AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿ ಜನರಿಗೆ ನಿರಾಸೆ; ಡಬ್ಬಲ್ ಡೆಕ್ಕರ್ ಬಸ್ ರಸ್ತೆಗಿಳಿಯೋದು ಡೌಟ್, ಆರಂಭವಾಗಿಲ್ಲ ಟೆಂಡರ್ ಪ್ರಕ್ರಿಯೆ

ಕಾಲಾಕ್ರಮೇಣ ಮರೆಯಾಗಿದ್ದ ಡಬಲ್ ಡೆಕ್ಕರ್ ಬಸ್​ಗಳನ್ನ ಮತ್ತೆ ನಗರದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ತೀರ್ಮಾನಿಸಿತ್ತು. ಬಿಎಂಟಿಸಿಯ ಈ ನಿರ್ಧಾರಕ್ಕೆ ಬೆಂಗಳೂರಿಗರು ಕೂಡ ಡಬ್ಬಲ್ ಡೆಕ್ಕರ್ ಅನುಭವಕ್ಕೆ ಕಾದು ಕುಳಿತಿದ್ದಾರೆ. ಆದರೆ ಸದ್ಯಕ್ಕೆ ಜನರ ಕಾಯುವಿಕೆ ಮುಗಿಯೋದು ಡೌಟ್ ಎನ್ನಲಾಗ್ತಿದ್ದು, ಡಬ್ಬಲ್ ಡೆಕ್ಕರ್​ನಲ್ಲಿ ಅನುಭವ ಪಡೆಯೋಕೆ ಇನ್ನೂ ಕೆಲ ಒಂದಷ್ಟು ತಿಂಗಳು ಕಾಯಲೇಬೇಕಾಗಿದೆ.

ಸಿಲಿಕಾನ್ ಸಿಟಿ ಜನರಿಗೆ ನಿರಾಸೆ; ಡಬ್ಬಲ್ ಡೆಕ್ಕರ್ ಬಸ್ ರಸ್ತೆಗಿಳಿಯೋದು ಡೌಟ್,  ಆರಂಭವಾಗಿಲ್ಲ ಟೆಂಡರ್ ಪ್ರಕ್ರಿಯೆ
ಸಾಂದರ್ಭಿಕ ಚಿತ್ರ
Kiran Surya
| Updated By: ಆಯೇಷಾ ಬಾನು|

Updated on: Sep 16, 2023 | 7:23 AM

Share

ಬೆಂಗಳೂರು, ಸೆ.16: 90 ರ ದಶಕದಲ್ಲಿ ಬೆಂಗಳೂರಿನ ವೈಭವನ್ನ ಸಾರಿದ್ದ ಡಬ್ಬಲ್ ಡೆಕ್ಕರ್ ಬಸ್(Double Decker Bus) ಮತ್ತೆ ಸಿಲಿಕಾನ್ ಸಿಟಿ ರಸ್ತೆಗೆ ಇಳಿಸೋದಾಗಿ ಬಿಎಂಟಿಸಿ(BMTC) ಹೇಳಿತ್ತು. ಬೆಂಗಳೂರಿಗರು ಕೂಡ ಡಬ್ಬಲ್ ಡೆಕ್ಕರ್​ನಲ್ಲಿ ಸಂಚಾರಕ್ಕಾಗಿ ಸಖತ್ ಥ್ರಿಲ್ ನಲ್ಲಿದ್ರು. ಆದರೆ ಸದ್ಯಕ್ಕೆ ಸಿಲಿಕಾನ್ ಸಿಟಿಗರ(Bengaluru) ಕನಸು ನನಸಾಗೋದು ಡೌಟ್ ಅನ್ನಿಸುತ್ತಿದೆ. ಡಬ್ಬಲ್ ಡೆಕ್ಕರ್ ಬಸ್ ಖರೀದಿ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ಡಬ್ಬಲ್ ಡೆಕ್ಕರ್ ಬಸ್ ಸಿಲಿಕಾನ್ ಸಿಟಿ ರಸ್ತೆಗಿಳಿಯೋದು ಡೌಟ್ ಆಗಿದೆ.

ಅದೊಂದು ಕಾಲ ಇತ್ತು 90ರ ದಶಕ. ಬೆಂಗಳೂರಿನ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್​ಗಳು ಸಂಚಾರ ಮಾಡುತ್ತಿದ್ರೆ ನೋಡೋದೆ ಒಂದು ಚಂದ. ಈ ಬಸ್​ಗಳನ್ನು ಹತ್ತಿ ಮುಂಬದಿ ಸಿಟ್ ಹಿಡಿದು ನಗರದ ಸೌಂದರ್ಯ ಸವಿಯುವುದಕ್ಕೆ ಜನ ಮುಗಿಬೀಳುತ್ತಿದ್ರು. ಆದರೆ ಕಾಲಾಕ್ರಮೇಣ ಮರೆಯಾಗಿದ್ದ ಡಬಲ್ ಡೆಕ್ಕರ್ ಬಸ್​ಗಳನ್ನ ಮತ್ತೆ ನಗರದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ತೀರ್ಮಾನಿಸಿತ್ತು. ಬಿಎಂಟಿಸಿಯ ಈ ನಿರ್ಧಾರಕ್ಕೆ ಬೆಂಗಳೂರಿಗರು ಕೂಡ ಡಬ್ಬಲ್ ಡೆಕ್ಕರ್ ಅನುಭವಕ್ಕೆ ಕಾದು ಕುಳಿತಿದ್ದಾರೆ. ಆದರೆ ಸದ್ಯಕ್ಕೆ ಜನರ ಕಾಯುವಿಕೆ ಮುಗಿಯೋದು ಡೌಟ್ ಎನ್ನಲಾಗ್ತಿದ್ದು, ಡಬ್ಬಲ್ ಡೆಕ್ಕರ್​ನಲ್ಲಿ ಅನುಭವ ಪಡೆಯೋಕೆ ಇನ್ನೂ ಕೆಲ ಒಂದಷ್ಟು ತಿಂಗಳು ಕಾಯಲೇಬೇಕಾಗಿದೆ.

ಇದನ್ನೂ ಓದಿ: ಬೆಂಗಳೂರು ಬಂದ್: ಬಿಎಂಟಿಸಿಗೆ ಡಿಮಾಂಡಪ್ಪೋ ಡಿಮಾಂಡ್

ಹೌದು ಇದಕ್ಕೆ ಕಾರಣ ಇನ್ನೂ ಈ ಬಸ್ ಗಳ ಖರೀದಿ ಟೆಂಡರ್ ಪ್ರಕ್ರಿಯೆ ಮುಗಿಯದೇ ಇರೋದು. ಕಳೆದ ಏಪ್ರಿಲ್ ನಲ್ಲೇ ಬೆಂಗಳೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಗಳ‌ ಸಂಚಾರ ಆರಂಭಿಸುವುದಾಗಿ ಬಿಎಂಟಿಸಿ ಹೇಳಿತ್ತು. ಜೊತೆಗೆ ಟೆಂಡರ್ ಪ್ರಕ್ರಿಯೆಗಳು ಆರಂಭವಾಗಿತ್ತು. ಆದರೆ ಆರಂಭವಾದ ಟೆಂಡರ್ ಪ್ರಕ್ರಿಯೆ 5-6 ತಿಂಗಳಾದ್ರು‌ ಮುಗಿಯುವ ಹಂತಕ್ಕೆ ಬಂದಿಲ್ಲ.‌ ಕಾರಣ ಪ್ರಕ್ರಿಯೆ ಆರಂಭವಾದ ಬಳಿಕ ಕೇವಲ ಒಂದೇ ಒಂದು ಸಂಸ್ಥೆ ಮಾತ್ರ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಬೇರೆ ಕಂಪನಿಗಳು ಭಾಗಿಯಾಗದ ಹಿನ್ನೆಲೆ ಸದ್ಯ ಸರ್ಕಾರದ ಮಟ್ಟದಲ್ಲಿ ಮುಂದೇನು ಅನ್ನುವಂತ ಚರ್ಚೆಗಳಾಗುತ್ತಿವೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ರಸ್ತೆಗೆ ಬಸ್ ಇಳಿದು ಜನ ಪ್ರಯಾಣ ಮಾಡಬೇಕಾದ್ರೆ ಕೆಲ ತಿಂಗಳುಗಳ ಕಾಲಾವಕಾಶ ಬೇಕು. ಈ ಎಲ್ಲಾ ಕಾರಣ ಮುಂದಿನ ವರ್ಷ 2024 ಮಧ್ಯಕ್ಕೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಅತ್ತ ಟೆಂಡರ್ ಪ್ರಕ್ರಿಯೆಯೇ ಆರಂಭವಾಗಿಲ್ಲ, ಅದಕ್ಕೂ ಮುಂಚೆಯೇ ಬಸ್ ಬಂದಾಗ ಎಲ್ಲಿ ಬಸ್ ಗಳು ಸಂಚರಿಸಬೇಕು ಅನ್ನೋ ನಿಟ್ಟಿನಲ್ಲಿ ಕೆಲ ಪ್ರಾಯೋಗಿಕ ರೂಟ್​ಗಳನ್ನ ನಿಗಮ ಫೈನಲ್ ಮಾಡಿದೆ. ಶಿವಾಜಿನಗರ, ಕೆಬಿಎಸ್, ಔಟರ್ ರಿಂಗ್ ರೋಡ್, ಅತ್ತಿಬೆಲೆ ಸೇರಿದಂತೆ ಕೆಲ ಮಾರ್ಗಗಳನ್ನ ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದು, ಇದೇ ಭಾಗಗಳಲ್ಲಿ ಓಡಿಸಿದ್ರೆ ಸೂಕ್ತ ಅನ್ನೋದು ನಿಗಮದ ಚಿಂತನೆ. ಒಟ್ಟಾರೆ ಸದ್ಯಕ್ಕಂತು ಡಬ್ಬಲ್ ಡೆಕ್ಕರ್ ಪ್ರಯಾಣದ ಕನಸು ಕನಸಾಗೇ ಇರಲಿದೆ. ಮುಂದಿನ ತಿಂಗಳುಗಳಲ್ಲಾದ್ರು ಆದಷ್ಟು ಬೇಗ ನನಸಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?