Heavy Rain: ಬೆಂಗಳೂರಿನಲ್ಲಿ ಮಳೆರಾಯಣ ಆರ್ಭಟ: ಗೃಹ ಪ್ರವೇಶದ ದಿನವೇ ಮನೆಗೆ ನುಗ್ಗಿದ ಮಳೆ ನೀರು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 31, 2022 | 10:19 AM

ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮೊನ್ನೆ, ನಿನ್ನೆ ಗಂಟೆಗೂ ಅಧಿಕ ಕಾಲ ಸುರಿದ ಮಳೆ ಡೋಣಿ ನದಿ ತಟದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

Heavy Rain: ಬೆಂಗಳೂರಿನಲ್ಲಿ ಮಳೆರಾಯಣ ಆರ್ಭಟ: ಗೃಹ ಪ್ರವೇಶದ ದಿನವೇ ಮನೆಗೆ ನುಗ್ಗಿದ ಮಳೆ ನೀರು
ಗೃಹ ಪ್ರವೇಶದ ದಿನವೇ ಮನೆಗೆ ನುಗ್ಗಿದ ಮಳೆ ನೀರು
Follow us on

ಬೆಂಗಳೂರು: ಗೃಹ ಪ್ರವೇಶದ ದಿನವೇ ಮನೆಗೆ ಮಳೆ (heavy Rain) ನೀರು ನುಗ್ಗಿದ್ದು, ಶಾಮಿಯಾನ ಹಾಕಿ ತಯಾರಿ ಮಾಡಿಕೊಂಡಿದ್ದವರಿಗೆ ಮಳೆರಾಯನ ಆರ್ಭಟ ಶಾಕ್ ನೀಡಿದೆ. ಯಲಚೇನಹಳ್ಳಿ ವಾರ್ಡ್​ನ ಕನಕನಗರದಲ್ಲಿ ಘಟನೆ ನಡೆದಿದೆ. ನಿನ್ನೆ ಸುರಿದ ಮಳೆಗೆ  ಭುಜದವರೆಗೆ ನೀರು ಬಂದಿತ್ತು. ಬಂಧು ಬಳಗದವರು ಅಕ್ಕಪಕ್ಕದವರ ಮನೆಯಲ್ಲಿದ್ದಾರೆ. 300 ಜನರಿಗೆ ಅಡುಗೆ ಮಾಡಿಸಿದ್ದು, ತಿಂದಿದ್ದು ಕೇವಲ 25 ಜನ ಅಷ್ಟೆ. ಮಾಡಿದ್ದ ಅಡುಗೆ ವ್ಯರ್ಥವಾಗಿದ್ದು, ವಾಹನಗಳಿಗೂ ಡ್ಯಾಮೇಜ್ ಆಗಿವೆ. ಈ ಕುರಿತು ಕನಕನಗರದ ನಿವಾಸಿಗಳು ಮಾತನಾಡಿದ್ದು, ಒಂದು ಲಕ್ಷ ಖರ್ಚು ಮಾಡಿ ಗೃಹಪ್ರವೇಶ ಮಾಡಿದ್ವಿ. ಎಲ್ಲವೂ ಮಳೆಯಿಂದ ಹಾಳಾಗಿ ಹೋಯ್ತು. ಮಾಡಿದ್ದ ಅಡುಗೆಯನ್ನ ತಿನ್ನೋಕೂ ಆಗಲಿಲ್ಲ. ಊಟದ ಟೇಬಲ್​ಗಳು ತೇಲುತ್ತಾ ಹೋಗ್ತಿದ್ವು. ನಿನ್ನೆ ಮಾಡಿದ್ದ ಅರೆಂಜ್ಮೆಂಟ್ಸ್ ಎಲ್ಲವೂ ಹಾಳಾಯ್ತು. ಚರಂಡಿ ವ್ಯವಸ್ಥಿತವಾಗಿ ಇಲ್ಲದ್ದಕ್ಕೆ ಹೀಗಾಗಿದೆ. ಯಾವ ಅಧಿಕಾರಿಗಳು, ಜನ ಪ್ರತಿನಿಧಿಗಳು ಬಂದಿಲ್ಲ. ಎಲೆಕ್ಷನ್ ಬಂದಾಗ ಅವ್ರು ಬರ್ತಾರೆ ಅಷ್ಟೇ ಎಂದು ಕನಕನಗರದ ನಿವಾಸಿಗಳು ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ: Bangalore Rain: ವರುಣಾರ್ಭಟಕ್ಕೆ ತತ್ತರಿಸಿದ ಬೆಂಗಳೂರು: ಮನೆಗಳಿಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು

ಡೋಣಿ ನದಿ ತಟದಲ್ಲಿ ಮತ್ತೆ ಪ್ರವಾಹ ಎದುರಾಗುವ ಭೀತಿ

ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮೊನ್ನೆ, ನಿನ್ನೆ ಗಂಟೆಗೂ ಅಧಿಕ ಕಾಲ ಸುರಿದ ಮಳೆ
ಡೋಣಿ ನದಿ ತಟದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ತಾಳಿಕೋಟೆ ತಾಲೂಕಿನ ಭಾಗದಲ್ಲಿ ಪ್ರವಾಹ ಉಂಟಾಗೋ ಸಾಧ್ಯತೆಯಿದೆ. ಜಲಾವೃತವಾಗಿದ್ದ ತಾಳಿಕೋಟೆ ಬಳಿಯ ಡೋಣಿ ‌ನದಿಯ ಹಳೆಯ ಸೇತುವೆ ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಹೊಸ ಸೇತುವೆ ಬಿರುಕು ಬಿಟ್ಟು ಶಿಥಲವಾದ ಕಾರಣ ಸಂಚಾರ ಸ್ಥಗಿತವಾಗಿತ್ತು. ಹಳೆಯ ಸೇತುವೆ ನಿನ್ನೆ ಜಲಾವೃತವಾದ ಕಾರಣ ವಿಜಯಪುರ ತಾಳಿಕೋಟೆ ಸಂಪರ್ಕಕ್ಕೆ ಸಮಸ್ಯೆ ಎದುರಾಗಿತ್ತು ಪ್ರಯಾಣಿಕರು ಪರದಾಡುವಂತಾಗಿತ್ತು. ಮನಗೂಳಿ ದೇವಾಪೂರ ರಾಜ್ಯ ಹೆದ್ದಾರಿ 61 ಸಂಚಾರ ಬಂದ್ ಆಗಿತ್ತು. 50 ಕಿಲೋ ಮೀಟರ್ ಸುತ್ತು ಹಾಕಿ ಸಂಚರಿಸೋ ಅನಿವಾರ್ಯತೆ ಎದುರಾಗಿತ್ತು. ಡೋಣಿ ನದಿಯಲ್ಲಿ ನೀರಿನ ಹರಿವಿನಲ್ಲಿ ಇಳಿಮುಖವಾದ ಕಾರಣ ಹಳೆಯ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಸದ್ಯ ಈ ಭಾಗದ ಪ್ರಯಾಣಿಕರು ನಿರಾಳರಾಗಿದ್ದು, ಮತ್ತಷ್ಟು ಮಳೆಯಾದರೆ ಹಳೆಯ ಸೇತುವೆ ಮತ್ತೇ ಮುಳುಗಡೆಯಾಗೋದು‌ ಖಚಿತ ಎನ್ನುವಂತ್ತಾಗಿದೆ.

ವ್ಯಾಪಾರಸ್ಥರಿಗೂ ಬಿಸಿ ಮುಟ್ಟಿಸಿದ ಮಳೆ

ತುಮಕೂರು: ನಗರದಲ್ಲಿ ಮಳೆಯ ಅಬ್ಬರ ಹಿನ್ನೆಲೆ ತುಮಕೂರಿನ ವ್ಯಾಪಾರಸ್ಥರಿಗೂ ಬಿಸಿ ಮುಟ್ಟಿದ್ದು, ನಗರದ ಮಂಡಿಪೇಟೆಯಲ್ಲಿ ಅಂಗಡಿ ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ. ಪೈಪ್ ಲೈನ್ ಗೊಸ್ಕರ ತೆಗೆದ ಗುಂಡಿಯಿಂದ ಹಾರ್ಡ್ ವೇರ್ ಮಳಿಗೆ ಸೇರಿದಂತೆ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಹಾರ್ಡ್ ವೇರ್ ವಸ್ತುಗಳು ನೀರು ಪಾಲಾಗಿದೆ. ಹಾರ್ಡ್ ವೇರ್ ಮಾಲೀಕ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದು, ಲಕ್ಷಾಂತರ ಹಣ ನಷ್ಟವಾಗಿದೆ. ಗುಂಡಿ ಬಗ್ಗೆ ನೀರು ಹರಿಯುವ ಬಗ್ಗೆ ಹೇಳಿದರೂ ಕೂಡ ತಲೆಕೆಡಿಸಿಕೊಂಡಿಲ್ಲ. ಕಳೆದ ಆರು ತಿಂಗಳ ಹಿಂದೆ ತೆಗೆದಿರುವ ಗುಂಡಿಯಿಂದ ಅವಾಂತರ ಸೃಷ್ಟಿಯಾಗಿದೆ ಎಂದರು.

ಸುಮಾರು 20 ಮನೆಗಳಿಗೆ‌ ನುಗ್ಗಿದ ಮಳೆ ನೀರು

ಕೋಲಾರ‌: ನಗರದಲ್ಲಿ ಮಳೆ ಅವಾಂತರದಿಂದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ. ನಗರದ ಶಾಂತಿನಗರ ಮತ್ತು ಕಾರಂಜಿಕಟ್ಟೆಯ ಸುಮಾರು 20 ಮನೆಗಳಿಗೆ‌ ಮಳೆ ನೀರು ನುಗ್ಗಿದೆ. ರಾತ್ರಿಯಿಡೀ ಮಳೆಯ ನೀರು ಹೊರ ಹಾಕಲು ಜನರ ಪರದಾಡಿದ್ದಾರೆ.

Published On - 10:18 am, Sun, 31 July 22