Ayodhya Ram Mandir: ಜನವರಿ 22ರಂದು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂ ಸಂಘಟನೆಗಳ ಒತ್ತಾಯ

| Updated By: ಆಯೇಷಾ ಬಾನು

Updated on: Jan 15, 2024 | 8:10 AM

ಅಯೋಧ್ಯೆಯಲ್ಲಿ ಜನವರಿ 22ರಂದು ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆಯಾಗುತ್ತಿದೆ. ಈ ದಿನದ ಸಂಭ್ರಮಕ್ಕೆ ದೇಶವೇ ಹಬ್ಬದಂತೆ ಸಿದ್ಧವಾಗಿದೆ. ಕೋಟ್ಯಾಂತರ ಹಿಂದೂಗಳು ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಅದರಂತೆಯೇ ಜನವರಿ 22ರಂದು ರಾಜ್ಯದಲ್ಲಿ ಶಾಲೆಗಳಿಗೆ ರಜೆ ನೀಡುವಂತೆ ಹೊಸ ಡಿಮ್ಯಾಂಡ್ ಕೇಳಿ ಬಂದಿದೆ.

Ayodhya Ram Mandir: ಜನವರಿ 22ರಂದು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂ ಸಂಘಟನೆಗಳ ಒತ್ತಾಯ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜ.15: ಕೋಟ್ಯಾಂತರ ಭಾರತೀಯರ ಕನಸ್ಸು ಪ್ರಭು ಶ್ರೀರಾಮ ಮಂದಿರ ನಿರ್ಮಾಣ (Ayodhya Ram Mandir). ಇದಕ್ಕೆ ಈಗ ಕಾಲ ಕೂಡಿ ಬಂದಿದೆ. ಜನವರಿ 22 ಭಾರತದ ಇತಿಹಾದ ಪುಟಗಳಲ್ಲಿ ಅಚ್ಚಾಗುವ ದಿನ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಾಗುವ ಶುಭ ಗಳಿಗೆ. ಅದರಲ್ಲೂ ಅಂದು ಬಾಲ ರಾಮನ ಮೂರ್ತಿಯನ್ನ (Rama Lalla) ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಮನೆಮನೆಗೆ ಅಯೋಧ್ಯೆಯಿಂದ ಈಗಾಗಲೇ ಅಕ್ಷತೆ ಬಂದು ತಲುಪುತ್ತಿದೆ. ಜೊತೆಗೆ ಕೆಲವರು ಅಯೋಧ್ಯೆಗೆ ಹೋಗಲು ಪ್ಲಾನ್ ಮಾಡ್ತಿದ್ದಾರೆ. ಕೆಲವರು ಅಂದು ರಾಮ ಭಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ, ಮತ್ತೆ ಕೆಲವರು ಆ ದಿನ ರಾಜ ಜ್ಯೋತಿ ಬೆಳಗಿ ದೀಪಾವಳಿಯಾಗಿ ವಿಶೇಷವಾಗಿಸಬೇಕೆಂದುಕೊಂಡಿದ್ದಾರೆ. ಈ ನಡುವೆ ಅಯೋಧ್ಯಯಲ್ಲಿ ಪ್ರಭು ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನೆ ದಿನ ರಾಜ್ಯದಲ್ಲಿ ಸಂಭ್ರಮ ಆಚರಿಸಲು ರಾಜ್ಯದ ಶಾಲೆಗಳಿಗೆ ರಜೆ ನೀಡುವಂತೆ ಹಿಂದೂಪರ ಸಂಘಟನೆಗಳು ಶಾಲಾ ಶಿಕ್ಷಣ ಇಲಾಖೆಗೆ ಒತ್ತಾಯಿಸಿವೆ.

ಜನವರಿ 22ರಂದು ಶಾಲೆಗೆ ರಜೆ ನೀಡಿ ಅಥವಾ ಶಾಲೆಗಳಲ್ಲಿ ರಾಮಮೂರ್ತಿಗೆ ಪೂಜೆ ಸಲ್ಲಿಸಿ ಶಾಲೆಯಲ್ಲಿ ಪ್ರಾರ್ಥನೆ ಮಾಡಿಸಿ. ಬಳಿಕ ಒಂದು ಕ್ಲಾಸ್ ಆಯೋಧ್ಯೆಯ ಬಗ್ಗೆ ರಾಮಮಂದಿರದ ಬಗ್ಗೆ ಮಕ್ಕಳಿಗೆ ಪಾಠ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಈ ಕೆಲಸ ಮಾಡಲಾಗ್ತಿದೆ ಜೊತೆಗೆ ಕೆಲವು ಖಾಸಗಿ ಶಾಲೆಗಳಲ್ಲಿ ರಾಮಮಂದಿರದ ದಿನ ಪೂಜೆ ಮಾಡಲಾಗ್ತಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿಯೂ ಈ ಬಗ್ಗೆ ಗಮನ ಹರಿಸುವಂತೆ ಇಲ್ಲವಾದ್ರೆ ಅಂದು ಶಾಲೆಗಳಿಗೆ ರಜೆ ನೀಡುವಂತೆ ಹಿಂದೂಪರ ಸಂಘಟನೆಗಳು ಶಿಕ್ಷಣ ಇಲಾಖೆಗೆ ಒತ್ತಾಯ ಮಾಡಿವೆ.

ಇದನ್ನೂ ಓದಿ: Makar Sankranti: ಗವಿ ಗಂಗಾಧರೇಶ್ವರ ದೇಗುಲದಲ್ಲಿ ಕೌತುಕಕ್ಕೆ ಕ್ಷಣಗಣನೆ, ಭಕ್ತರ ಪ್ರವಾಹ

ಸದ್ಯ ಶಿಕ್ಷಣ ಇಲಾಖೆ ಈ ವಿಚಾರದ ಬಗ್ಗೆ ಪ್ರತಿಕ್ರಿಯೇ ನೀಡಲು ಹಿಂದೇಟು ಹಾಕಿದೆ. ಆದರೆ ಖಾಸಗಿ ಶಾಲೆಗಳು ಮಾತ್ರ ಈ ನಿರ್ಧಾರ ಸ್ವಾಗರ್ತಹ ರಜೆ ನೀಡುವ ಹಕ್ಕು ಸರ್ಕಾರಕ್ಕೆ ಇದೆ. ಆದರೆ ರಾಮ ಮಂದಿರ ಉದ್ಘಾಟನೆಯ ದಿನ ರಜೆ ನೀಡಿಲ್ಲವಾದ್ರೂ ನಾವು ಮಕ್ಕಳಿಗೆ ಪ್ರಭು ರಾಮನ ಬಗ್ಗೆ ರಾಮಮಂದಿರದ ಬಗ್ಗೆ ಹೇಳಿಕೊಡ್ತೀವಿ. ಸಾಧ್ಯವಾದ್ರೆ ಶಾಲೆಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡ್ತೀವಿ ಎಂದು ತಿಳಿಸಿವೆ.

ಒಟ್ನಲ್ಲಿ ಎಲ್ಲೆಡೆ ರಾಮಮಂದಿರ ಪ್ರತಿಷ್ಠಾಪನೆಯ ಜ್ವರ ಹೆಚ್ಚಾಗಿದ್ದು, ಜನವರಿ 22 ರಂದು ಶಾಲೆಗೆ ರಜೆ ನೀಡುವ ಬಗ್ಗೆ ಒತ್ತಾಯ ಶುರುವಾಗಿದೆ. ಆದರೆ ಶಿಕ್ಷಣ ಇಲಾಖೆ ಈ ವಿಚಾರದಲ್ಲಿ ಯಾವ ನಿರ್ಧಾರಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:19 am, Mon, 15 January 24