Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಹೆಡ್​ ಕಾನ್ಸ್​ಟೇಬಲ್​; ಪಡೆದ ಹಣವೇಷ್ಟು ಗೊತ್ತಾ?

ಹೆಡ್​ ಕಾನ್ಸ್ಟೇಬಲ್​ ಕವೀಶ್ ಎಂಬಾತ  ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಇತ ಜಪ್ತಿ ಮಾಡಿದ್ದ ವಾಹನ ಬಿಡುಗಡೆಗೆ ಹಣವನ್ನು ಭೇಡಿಕೆಯಿಟ್ಟು, ಅದನ್ನು ಸ್ವೀಕರಿಸುತ್ತಿದ್ದ ವೇಳೆ  ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಿಡಿದಿದ್ದಾರೆ.

ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಹೆಡ್​ ಕಾನ್ಸ್​ಟೇಬಲ್​; ಪಡೆದ ಹಣವೇಷ್ಟು ಗೊತ್ತಾ?
ಬಲೆಗೆ ಬಿದ್ದ ಹೆಡ್​ಕಾನ್ಸ್​ಟೇಬಲ್​
Follow us
Prajwal Kumar NY
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 04, 2023 | 7:41 PM

ಬೆಂಗಳೂರು, ಅ.04: 20 ಸಾವಿರ ಲಂಚ(bribe) ಪಡೆಯುವಾಗ ಬೆಂಗಳೂರಿನ (Bengaluru) ಹನುಮಂತನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್‌(Head Constable) ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಹೌದು, ಹೆಡ್​ ಕಾನ್ಸ್ಟೇಬಲ್​ ಕವೀಶ್ ಎಂಬಾತ  ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಇತ ಜಪ್ತಿ ಮಾಡಿದ್ದ ವಾಹನ ಬಿಡುಗಡೆಗೆ ಹಣವನ್ನು ಭೇಡಿಕೆಯಿಟ್ಟು, ಅದನ್ನು ಸ್ವೀಕರಿಸುತ್ತಿದ್ದ ವೇಳೆ  ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಿಡಿದಿದ್ದಾರೆ. ಇನ್ನು ಈ ಕುರಿತು ಬೆಂಗಳೂರು ನಗರ ಲೋಕಾಯುಕ್ತ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.

ಲೋಕಾಯುಕ್ತ ಬಲೆಗೆ ಬಿದ್ದ ಪಂಚಾಯತ್​​ ಬಿಲ್​​ ಕಲೆಕ್ಟರ್​​

ಉತ್ತರ ಕನ್ನಡ: ಇನ್ನುಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾನ್ಮನೆ ಗ್ರಾಮ ಪಂಚಾಯತ್​ ಬಿಲ್​ ಕಲೆಕ್ಟರ್ ಕೃಷ್ಣಾನಂದ ನಾಯ್ಕ್ ಎಂಬಾತ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.​ ಇತ ಸಾರ್ವಜನಿಕರ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂಬ ಹಲವಾರು ದೂರುಗಳು ಬಂದಿದ್ದ ಬೆನ್ನಲ್ಲೆ ದಾಳಿ ಮಾಡಲಾಗಿದ್ದು, ಇಂದು(ಅ.4) ವ್ಯಕ್ತಿಯೋರ್ವನ ಬಳಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾ ಬಲೆಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ:ಕಾಲುವೆ ಅವ್ಯವಹಾರ: ಪೋಲಾದ ಸರ್ಕಾರದ ಕೋಟಿ ಕೋಟಿ ಹಣ, ಲೋಕಾಯುಕ್ತಕ್ಕೆ ಮೊರೆ ಹೋದ ರೈತ ಸೇನಾ ಅಧ್ಯಕ್ಷ

ಸೆ.26 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ಪುರಸಭೆ ಸಮುದಾಯ ವ್ಯವಹಾರ ಅಧಿಕಾರಿ ಆರ್.ನಾಗೇಂದ್ರ ಎಂಬುವವರು 1.20 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, 40,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ವಿಕಲಚೇತನರಿಗೆ ನೀಡಿದ್ದ ವಾಹನದ ಹಣ ಬಿಡುಗಡೆಗೆ ಹಾವೇರಿ ಮೂಲದ ಶಿವರಾಜ್ ಹೊಳ್ಳಾಲ್ ಎಂಬುವವರ ಹತ್ತಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಲೋಕಾಯುಕ್ತ ಡಿವೈಎಸ್​ಪಿ ಸುನೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇತನನ್ನು ಹಿಡಿಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ