ಬೆಂಗಳೂರು: ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಸಂಪೂರ್ಣ ಜಲಾವೃತವಾಗಿತ್ತು. ಇನ್ನೇನು ಫಸಲು ಕೈಗೆ ಸಿಗಬೇಕು ಅನ್ನುವಷ್ಟರಲ್ಲಿ ನಿರಂತರ ಮಳೆಗೆ ನಾಶವಾಯಿತು. ಸುರಿದ ಮಳೆಯಿಂದ ರೈತರ ಬದುಕು ಸದ್ಯ ಹೀನಾಯವಾಗಿದೆ. ತರಕಾರಿಗಳು ಹೊಲದಲ್ಲೇ ಹಾಳಾಗಿರುವುದರಿಂದ ಹೆಚ್ಚು ಪ್ರಮಾಣದ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ತರಕಾರಿಗಳ ಬೆಲೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆ ಕಂಡು ಖರೀದಿದಾರರು ಕಂಗಾಲಾಗಿದ್ದಾರೆ.
ತರಕಾರಿ ಬೆಲೆ ಕೇಳಿದರೆ ಶಾಕ್ ಆಗುತ್ತೆ. ತರಕಾರಿಗಳ ಬೆಲೆ ಮತ್ತೆ ಶತಕ ದಾಟಿದೆ. ತರಕಾರಿಗಳು ದರ ಏರಿಕೆಯಲ್ಲಿ ಪೈಪೋಟಿ ಬೆಳೆಸಿದೆ. ಅಕಾಲಿಕ ಮಳೆಯಿಂದ ಬೆಲೆ ಡಬಲ್ ಆಗಿದೆ. ಹೊಸದಾಗಿ ತರಕಾರಿ ಬೆಳೆ ರೈತರ ಕೈ ಸೇರುವವರೆಗೂ ರಾಜ್ಯದ ಜನರು ಇದೇ ಸ್ಥಿತಿಯನ್ನು ಎದುರಿಸಬೇಕಾಗಿದೆ. ಕನಿಷ್ಠ 2-3 ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಕುಸಿದಿದ್ದ ಟೊಮ್ಯಾಟೋ ದರ ಸೇರಿ ಇತರೆ ತರಕಾರಿ ಬೆಲೆ ಮತ್ತೆ ಏರಿಕೆಯಾಗಿದೆ. ನುಗ್ಗೆಕಾಯಿ ಪ್ರತಿ ಕೆಜಿಗೆ 350 ರೂ. ಇದೆ. ಮಾರುಕಟ್ಟೆಯಲ್ಲಿ ದರ ಕೇಳಿ ಜನರು ತರಕಾರಿ ಕೊಳ್ಳದೆ ವಾಪಸ್ ಹೋಗುತ್ತಿದ್ದಾರೆ.
ತರಕಾರಿಗಳ ದರ ಹೀಗಿದೆ
ಒಂದು ಕೆಜಿ ನುಗ್ಗೆಕಾಯಿಗೆ 200 ರಿಂದ 360 ರೂ. ಇದೆ.
ಟೊಮ್ಯಾಟೋ 60 ರಿಂದ 100 ರೂ.
ಈರುಳ್ಳಿ 40 ರಿಂದ 50 ರೂ.
ಬೆಂಡೆಕಾಯಿ 60 ರಿಂದ 100 ರೂ.
ಬೀನ್ಸ್ 60 ರಿಂದ 100 ರೂ.
ಕ್ಯಾರೆಟ್ 70 ರಿಂದ 90 ರೂ.
ಹೀರೆಕಾಯಿ 50 ರಿಂದ 85 ರೂ.
ಬೀಟ್ರೂಟ್ 40 ರಿಂದ 75 ರೂ.
ನಮಿಲು ಕೋಸು 40 ರಿಂದ 100 ರೂ.
ಬದನೆಕಾಯಿ 30 ರಿಂದ 114 ರೂ.
ಕೊತ್ತಂಬರಿ ಸೊಪ್ಪು 30 ರಿಂದ 40 ರೂ. ಇದೆ. ಇನ್ನು ಮೆಂತ್ಯ, ಪಾಲಕ್, ಅರವೆ, ದಂಟಿನ ಸೊಪ್ಪು ಪ್ರತಿ ಕಟ್ಟಿಗೆ 60 ರಿಂದ 70 ರೂಪಾಯಿ ಇದೆ.
ಇಂದಿನಿಂದ ಡಿ. 15ರವರೆಗೆ ಕರ್ನಾಟಕದಲ್ಲಿ ಹಗುರ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಡಿ. 15ರವರೆಗೆ ಮಳೆ ಸುರಿಯಲಿದೆ. ಇಂದು ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ, ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ರಾಮನಗರ, ಕೊಡಗು, ಶಿವಮೊಗ್ಗ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಮಳೆಯಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ
ಮತ್ತೆ ಜೋರಾದ ಮತಾಂತರ ಕಾಯ್ದೆ ಜಾರಿ ಚರ್ಚೆ; ಕಾಂಗ್ರೆಸ್ ವಿರೋಧ, ಭಾರತೀಯ ಕ್ರೈಸ್ತ ಒಕ್ಕೂಟದಿಂದ ಧರಣಿಗೆ ನಿರ್ಧಾರ
ಅಮೇರಿಕಾ: ಚಂಡಮಾರುತಕ್ಕೆ ನಲುಗಿದ ಐದು ರಾಜ್ಯಗಳು; 80ಕ್ಕೂ ಅಧಿಕ ಜನರ ದುರ್ಮರಣ
Published On - 10:34 am, Sun, 12 December 21