ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಕೇರಳದಲ್ಲೂ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ – ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರವೀಣ್ ಹತ್ಯೆ ಘಟನೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇವೆ. ಪ್ರವೀಣ್ ಅಂತ್ಯಕ್ರಿಯೆ ನೆರವೇರಿದೆ. ಪ್ರಕರಣ ಸಂಬಂಧ ಏನೆಲ್ಲ ಬೆಳವಣಿಗೆಯಾಗಿದೆ ಅದನ್ನ ಪ್ರವೀಣ್ ಸೂದ್ ವಿವರಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದೇವೆ.

ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಕೇರಳದಲ್ಲೂ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ - ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
TV9kannada Web Team

| Edited By: Ayesha Banu

Jul 27, 2022 | 4:08 PM

ಬೆಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು(Praveen Nettar) ಬರ್ಬರ ಕೊಲೆಯಾಗಿದೆ. ಭೀಕರ ಹತ್ಯೆಗೆ ಕರಾವಳಿ ಕಾದ ಕೆಂಡದಂತಾಗಿದೆ. ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಸದ್ಯ ನೆಟ್ಟಾರು ಗ್ರಾಮದಲ್ಲಿ ಪ್ರವೀಣ್ ನೆಟ್ಟಾರು ಅಂತ್ಯಸಂಸ್ಕಾರ ನೆರವೇರಿದೆ. ಮತ್ತೊಂದು ಕಡೆ ಘಟನೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಜೊತೆ ಸಿ.ಟಿ ರವಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಸಭೆ ನಡೆಸಿದ್ದಾರೆ. ಸಭೆಯ ವಿವರ ಇಲ್ಲಿದೆ.

ಪ್ರವೀಣ್ ಹತ್ಯೆ ಘಟನೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇವೆ. ಪ್ರವೀಣ್ ಅಂತ್ಯಕ್ರಿಯೆ ನೆರವೇರಿದೆ. ಪ್ರಕರಣ ಸಂಬಂಧ ಏನೆಲ್ಲ ಬೆಳವಣಿಗೆಯಾಗಿದೆ ಅದನ್ನ ಪ್ರವೀಣ್ ಸೂದ್ ವಿವರಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದೇವೆ. ಸದ್ಯ 10 ಜನರನ್ನ ವಶಕ್ಕೆ ಪಡೆದಿದ್ದಾರೆ. ಕೇರಳಕ್ಕೆ ತೆರಳಿ ಸಹ ಸರ್ಚ್ ಮಾಡುತ್ತಿದ್ದಾರೆ. ಇವು ಸಡನ್ನಾಗಿ ನಡೆಯುವಂತಹ ಕೃತ್ಯಗಳು. ಈ ತರಹದ ಘಟನೆ ನಡೆದಾಗ ಯಾವ ಕೇಸ್ ಸಹ ಬಿಟ್ಟಿಲ್ಲ. ಹಿಂದಿನ ಸರ್ಕಾರದಲ್ಲಿ ಕೆಲವು ಕೇಸ್ ತನಿಖೆ ಆಯ್ತು, ಕೆಲವು ತನಿಖೆ ಮಾಡಲಿಲ್ಲ. ನಮ್ಮ ಸರ್ಕಾರದಲ್ಲಿ ನಡೆದ ಎಲ್ಲವೂ ತನಿಖೆ ನಡೆಸುತ್ತಿದ್ದೇವೆ. ಕರಾವಳಿಯಲ್ಲಿ ಕೇರಳದಿಂದ ಬರುವವರು ಹೆಚ್ಚಾಗುತ್ತಿದ್ದಾರೆ. ಕೇರಳ ಸರ್ಕಾರದ ಜೊತೆ ನಮ್ಮ ಡಿಜಿ ಮಾತನಾಡಿದ್ದಾರೆ. ಜಂಟಿಯಾಗಿ ಕಾರ್ಯಚರಣೆ ಮಾಡುತ್ತೇವೆ. ಅಪಾರಧಿಗಳನ್ನ ಹಿಡಿದು ತರುವಲ್ಲಿ ನಮ್ಮ ಫೊಲೀಸರು ಸಫಲರಾಗ್ತಾರೆ ಎಂದು ತಿಳಿಸಿದರು.

ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರು ಆಕ್ರೋಶ ಹೊರ ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಸಹಜ. ಅಮಾಯಕರ ಮೇಲೆ ಹತ್ಯೆಯಾದಾಗ ನೋವಾಗುತ್ತೆ. ಮನಸ್ಸು ಕಲಕುತ್ತೆ. ಸಿಟ್ಟು ಬರುತ್ತೆ. ಭಾವನೆಗಳು ಕೆದುಕುತ್ತವೆ. ಆರೋಪಿಗಳನ್ನ ಬಂಧಿಸಿದ ಮೇಲೆ ಆಕ್ರೋಶ ಕಡಿಮೆಯಾಗುತ್ತೆ ಎಂದರು.

ಯಾರು ಯಾರು ಭಾಗಿಯಾಗಿದ್ದಾರೆ ಅನ್ನೋದರ ಬಗ್ಗೆ ತನಿಖೆಯಾಗ್ತಿದೆ

ಸಿಎಂ ಜೊತೆ ಚರ್ಚೆ ಬಳಿಕ ಸಿ.ಟಿ. ರವಿ ಮಾತನಾಡಿದ್ದು, ನಿನ್ನೆ ನಡೆದ ಪ್ರವೀಣ್ ಹತ್ಯೆ ಸಂಬಂಧಿಸಿದಂತೆ ಗಂಭೀರ ಚರ್ಚೆ ಆಗಿದೆ. ಜೊತೆಗೆ ಈಗಾಗಲೇ ಶಂಕಿತರ ಬೆನ್ನು ಹತ್ತಿದ್ದಾರೆ. ಕೇರಳಕ್ಕೆ ಒಂದು ತಂಡ ಕಳಿಸಲಾಗಿದೆ. ಇಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಅನ್ನೋದರ ಬಗ್ಗೆ ತನಿಖೆಯಾಗ್ತಿದೆ. ಕೆಲವು ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ, ವಿಚಾರಣೆ ನಡೆಯುತ್ತಿದೆ. ಸ್ವತಃ ಸಿಎಂ, ಗೃಹ ಸಚಿವರೇ ಪ್ರವೀಣ್ ಹತ್ಯೆ ಪ್ರಕರಣವನ್ನ ನಿರ್ವಹಣೆ ಮಾಡ್ತಾ ಇದ್ದಾರೆ. ನನ್ನ ಮುಂದಯೇ ಅಧಿಕಾರಿಗಳ ಜೊತೆ ಮಾತಾಡಿದ್ದಾರೆ. ನಾನು ಉಳಿದ ವಿಷಯಗಳನ್ನು ಇಲ್ಲಿ ಹೇಳಿದ್ರೆ ಸರಿಯಾಗಲ್ಲ, ಉಳಿದ ವಿಚಾರಗಳನ್ನು ಅವ್ರು ಮಾತಾಡ್ತಾರೆ ಎಂದರು.

ಪ್ರವೀಣ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡುವ ಭರವಸೆ

ಸಂಘ ಪರಿವಾರ ಸಂಘಟನೆಗಳಿಂದ ಪ್ರವೀಣ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಸಂಘದ ಪ್ರಾಂತ ಉಸ್ತುವಾರಿ ನಾ.ಸೀತಾರಾಂ ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada