸರ ಮೇಲೆ ದಾಳಿ ಮಾಡಿದವರನ್ನ ಪೊಲೀಸ್ ಕಮಿಷನರ್ ಜೀಪ್ ಮೇಲೆ ಹತ್ತಿ ನಿಂತವರನ್ನ ಊರಿನಿಂದ ಹೊರಗೆ ಹಾಕಿ ಅಂತ ಹೇಳುವ ದಮ್, ಗಡ್ಸ್ ಇರ್ಲಿಲ್ಲ. ಇವತ್ತು ಪ್ರಮೋದ್ ಮುತಾಲಿಕ್ ರಂತಹ ದೇಶಭಕ್ತರನ್ನ ಅವಮಾನ ಮಾಡ್ತಿರಾ? ನಿಮಗೆ ರಾಜ್ಯದಲ್ಲಿ ಏನ್ ಯೋಗ್ಯತೆ ಇದೆ. ತಮ್ಮ ಅಸ್ತಿತ್ವವನ್ನ ಉಳಿಸಿಕೊಳ್ಳುವುದಕ್ಕೆ ಈ ರೀತಿ ಅವಮಾನ ಮಾಡಿರೋದು ಅಕ್ಷಮ್ಯ ಅಪರಾಧ ಮುಂದೊಂದು ದಿನ ಇದಕ್ಕೆ ಬೆಲೆ ತರಬೇಕಾಗುತ್ತೆ. ಇನ್ಮುಂದೆ ರಾಜ್ಯದಲ್ಲಿ ಎಲ್ಲೆಲ್ಲಿ ಪ್ರವಾಸ ಕೈಗೊಳ್ಳುತ್ತಾರೋ ಅಲ್ಲಿ ವಿಚಿತ್ರವಾದ ಸ್ವಾಗತವನ್ನ ಅನುಭವಿಸುತ್ತಾರೆ ಎಂದರು.
ಸುಪ್ರೀಂ ಕೋರ್ಟ್ ಆದೇಶದ ನಿಯಮವಳಿಗಳನ್ನ ಪಾಲನೆ ಮಾಡಿ ಎನ್ನುವುದು ಯಾಕೆ ಕಾನೂನು ಉಲ್ಲಂಘನೆಯಾಗುತ್ತೆ. ಮೈಕ್ಗಳನ್ನ ತೆಗೆಯಿರಿ ಎಂದ್ರೆ ಯಾಕೆ ನಿಮಗೆ ಉರಿಯುತ್ತೆ. ಭಯೋತ್ಪಾದಕರನ್ನ ಮೆಚ್ಚಿಸುವ ಸಲುವಾಗಿ ದೇಶ ಭಕ್ತರಿಗೆ ಅವಮಾನ ಮಾಡ್ತಾ ಇದ್ದಿರಾ. ಬೆಲೆ ಏರಿಕೆಯ ಬಗ್ಗೆ ಪ್ರಶ್ನೆ ಮಾಡುವುದರ ಬದಲು ನಿವೇನ್ ಮಲ್ಕೊಂಡಿದಿರಾ, ನಿವೇನು ಬಾಯಲ್ಲಿ ಕಡಬು ಇಟ್ಕೊಂಡಿದಿರಾ. ಒಂದು ಸಾರಿ ಕಾಂಗ್ರೆಸ್ ಪರವಾಗಿ, ಮತ್ತೊಂದು ಬಾರಿ ಬಿಜೆಪಿ ಪರವಾಗಿ ಮಾತನಾಡ್ತೀರಾ. ಎಲ್ಲಿ ಅಧಿಕಾರ ಸಿಗುತ್ತದೆಯೋ ಅಂತ ಜೊಲ್ಲು ಸುರಿಸಿಕೊಂಡು ನಾಯಿಗಳ ರೀತಿ ಓಡಾಡ್ತಾ ಇದಿರಾ. ನೀವು ನಮ್ಮ ಬಗ್ಗೆ ಮಾತಾಡ್ತಿರಾ. ಶ್ರೀರಾಮಾ ಸೇನೆ ರಾಜಕೀಯ ಪಕ್ಷ ಅಲ್ಲ. ದೇಶವನ್ನ, ಧರ್ಮವನ್ನ, ಸಂವಿಧಾನವನ್ನ ಉಳಿಸುವುದಕ್ಕೆ ಹೋರಾಟ ಮಾಡ್ತಾ ಇದ್ದೀವಿ. ಬಿಜೆಪಿ ಕಾಂಗ್ರೆಸ್ ಜೊತೆ ಅರ್ಥವಿಲ್ಲದ ಹೊಂದಾಣಿಕೆ ಮಾಡಿಕೊಂಡು ಬೆಲೆಯನ್ನ ಕಳೆದುಕೊಂಡು ಹತಾಷರಾಗಿದ್ದೀರಿ. ಒಂದು ಸರಿ ನಿಮ್ಯಾನ್ಸ್ ನಲ್ಲಿ ಚೆಕ್ ಮಾಡಿಸಿಕೊಳ್ಳಿ. ಅಮೇಲೆ ಮುಂದೆ ಮಾತಾಡಿರಂತೆ ಎಂದು ಹೆಚ್ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರೆಲ್ಲ ಬಿಕೆ ಹರಿಪ್ರಸಾದ್ ಅವರ ಬೀಗರು ಅನ್ಸುತ್ತೆ. ಅವರ ಮನೆಯ ಮಕ್ಕಳು ಅನ್ಸುತ್ತೆ. ಪೊಲೀಸರನ್ನು ಹೊಡೆದಾಗ, ದಲಿತ ಶಾಸಕನ ಮನೆಗೆ ಬೆಂಕಿ ಬಿದ್ದಾಗಾ ಒಂದು ಮಾತು ಆಡ್ಲಿಲ್ಲ. ಬಿಕೆ ಹರಿಪ್ರಸಾದ್ ಅವರು ಬೇಕೋಫ್ ಹೇಳಿಕೆ ಕೊಡ್ತಾ ಇರುದನ್ನ ನೋಡಿದ್ರೆ ಮುಂದೆ ರಾಜಕೀಯದಲ್ಲಿ ತಮ್ಮ ಸ್ಥಾನವನ್ನ ಕಳೆದುಕೊಳ್ಳಲಿದ್ದಾರೆ. ಕಾನೂನುಗಳನ್ನ ಪಾಲಿಸಿ ಅಂತ ಹೇಳ್ತಿಲ್ಲ ಅವ್ರು. ಸುಪ್ರೀಂ ಕೋರ್ಟ್ ಗಳ ನಿಯಮವಳಿಗಳನ್ನ ಪಾಲನೆ ಮಾಡಿ ಅಂತ ಹೇಳುವ ಗಂಡುಸ್ತನ ಇಲ್ಲ. ಇವರು ಭಯೋತ್ಪಾದಕರ ಪೋಷಕರು ಎಂದು ಶ್ರೀರಾಮ್ ಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕುಮಾರಸ್ವಾಮಿ ಮಾತನಾಡುವಾಗ ಯೋಚನೆ ಮಾಡಬೇಕು
ಪ್ರಮೋದ್ ಮುತಾಲಿಕ್ ಅಂತವರನ್ನು ಒದ್ದು ಒಳಗೆ ಹಾಕಿ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಭಜನೆ ಮಾಡಿದರೆ ಸುಪ್ರಭಾತ ಹಾಕಿದರೆ ಯಾರಿಗೆ ತೊಂದರೆ. ಇದಕ್ಕೆ ಯಾಕೆ ಒಳಗೆ ಹಾಕಬೇಕು ಅನ್ನೋದು ಅರ್ಥವಾಗುತ್ತಿಲ್ಲ. ಕುಮಾರಸ್ವಾಮಿ ಹುಚ್ಚರಿದ್ದಾರೆ ಅವರ ಹೇಳಿಕೆ ಬಾಲಿಶ. ಕುಮಾರಸ್ವಾಮಿ ಮಾತನಾಡುವಾಗ ಯೋಚನೆ ಮಾಡಬೇಕು. ಅವರು ಹಿರಿಯರಿದ್ದಾರೆ ಏನೇನೋ ಮಾತನಾಡಿದರೆ ಮುಸ್ಲಿಮರು ಮತ ಹಾಕುವುದಿಲ್ಲ. ನೀವು ಮುಸ್ಲಿಮರಿಗೆ ಹೇಳುವ ಧೈರ್ಯ ತೋರಿಸಿ. ನೀವು ಅವರಿಗೆ ಹೇಳುವುದಿಲ್ಲ ಹಿಂದೂ ಸಮಾಜದ ಮೇಲೆ ಅಪವಾದ ಹಾಕುತ್ತೀರಾ. ಚುನಾವಣೆ ಹತ್ತಿರ ಬಂದಾಗ ಇದನ್ನು ಜಾಸ್ತಿ ಮಾಡುತ್ತೀರಾ. ಆರ್ಎಸ್ಎಸ್ ವಿಶ್ವ ಹಿಂದೂ ಪರಿಷತ್‌ನ್ನು ಬೈತೀರಾ. ನಮ್ಮನ್ನು ರಾವಣ ಸೇನೆ ಅಂತೀರಾ ಆದರೆ ನಾವು ರಾವಣ ಸೇನೆ ಆಗುವುದಿಲ್ಲ. ಆರ್ಎಸ್ಎಸ್ಗೂ ಕೆಟ್ಟ ಹೆಸರು ಬರುವುದಿಲ್ಲ. ನಾವು ಧರ್ಮದ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ದೇಶದ ಕೆಲಸ ಸತ್ಯದ ಕೆಲಸ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಸ್ವಲ್ಪ ಅವಲೋಕನ ಮಾಡಿಕೊಳ್ಳಿ. ಇಬ್ರಾಹಿಮ್ ಬಂದ ತಕ್ಷಣ ಎಲ್ಲಾ ಮುಸ್ಲಿಂ ಮತಗಳು ಬರುವುದಿಲ್ಲ. ಇಬ್ರಾಹಿಂ ಒಬ್ಬ ದ್ರೋಹಿ ಫಟಿಂಗಾ. ಹಿಂದೂಗಳ ಮೇಲೆ ಅಪವಾದ ಮಾಡುವುದನ್ನು ನಿಲ್ಲಿಸಬೇಕು ಎಂದು ಮೈಸೂರಿನಲ್ಲಿ ಕುಮಾರಸ್ವಾಮಿಗೆ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಇನ್ನು ಮತ್ತೊಂದೆಡೆ ಸುಪ್ರಭಾತ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ. ಅವರಿಗೆ ಭಯೋತ್ಪಾದನೆ, ಭಯೋತ್ಪಾದಕ ಪದದ ಅರ್ಥ ಗೊತ್ತಿಲ್ಲ. ಬಿ.ಕೆ.ಹರಿಪ್ರಸಾದ್ ಒಮ್ಮೆ ಪಾಕ್, ಆಫ್ಘನ್ಗೆ ಹೋಗಿ ಬರಲಿ. ಆಗ ಅವರಿಗೆ ಭಯೋತ್ಪಾದನೆ ಅಂದ್ರೆ ಏನು ಅಂತ ಗೊತ್ತಾಗುತ್ತೆ ಎಂದು ಗರಂ ಆಗಿದ್ದಾರೆ. ನಾವು ದೇವಸ್ಥಾನದಲ್ಲಿ ಶಾಂತಿಯುತವಾಗಿ ಯಾರಿಗೂ ತೊಂದರೆ ಕೊಡದೆ ಅಭಿಯಾನ ಮಾಡಿದ್ದೇವೆ. ಇದು ಭಯೋತ್ಪಾದನೆನಾ? ಬಿಕೆ ಹರಿಪ್ರಸಾದ್ ಏತಕ್ಕೆ ಮಾತನಾಡುತ್ತಿದ್ದಾರೆ ಅಂತಾ ಗೊತ್ತಿದೆ. ಮುಸ್ಲಿಮರಿಗೆ ಹೇಳದೆ ಹಿಂದೂಗಳ ಮೇಲೆ ಅಪವಾದ. ಇದನ್ನು ಕಾಂಗ್ರೆಸ್‌ನವರು ಸ್ವಾತಂತ್ರ್ಯ ಬಂದಾಗಿನಿಂದಲೂ ಇದನ್ನೇ ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಮೂಲೆ ಗುಂಪಾಗಿದೆ ಕಸದ ತೊಟ್ಟಿಯಲ್ಲಿ ಬಿದ್ದಿದೆ ಎಂದರು.
Published On - 8:24 pm, Mon, 9 May 22