ಬನ್ನೇರುಘಟ್ಟ: ಅಪಾರ್ಟ್‌ಮೆಂಟ್‌ನಿಂದ ಬಿದ್ದು 12 ವರ್ಷದ ಬಾಲಕ ದುರ್ಮರಣ
ಹಾಲ್ ನಲ್ಲಿ ಮನೆಯವರು ಇದ್ದಾಗ ಅದಿತ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ. ಬಹುಶಃ ಆಯತಪ್ಪಿ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿ ಅಪಾರ್ಟ್‌ಮೆಂಟ್‌ನಿಂದ ಬಿದ್ದು 12 ವರ್ಷದ ಬಾಲಕ ದುರ್ಮರಣಕ್ಕೀಡಾಗಿದ್ದಾನೆ. ಇಲ್ಲಿನ MLA ಲೇಔಟ್‌ನ ಸಿ.ವಿ.ಕೆ. ಮೀನಾಕ್ಷಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರಂತ ಸಂಭವಿಸಿದೆ. ಎರಡನೇ ಮಹಡಿಯಿಂದ ಬಿದ್ದು 12 ವರ್ಷದ ಅದಿತ್ ದುರ್ಮರಣ ಹೊಂದಿದ ದುರ್ದೈವಿ. ಶಾಲೆ ಮುಗಿಸಿ ಮಧ್ಯಾಹ್ನ ಮನೆಗೆ ವಾಪಸಾಗಿದ್ದ ಮೃತ ಬಾಲಕ ಅದಿತ್. ಹಾಲ್ ನಲ್ಲಿ ಮನೆಯವರು ಇದ್ದಾಗ ಅದಿತ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ. ಬಹುಶಃ ಆಯತಪ್ಪಿ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅದಿತ್ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಗಳೂರಿನಲ್ಲಿ ಕುಖ್ಯಾತ 17 ಬೈಕ್ ಕಳ್ಳರ ಬಂಧನ, 79 ದ್ವಿಚಕ್ರ ವಾಹನ ಜಪ್ತಿ
ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಕುಖ್ಯಾತ 17 ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಇದರಿಂದ ಹೆಣ್ಣೂರು, ಪುಲಿಕೇಶಿನಗರ ಮತ್ತು ಕೆ.ಜಿ. ಹಳ್ಳಿ ವ್ಯಾಪ್ತಿಯ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 79 ಪ್ರಕರಣ ಬಹಿರಂಗವಾಗಿದೆ. ಬಂಧಿತರಿಂದ 50 ಲಕ್ಷ ರೂ. ಮೌಲ್ಯದ 79 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಬಂಧಿತರು ಡಿಯೋ ಬೈಕ್ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದರು. ಶಾಹೀದ್ ಅಫ್ರೀದಿ, ಶಾಹೀದ್ ಪಾಷಾ, ಮಹ್ಮದ್ ಮತೀನ್, ಅಜಯ್ ಸೇರಿದಂತೆ 17 ಆರೋಪಿಗಳ ಬಂಧನವಾಗಿದೆ.
Published On - 8:54 pm, Sat, 30 July 22