ಮಾಧ್ಯಮದ ಮೇಲಿನ ನೈಜದಾಳಿಗಳ ಪಟ್ಟಿ ನಾವು ಕೊಡ್ತೇವೆ; ಸಿಎಂ ಸಿದ್ದರಾಮಯ್ಯ ಟ್ವೀಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 15, 2023 | 10:03 PM

ಮಾಧ್ಯಮದ ಮೇಲಿನ ನೈಜದಾಳಿಗಳ ಪಟ್ಟಿ ನಾವು ಕೊಡುತ್ತೇವೆ, ಇದನ್ನೆಲ್ಲಾ ನೀವು ಮರೆತಿರಬಹುದು, ಆದರೆ ‘ಇಂಡಿಯಾ’ ಮರೆತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ(ಟ್ವೀಟರ್​) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್‌ ಮಾಡಿದ್ದಾರೆ.

ಮಾಧ್ಯಮದ ಮೇಲಿನ ನೈಜದಾಳಿಗಳ ಪಟ್ಟಿ ನಾವು ಕೊಡ್ತೇವೆ; ಸಿಎಂ ಸಿದ್ದರಾಮಯ್ಯ ಟ್ವೀಟ್​
ಸಿದ್ದರಾಮಯ್ಯ
Follow us on

ಬೆಂಗಳೂರು, ಸೆ.15: ನಿನ್ನೆ(ಸೆ.14) ಇಂಡಿಯಾ ಒಕ್ಕೂಟದ ಮಾಧ್ಯಮ ವಿಭಾಗದ ಸಭೆ ನಡೆದಿತ್ತು. ಬಳಿಕ ದೇಶದ ಪ್ರಮುಖ ಸುದ್ದಿ ಸಂಸ್ಥೆಯವರ ಪ್ರಮುಖ 14 ನಿರೂಪಕರು ನಡೆಸುವ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ ಸದಸ್ಯರುಗಳನ್ನು ಕಳುಹಿಸುವುದಿಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಜೆಪಿ ನಡ್ಡಾರವರೇ ಮಾಧ್ಯಮ ಮೇಲಿನ ನೈಜದಾಳಿಗಳ ಪಟ್ಟಿ ನಾವು ಕೊಡುತ್ತೇವೆ, ಇದನ್ನೆಲ್ಲಾ ನೀವು ಮರೆತಿರಬಹುದು, ಆದರೆ ‘ಇಂಡಿಯಾ’ ಮರೆತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪೋಸ್ಟ್‌ ಮಾಡಿದ್ದಾರೆ.

ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ಪತ್ರಕರ್ತರು

1) ಸಿದ್ದಿಕ್‌ ಕಪ್ಪನ್‌
2) ಮೊಹಮ್ಮದ್‌ ಝುಬೇರ್
3) ಅಜಿತ್‌ ಓಝಾ
4) ಜಸ್ಪಾಲ್‌ ಸಿಂಘ್‌
5) ಸಜದ್‌ ಗುಲ್‌

ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು

1) ರಾಕೇಶ್‌ ಸಿಂಗ್‌ ಉತ್ತರ ಪ್ರದೇಶ, ಸರ್ಕಾರಿ ನಿಧಿ ಅವ್ಯವಹಾರ ಕುರಿತು ವರದಿ
2) ಶುಭಂ ಮಣಿ ತ್ರಿಪಾಠಿ, ಉತ್ತರ ಪ್ರದೇಶ, ಮರಳು ದಂಧೆ ಕುರಿತು ವರದಿ
3) ಜಿ ಮೋಸೆಸ್‌, ತಮಿಳುನಾಡು, ಗೋಮಾಳ ಅಕ್ರಮ ಮಾರಾಟ ಕುರಿತು ವರದಿ
4) ಪರಾಗ್‌ ಭುಯಾನ್, ಅಸ್ಸಾಮ್‌, ಎಸ್‌ಐನೇಮಕಾತಿ ಹಗರಣ ಕುರಿತು ವರದಿ
5) ಗೌರಿ ಲಂಕೇಶ್‌, ಕೋಮುವಾದ ವಿರೋಧಿಸಿದ್ದಕ್ಕೆ

ಪತ್ರಿಕಾ ಸ್ವಾತಂತ್ಯ್ರ: ಜಗತ್ತಿನಲ್ಲಿ ಭಾರತದ ಸ್ಥಾನ

2015 – 136ನೇ ಸ್ಥಾನ
2019 – 140ನೇ ಸ್ಥಾನ
2022 – 150ನೇ ಸ್ಥಾನ
2023 – 161ನೇ ಸ್ಥಾನ

ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಎಂದು ಬರೆದು ಸಿಎಂ ಟ್ವೀಟ್​ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ