
ಬೆಂಗಳೂರು, ಸೆಪ್ಟೆಂಬರ್ 30: ಸುದ್ದಿಗೋಷ್ಠಿ ನಡೆಸಿ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ನ ಸಾಲು ಸಾಲು ಸಚಿವರು, ಶಾಸಕರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನೇರಾ ನೇರ ಕೌಂಟರ್ ಕೊಡಲು ಆರಂಭಿಸಿದ್ದಾರೆ. ಹೀಗಾಗಿ ಕಾಂಗ್ರೆಸಿಗರ ವಿರುದ್ಧ ಕಿಡಿ ಕಾರಿರುವ ಹೆಚ್ಡಿಕೆ, ಮುಖ್ಯಮಂತ್ರಿಗಳು ಸ್ವತಃ ನಡೆಸಿರುವ ಮತ್ತು ತಮ್ಮ ಇಡೀ ಕುಟುಂಬವನ್ನು ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ಅಕ್ಷರಶಃ ರುಜುವಾತಾಗಿದೆ. ಆದರೂ ಕೆಲ ಸೈಡ್ ವಿಂಗ್ ನಾಲಿಗೆಗಳು ವ್ಯರ್ಥ ಸಮರ್ಥನೆಗೆ ಇಳಿದಿವೆ. ಪಾಪ, ಅವಕ್ಕೆ ವಿದ್ಯೆಬುದ್ಧಿ ಗೊತ್ತಿಲ್ಲ. ದಾಖಲೆಗಳನ್ನು ಓದಿಕೊಳ್ಳುವ ಬೌದ್ಧಿಕ ಸಾಮರ್ಥ್ಯವು ಇಲ್ಲ. ಆದರೂ ಮಂತ್ರಿಗಳಾಗಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ದಾಖಲೆಗಳು ಸ್ಪಷ್ಟವಾಗಿವೆ, ಮುಖ್ಯಮಂತ್ರಿ @DKShivakumar ಸ್ವತಃ ನಡೆಸಿರುವ, ತಮ್ಮ ಇಡೀ ಕುಟುಂಬವನ್ನು ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ಅಕ್ಷರಶಃ ರುಜುವಾತಾಗಿದೆ. ಆದರೂ ಕೆಲ ಸೈಡ್ ವಿಂಗ್ ನಾಲಿಗೆಗಳು ವ್ಯರ್ಥ ಸಮರ್ಥನೆಗೆ ಇಳಿದಿವೆ. ಪಾಪ.. ಅವಕ್ಕೆ ವಿದ್ಯೆಬುದ್ಧಿ ಗೊತ್ತಿಲ್ಲ. ದಾಖಲೆಗಳನ್ನು…
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 30, 2026
ಅಕ್ರಮ ಸಂಪತ್ತು ಗಳಿಸಿದ ಸಿಎಂ ಸಾಹೇಬರನ್ನು ಸಮರ್ಥಿಸಿಕೊಳ್ಳದಿದ್ದರೆ ಸಂಪುಟದಲ್ಲಿ ಉಳಿಗಾಲವಿಲ್ಲ. ಆ ಭಯಕ್ಕೆ ಕಿರುಚುತ್ತಿದ್ದಾರೆ. ಹೆಚ್.ಡಿ.ದೇವೇಗೌಡರ ಕಾಲದಲ್ಲಿ ಏನಾಯ್ತು? ಜೆ.ಎಚ್.ಪಟೇಲರ ಕಾಲದಲ್ಲಿ ಏನಾಯ್ತು? ಆ ನಂತರ ಬಂದ ಆಕ್ಸ್ಫರ್ಡ್ ಯುನಿವರ್ಸಿಟಿ ಪದವೀಧರರ ಸರಕಾರದಲ್ಲಿ ಹಾಲಿ ಸಿಎಂ ಮಹಾಶಯ ನಗರಾಭಿವೃದ್ಧಿ ಸಚಿವರಾಗಿ, BMICPA ಅಧ್ಯಕ್ಷರಾಗಿ ಎಸಗಿರುವ ಅಕ್ರಮಗಳನ್ನು ದಾಖಲೆಗಳೇ ಸಾರಿ ಸಾರಿ ಹೇಳುತ್ತಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ತಾವು ಮಾಡಿದ್ದ ಆರೋಪಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕದ್ದು ಆಸ್ತಿ ಮಾಡಿಲ್ಲ, ಗೊಡ್ಡು ಬೆದರಿಕೆಗೆಲ್ಲ ಬಗ್ಗಲ್ಲ: ಕುಮಾರಸ್ವಾಮಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ತಿರುಗೇಟು
ಬೆಂಗಳೂರು-ಮೈಸೂರು ನಡುವೆ ಎಕ್ಸ್ಪ್ರೆಸ್ ಕಾರಿಡಾರ್ ಮಾಡುತ್ತೇವೆ ಎಂದು ಸಾರ್ವಜನಿಕರ ಭೂಮಿ ಕಿತ್ತುಕೊಂಡರು. ಆಮೇಲೆ ಅದರಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಲು ಶುರು ಮಾಡಿಕೊಂಡರು. ನೈಸ್ ಭೂಮಿ ಹಗರಣವು 2ಜಿ ಮತ್ತು ಕಲ್ಲಿದ್ದಲು ಹಗರಣವನ್ನು ಮೀರಿಸುವಂತಿದ್ದು, ಸುಮಾರು 3 ಲಕ್ಷ ಕೋಟಿಗೂ ಮೀರಿದ ದೇಶದ ಅತೀದೊಡ್ಡ ಹಗರಣವಾಗಿದೆ. ಹೀಗಾಗಿ ಸಿಬಿಐನಂತಹ ಉನ್ನತ ಸಂಸ್ಥೆಗಳಿಂದ ಈ ಅಕ್ರಮದ ತನಿಖೆ ಆಗಬೇಕು ಎಂದು ತಾನು ಒತ್ತಾಯಿಸುತ್ತೇನೆ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:05 pm, Wed, 30 September 26