AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀರಾವೇಶದ ಹೇಳಿಕೆಗಳಿಂದ ಇಂತಹ ಕೃತ್ಯ ತಡೆಯಲಾಗಲ್ಲ, ಮತ್ತೊಂದಕ್ಕೆ ಅವಕಾಶ ಕೊಡಬೇಡಿ -ಹೆಚ್​ಡಿ ಕುಮಾರಸ್ವಾಮಿ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಕೊಲೆಗಳಾಗಿವೆ? ಕಾಂಗ್ರೆಸ್ ಅವಧಿಯಲ್ಲೂ ಎಷ್ಟು ಕೊಲೆಗಳು ನಡೆದಿವೆ. ನಾಡಿನ ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ.

ವೀರಾವೇಶದ ಹೇಳಿಕೆಗಳಿಂದ ಇಂತಹ ಕೃತ್ಯ ತಡೆಯಲಾಗಲ್ಲ, ಮತ್ತೊಂದಕ್ಕೆ ಅವಕಾಶ ಕೊಡಬೇಡಿ -ಹೆಚ್​ಡಿ ಕುಮಾರಸ್ವಾಮಿ
ಹೆ್ಚ್ ಡಿ ಕುಮಾರಸ್ವಾಮಿ
TV9 Web
| Updated By: ಆಯೇಷಾ ಬಾನು|

Updated on:Jul 27, 2022 | 4:42 PM

Share

ಬೆಂಗಳೂರು: ವೀರಾವೇಶದಿಂದ ನೀಡುವ ಹೇಳಿಕೆಗಳಿಂದ ಇಂತಹ ಕೃತ್ಯ ತಡೆಯಲಾಗಲ್ಲ. ನಾಡಿನಲ್ಲಿ ಶಾಂತಿ ವಾತಾವರಣ ಸೃಷ್ಟಿಸಬೇಕು. ಮತ್ತೊಂದು ಹತ್ಯೆಯಾಗುವಂತಹ ಅವಕಾಶ ನೀಡಬೇಡಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸುದ್ದಿಗೋಷ್ಠಿ ನಡೆಸಿದ್ದು ಈ ವೇಳೆ ಬಿಜೆಪಿ(BJP), ಕಾಂಗ್ರೆಸ್(Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಜನರಿಗೆ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.

ವೀರಾವೇಶದಿಂದ ಹೇಳಿಕೆಗಳಿಂದ ಇಂತಹ ಕೃತ್ಯ ತಡೆಯಲಾಗಲ್ಲ. ಮತ್ತೊಂದು ಹತ್ಯೆಯಾಗುವಂತಹ ಅವಕಾಶ ನೀಡಬೇಡಿ. ಎಲ್ಲ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾಡಿನಲ್ಲಿ ಶಾಂತಿ ವಾತಾವರಣ ಸೃಷ್ಟಿಸಬೇಕು. ಇಂತಹ ಕೃತ್ಯಗಳನ್ನು ತಡೆಯುವಂಥ ಉತ್ಸವಗಳು ನಡೆಯಲಿ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಕೊಲೆಗಳಾಗಿವೆ? ಕಾಂಗ್ರೆಸ್ ಅವಧಿಯಲ್ಲೂ ಎಷ್ಟು ಕೊಲೆಗಳು ನಡೆದಿವೆ. ನಾಡಿನ ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ. ಜನರು ನಿರ್ಭೀತಿಯಿಂದ ಓಡಾಡುವ ವಾತಾವರಣ ನಿರ್ಮಿಸಿ. ಆ ತಾಯಿ ನನ್ನ ಮಗನ ಜೀವ ಕೊಡಿ ಅಂತಿದ್ದಾರೆ. ನಾವು ಆ ಕುಟುಂಬದ ಭಾವನೆ ಅರ್ಥ ಮಾಡಿಕೊಳ್ಳಬೇಕು ರಾಜಕಾರಣಿಗಳು ಸಾವಿನ‌ ನಂತರ ಸಾಂತ್ವಾನ, ಪರಿಹಾರ ಕೊಡೋದ್ರಿಂದ ಮತ್ತೆ ಜೀವ ವಾಪಸ್ ತರಲು ಆಗಲ್ಲ. ರಾಜಕಾರಣಿಗಳ, ಶ್ರೀಮಂತರ ಸಾವು ಆಗಲ್ಲ ಆದರೆ ಅಮಾಯಕರು ಬಲಿ ಆಗ್ತಾರೆ. ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಆದಾಗ ಸರ್ಕಾರವೇ ಆ ಕುಟುಂಬದ ಮನೆಗೆ ಹೋಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದಾದ ನಂತರ ಸರಣಿ ಸಾವು ಆಗ್ತಾ ಇದ್ದಾವೆ. ಬಡತನದ ರೇಖೆಗಿಂದ ಹಿಂದುಳಿದವರ ಸಾವು ಆಗುತ್ತಿದೆ. ಮೊನ್ನೆ ಇನ್ನೊಂದು ಧರ್ಮದ ಹತ್ಯೆಯಾಗಿದೆ. ಈ ಘಟನೆಗಳಾದಾಗ ಮುಂಜಾಗ್ರತಾ ಕ್ರಮ ವಹಿಸಬೇಕು. ಹತ್ಯೆಯಾದಾಗ ಸಂತಾಪ ಸೂಚಿಸುವುದಕ್ಕಿಂತ ಅದು ಆಗೋದಿಕ್ಕೂ ಮುನ್ನ ಎಚ್ವೆತ್ತುಕೊಳ್ಳಬೇಕು. ಎಲ್ಲಾ ಧರ್ಮದ ಸಂಘಟನೆ, ಧಾರ್ಮಿಕ ಗುರುಗಳ ಸಭೆ ಮಾಡಿ. ಯಾಕೆ ಈ ರೀತಿ ಸಂಘರ್ಷ ಆಗ್ತಾ ಇದೆ? ಯಾಕೆ ಸಾವು ನೋವು ಆಗ್ತಾ ಇದ್ದಾವೆ? ಎಂದು ಚರ್ಚಿಸಿ. ಶಾಂತಿಯ ತೋಟ ಕಾಪಾಡಬೇಕಾಗಿದೆ. ಇಂಥ ನಾಡಿನ ಇತಿಹಾಸವನ್ನು ಹಾಳು ಮಾಡೋದು ಬೇಡ ಎಂದರು.

ಇನ್ನು ಟ್ವೀಟ್ ಮೂಲಕವೂ ಹೆಚ್​ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದರು.

Published On - 4:33 pm, Wed, 27 July 22