‘ಬೆಂಗಳೂರಿನಲ್ಲಿ 15 ದಿನಗಳ ಕಾಲ ಟೋಯಿಂಗ್ ವ್ಯವಸ್ಥೆ ರದ್ದು, ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ’

| Updated By: ganapathi bhat

Updated on: Feb 02, 2022 | 9:42 PM

ನೋ ಪಾರ್ಕಿಂಗ್‌ ಬೋರ್ಡ್‌ಗಳನ್ನು ಹೆಚ್ಚು ಅಳವಡಿಸುತ್ತೇವೆ. ಯಾವ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಬೇಕೆಂದು ಸೂಕ್ತ ಮಾಹಿತಿ ನೀಡುತ್ತೇವೆ. ಈ ಬಗ್ಗೆ ವಾಹನ ಸವಾರರಿಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

‘ಬೆಂಗಳೂರಿನಲ್ಲಿ 15 ದಿನಗಳ ಕಾಲ ಟೋಯಿಂಗ್ ವ್ಯವಸ್ಥೆ ರದ್ದು, ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ’
ಗೃಹ ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಬೆಂಗಳೂರಲ್ಲಿ 15 ದಿನಗಳ ಕಾಲ ಟೋಯಿಂಗ್ ವ್ಯವಸ್ಥೆ ರದ್ದು ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಟೋಯಿಂಗ್ ಸಂಬಂಧ ಸಿಎಂ ಬೊಮ್ಮಾಯಿ ಸಭೆ ಬಳಿಕ ಬುಧವಾರ ಹೀಗೆ ತಿಳಿಸಿದ್ದಾರೆ. ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ್ರೆ ಪೊಲೀಸರಿಂದ ದಂಡ ವಿಧಿಸಲಾಗುತ್ತದೆ. ವಾಹನ ಮಾಲೀಕರಿಗೆ ಎಂದಿನಂತೆ ಪೊಲೀಸರು ದಂಡ ಹಾಕ್ತಾರೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಟೋಯಿಂಗ್ ವ್ಯವಸ್ಥೆ ತಾತ್ಕಾಲಿಕ ರದ್ದು ಎಂದು ಹೇಳಿದ್ದಾರೆ.

ನೋ ಪಾರ್ಕಿಂಗ್‌ ಬೋರ್ಡ್‌ಗಳನ್ನು ಹೆಚ್ಚು ಅಳವಡಿಸುತ್ತೇವೆ. ಯಾವ ರಸ್ತೆಯಲ್ಲಿ ಪಾರ್ಕಿಂಗ್‌ ಮಾಡಬೇಕೆಂದು ಸೂಕ್ತ ಮಾಹಿತಿ ನೀಡುತ್ತೇವೆ. ಈ ಬಗ್ಗೆ ವಾಹನ ಸವಾರರಿಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿ ತಾತ್ಕಾಲಿಕವಾಗಿ ಟೋಯಿಂಗ್​ ನಿಲ್ಲಿಸಿದ್ದೇವೆ. ಸಾರ್ವಜನಿಕರ ಮನವಿ ಮೇರೆಗೆ ಟೋಯಿಂಗ್​​​ ನಿಲ್ಲಿಸಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡ್ತೇವೆ. ಹೊಸ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚೆ ಮಾಡುತ್ತೇವೆ ಎಂದು ಸಭೆ ಬಳಿಕ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಬುಧವಾರ ಸಿಎಂ ಜೊತೆಗಿನ ಸಭೆಗೂ ಮುನ್ನ ಹೇಳಿಕೆ ನೀಡಿದ್ದರು.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಗೊಂದಲ ವಿಚಾರವಾಗಿ ಟೋಯಿಂಗ್‌ ಸಂಬಂಧ ನಡೆಸಿದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಸಿಬ್ಬಂದಿ ಜವಾಬ್ದಾರಿ, SOP ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಒಂದೇ ಏಜೆನ್ಸಿಗೆ ಟೋಯಿಂಗ್‌ನ್ನು ನೀಡಿಲ್ಲ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದರು. ಈ ಬಗ್ಗೆ ಅರಮನೆ ಮೈದಾನದಲ್ಲಿ ಸಭೆ ಬಳಿಕ ರವಿಕಾಂತೇಗೌಡ ಮಾಹಿತಿ ನೀಡಿದ್ದರು.

ಅವರ ಜವಾಬ್ದಾರಿ ಎಸ್ಒಪಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಟೋಯಿಂಗ್ ಅನ್ನು ಒಂದು ಏಜೆನ್ಸಿಗೆ ಕೊಟ್ಟಿಲ್ಲ. ಫೀಡ್ ಬ್ಯಾಕ್ ಸಂಗ್ರಹಿಸಿ ಎಸ್ಓಪಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಭೆ ಬಳಿಕ ಜಂಟಿ‌ ಪೋಲಿಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದರು.

ಇದನ್ನೂ ಓದಿ: ಟೋಯಿಂಗ್ ವಿಚಾರದ ಫೀಡ್​ಬ್ಯಾಕ್ ಸಂಗ್ರಹಿಸಿ ಎಸ್​ಒಪಿ ಕುರಿತು ಮನವರಿಕೆ ಮಾಡಲಾಗಿದೆ: ರವಿಕಾಂತೇಗೌಡ ಹೇಳಿಕೆ

ಇದನ್ನೂ ಓದಿ: ಟೋಯಿಂಗ್ ಮಾಫಿಯಾವನ್ನು ಕೊನೆಗಾಣಿಸುವ ಭರವಸೆ ನೀಡಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ