
ಬೆಂಗಳೂರು, ಡಿಸೆಂಬರ್ 27: ತುಂಬಾ ವರ್ಷಗಳಿಂದ ಕಾಯುತ್ತಾ ಇದ್ದ ವಾಹನ ಸವಾರರಿಗೆ ಕೊನೆಗೂ ಶುಭ ಸುದ್ದಿ ಸಿಕ್ಕಿದೆ. ಹೆಬ್ಬಾಳ ಮೇಲ್ಸೇತುವೆಯ (Hebbal Flyover) ಮತ್ತೊಂದು ಹೊಸ ಲೂಪ್ ರ್ಯಾಂಪ್ ಸಂಚಾರಕ್ಕೆ ಮುಕ್ತ ಆಗಿದೆ. ಇದರಿಂದ ಎಸ್ಟೀಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ಸರ್ಕಲ್ ಪ್ರವೇಶಿಸುವುದಕ್ಕೆ ತುಂಬಾ ಅನುಕೂಲಕವಾಗಲಿದೆ. ಜತೆಗೆ, ಯಲಹಂಕ, ಜಕ್ಕೂರು, ಸಹಕಾರ ನಗರದಿಂದ ನಗರದ ಪ್ರವೇಶಕ್ಕೆ ತುಂಬಾ ಅನುಕೂಲವಾಗಲಿದೆ.
ಕಳೆದ ಆಗಸ್ಟ್ ನಲ್ಲಿ ಕೆಆರ್ ಪುರದಿಂದ ಮೇಖ್ರಿ ಸರ್ಕಲ್ ಕಡೆಗೆ ಲೂಪ್ ರ್ಯಾಂಪ್ ಓಪನ್ ಆಗಿತ್ತು. ಈಗ ಮತ್ತೆ ಎಸ್ಟೀಮ್ ಮಾಲ್ನಿಂದ ಮೇಖ್ರಿ ಸರ್ಕಲ್ ಕಡೆಗೆ ಹೊಸ ಲೂಪ್ ರ್ಯಾಂಪ್ ಓಪನ್ ಆಗಿರುವುದು ವಾಹನ ಸವಾರರಿಗೆ ಖುಷಿ ತಂದಿದೆ. ಟ್ರಾಫಿಕ್ ಕಡಿಮೆ ಆಗಿದೆ, ಇದರಿಂದ ತುಂಬಾ ಅನುಕೂಲ ಆಗಿದೆ ಎಂದು ವಾಹನ ಸವಾರರು ಪ್ರತಿಕ್ರಿಯಿಸಿದ್ದಾರೆ.
ಹೊಸ ಲೂಪ್ ರ್ಯಾಂಪ್ನಿಂದ ಹೆಬ್ಬಾಳ ಪ್ಲೈ ಓವರ್ ಬಳಿ ಟ್ರಾಫಿಕ್ ಜಾಮ್ ಕಡಿಮೆ ಆಗುತ್ತದೆ. ಆದರೆ ಪ್ಲೈ ಓವರ್ ಮೇಲೆ ಹೋಗುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ನಿಲ್ಲುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಲಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.
ಇದನ್ನೂ ಓದಿ: ಬೆಂಗಳೂರು: ಚಿತ್ರದುರ್ಗ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಡ್ರಂಕ್ ಆ್ಯಂಡ್ ಡ್ರೈವ್ ಮಾಡಿ ಸಿಕ್ಕಿಬಿದ್ದ ಖಾಸಗಿ ಬಸ್ ಚಾಲಕ