ಬೆಂಗಳೂರು, ನ.04: ನಗರದ ಹಲವು ಕಡೆಗಳಲ್ಲಿ ಅಬ್ಬರದ ಮಳೆ(Rain)ಯಾಗಿದ್ದು, ವೈಟ್ ಫೀಲ್ಡ್(Whitefield) ಸುತ್ತಮುತ್ತ ಮಳೆಯಿಂದ ಅವ್ಯವಸ್ಥೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ರಸ್ತೆಯಲ್ಲಿ ನಿಂತ ನೀರಿನಿಂದ ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ನಗರದ ವರ್ತೂರು ಕೊಡಿ, ವರ್ತೂರು, ಪಣತ್ತೂರು ಸುತ್ತಮುತ್ತ ಸವಾರರ ಪರದಾಟ ನಡೆಸಿದ್ದು, ಈ ಹಿನ್ನಲೆ ವೈಟ್ ಫೀಲ್ಡ್ ಸಂಚಾರಿ ಹಾಗೂ ಎಚ್ಎಎಲ್ ಸಂಚಾರಿ ಪೊಲೀಸರು ‘ಬೈಕ್ ಸವಾರರು ಜಾಗೃತವಾಗಿ ತೆರಳುವಂತೆ ಟ್ವೀಟ್ ಮಾಡಿ ಸೂಚಿಸಿದ್ದಾರೆ.
‘Traffic Advisory ‘ Slow moving traffic due to Rain water logging at Nexus Whitefield ( forum Mall/ Manipal hospital Varthur)@CPBlr@Jointcptraffic @DCPTrEastBCP @acpwfieldtrf @blrcitytraffic @BBMPCares @ICCCBengaluru pic.twitter.com/YGB2EeLRR4
— WHITEFIELD TRAFFIC PS BTP (@wftrps) November 4, 2023
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಭಾರೀ ಮಳೆಯಾಗಿದ್ದು, ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಮಲ್ಲಸಂದ್ರ ಸೇರಿದಂತೆ ಹಲವು ಏರಿಯಾಗಳಲ್ಲಿ ಮಳೆಯಾಗಿದೆ. ಇನ್ನು ಬೆಳ್ಳಂದೂರಿನಿಂದ ಇಕೊ ಸ್ಪೋಸ್ ಮಾರ್ಗದಲ್ಲಿ ಮಳೆ ನೀರು ನಿಂತು, ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಸವಾರರ ಪರದಾಟ ನಡೆಸುವಂತಾಗಿತ್ತು. ಈ ವೇಳೆ ಸಂಚಾರಿ ಪೊಲೀಸರೇ ಸ್ವತಃ ನೀರು ಕ್ಲಿಯರ್ ಮಾಡುವ ಕೆಲಸಕ್ಕೆ ಮುಂದಾಗಿದ್ದರು.
ಇದನ್ನೂ ಓದಿ: ಅರ್ಧ ಗಂಟೆ ಸುರಿದ ಮಳೆಗೆ ಕೆರೆಯಂತಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನ ಸರ್ವೀಸ್ ರಸ್ತೆ
ರಾಮನಗರ: ಅರ್ಧ ತಾಸು ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಸರ್ವೀಸ್ ರಸ್ತೆ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೌದು, ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ತಾತಪ್ಪನ ದೊಡ್ಡಿ ಬಳಿ ಮಳೆ ನೀರು ನದಿಯಂತೆ ಹರಿಯುತ್ತಿದೆ. ಹೈವೇ ಚರಂಡಿ ಸರಿಯಾಗಿ ಕೆಲಸ ಮಾಡದ ಪರಿಣಾಮ ರಸ್ತೆಯಲ್ಲಿ ನೀರು ನಿಂತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Sat, 4 November 23