ಕೋರಮಂಗಲ: ಸಿಹಿ ತಿನಿಸು ಮಳಿಗೆಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ, ಮಹಿಳೆ ಗಂಭೀರ ಆರೋಪ

ಸ್ತ್ರೀಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಹೆಚ್ಚೆಚ್ಚು ವರದಿಯಾಗುತ್ತಿವೆ. ಇಂಥ ಸಂದರ್ಭದಲ್ಲಿ, ಪ್ರತಿಷ್ಠಿತ ಸಿಹಿ ತಿನಿಸು ಮಳಿಗೆಯ ಕೋರಮಂಗಲದ ಘಟಕದಲ್ಲಿ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟಿರುವ ಬಗ್ಗೆ ಆರೋಪ ಕೇಳಿಬಂದಿದೆ. ಸಂತ್ರಸ್ತೆಯೊಬ್ಬರು ಈ ಕುರಿತು ಇನ್​​ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿ ಗಮನ ಸೆಳೆದಿದ್ದಾರೆ.

ಕೋರಮಂಗಲ: ಸಿಹಿ ತಿನಿಸು ಮಳಿಗೆಯ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ, ಮಹಿಳೆ ಗಂಭೀರ ಆರೋಪ
ಸಾಂದರ್ಭಿಕ ಚಿತ್ರ

Updated on: May 06, 2025 | 3:12 PM

ಬೆಂಗಳೂರು, ಮೇ 6: ಬೆಂಗಳೂರಿನ (Bengaluru) ಕೋರಮಂಗಲದಲ್ಲಿ ಜನಪ್ರಿಯ ಸಿಹಿ ತಿನಿಸು (Eatery) ಅಂಗಡಿಯೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ (Hidden Camera) ಇಟ್ಟಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಸಂತ್ರಸ್ತ ಮಹಿಳೆ, ಸಾಮಾಜಿಕ ಮಾಧ್ಯಮ ಇನ್​ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 25 ರಂದು ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆಯು ಅಂಗಡಿಯ ಮೊದಲ ಮಹಡಿಯ ಶೌಚಾಲಯಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಶೌಚಾಲಯದ ಒಳ ಪ್ರವೇಶಿಸಿದಾಗ, ಅದರ ಮುಂಭಾಗದ ಗೋಡೆ ಗಟ್ಟಿಯಾಗಿಲ್ಲದಿರುವುದದು ಗಮನಕ್ಕೆ ಬಂತು. ಗೋಡೆಯ ಮೇಲ್ಭಾಗದಲ್ಲಿ ಫೈಬರ್‌ ಗ್ಲಾಸ್ ಫಲಕ ಮತ್ತು ಮುಖದ ಎತ್ತರಕ್ಕೆ ಮರದ ಹಲಗೆಗಳು ಇರುವುದನ್ನು ಗಮನಿಸಿದೆ. ಇದರಿಂದ ಅನುಮಾನ ಬಂತು ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
ಆನೇಕಲ್: ನಿಗೂಢ ಸ್ಫೋಟಕ್ಕೆ ಛಿದ್ರಗೊಂಡ ಕಾಂಕ್ರೀಟ್ ರಸ್ತೆ!
ಹುಬ್ಬಳ್ಳಿಯಲ್ಲಿ 19 ಮೈದಾನದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕ್ರೀಡಾ ಸಂಕೀರ್ಣ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ಜಿಲೇಬಿಯಲ್ಲಿ ಕೃತಕ ಬಣ್ಣ ಶಂಕೆ: ಮಾದರಿ ಸಂಗ್ರಹಕ್ಕೆ ಮುಂದಾದ ಆಹಾರ ಇಲಾಖೆ

ಅನುಮಾನಗೊಂಡು ಗೋಡೆಯಲ್ಲಿದ್ದ ಹಲಗೆಗಳನ್ನು ಪರಿಶೀಲಿಸಿದಾಗ ಇನ್ನೊಂದು ಬದಿಯಲ್ಲಿ ಫೋನ್ ಇರುವುದು ಕಾಣಿಸಿತು. ನಂತರ ಫೋನ್ ಅಲ್ಲಾಡುತ್ತಿರುವುದು ಕಾಣಿಸಿತು. ಇದರಿಂದ, ವಿಡಿಯೋ ಚಿತ್ರೀಕರಿಸುತ್ತಿರುವುದು ದೃಢಪಟ್ಟಿತು ಎಂದು ಅವರು ಹೇಳಿದ್ದಾರೆ.

ಶೌಚಾಲಯದಲ್ಲಿ ಕ್ಯಾಮರಾ ದೃಢ: ಆಮೇಲೇನಾಯ್ತು?

ಘಟನೆಯಿಂದ ನೊಂದ ಸಂತ್ರಸ್ತೆ ಸ್ನೇಹಿತೆಗೆ ಮಾಹಿತಿ ನೀಡಿದ್ದು, ನಂತರ ಅಂಗಡಿಯ ಸಿಬ್ಬಂದಿ ಬಳಿ ಪ್ರಶ್ನಿಸಿದ್ದಾಗಿ ತಿಳಿಸಿದ್ದಾರೆ. ಆಡಳಿತ ಮಂಡಳಿಯು ಆರಂಭದಲ್ಲಿ ಸಿಸಿಟಿವಿ ದೃಶ್ಯ ಪರಿಶೀಲಿಸಲು ಹಿಂಜರಿಯಿತಾದರೂ ನಂತರ ಪರಿಶೀಲಿಸಲು ಸಮ್ಮತಿಸಿತು. ಭದ್ರತಾ ಸಿಬ್ಬಂದಿಯೊಬ್ಬ ನಿರ್ಬಂಧಿತ ಪ್ರದೇಶ ಪ್ರವೇಶಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದೃಢಪಟ್ಟಿತು. ಆದರೆ ನಂತರ ಹಿಂಬಾಗಿಲಿನಿಂದ ಮತ್ತೊಬ್ಬ ಉದ್ಯೋಗಿ ಹೊರಬರುತ್ತಿರುವುದು ಕಾಣಿಸಿತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಸಂತ್ರಸ್ತೆ ಮಾಡಿರುವ ಇನ್​​ಸ್ಟಾಗ್ರಾಂ ಪೋಸ್ಟ್


ಇಷ್ಟೆಲ್ಲ ಆದ ನಂತರ ರಾತ್ರಿ 9.10 ರ ಸುಮಾರಿಗೆ ಪೊಲೀಸರನ್ನು ಕರೆಲಾಯಿತು. ಅವರು ಆರೋಪಿಯನ್ನು ಠಾಣೆಗೆ ಕರೆದೊಯ್ದರು ಎಂದು ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಈ ಮೂರು ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್​​ಗೆ ನಿರ್ಧಾರ

ಮಹಿಳೆಯ ಪ್ರಕಾರ, ಆರೋಪಿಯು ಆರಂಭದಲ್ಲಿ ಕೃತ್ಯ ಎಸಗಿದ್ದನ್ನು ಒಪ್ಪಿರಲಿಲ್ಲ. ಆದರೆ, ತೀವ್ರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾನೆ. ವೀಡಿಯೊಗಳನ್ನು ಅಳಿಸಿಹಾಕಿರುವುದಾಗಿ ತಿಳಿಸಿದ್ದಾನೆ ಮತ್ತು ಕ್ಷಮೆ ಯಾಚಿಸಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.

ಆರೋಪಿಯ ಬಂಧನ

ಕೋರಮಂಗಲ ಪೋಲಿಸ್ ಠಾಣೆಗೆ ಮಹಿಳೆ ನೀಡಿದ್ದ ದೂರಿನ ಆಧಾರದಲ್ಲಿ ಆರೋಪಿ ಉತ್ತರ ಭಾರತ ಮೂಲದ ಅಮೋಧ್ ಎಂಬಾತನ್ನು ಬಂಧಿಸಲಾಗಿದೆ. ಸದ್ಯ ಆರೋಪಿಯ ಫೋನ್ ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಆರೋಪಿ ವಿಡಿಯೋ ಡಿಲೀಟ್ ಮಾಡಿದ್ದಾನೆ. ಹೀಗಾಗಿ ಮೊಬೈಲ್ ವಶಕ್ಕೆ ಪಡೆದು ವಿಡಿಯೋ ರಿಟ್ರೀವ್​​ಗೆ ಕಳುಹಿಸಲಾಗಿದೆ. ಆರೋಪಿ ಇನ್ನೂ ಯಾರಿಗಾದರೂ ಇದೆ ರೀತಿ ಮಾಡಿದ್ದಾನೆಯೇ ಎಂಬುದನ್ನು ಪತ್ತೆ ಮಾಡಲು ವಿಡಿಯೋ ರಿಟ್ರೀವ್​ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Tue, 6 May 25