ಟೋಯಿಂಗ್ ವಿಚಾರದ ಫೀಡ್​ಬ್ಯಾಕ್ ಸಂಗ್ರಹಿಸಿ ಎಸ್​ಒಪಿ ಕುರಿತು ಮನವರಿಕೆ ಮಾಡಲಾಗಿದೆ: ರವಿಕಾಂತೇಗೌಡ ಹೇಳಿಕೆ

ಒಂದೇ ಏಜೆನ್ಸಿಗೆ ಟೋಯಿಂಗ್‌ನ್ನು ನೀಡಿಲ್ಲ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಸಭೆ ಬಳಿಕ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಟೋಯಿಂಗ್ ವಿಚಾರದ ಫೀಡ್​ಬ್ಯಾಕ್ ಸಂಗ್ರಹಿಸಿ ಎಸ್​ಒಪಿ ಕುರಿತು ಮನವರಿಕೆ ಮಾಡಲಾಗಿದೆ: ರವಿಕಾಂತೇಗೌಡ ಹೇಳಿಕೆ
ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ
Follow us
TV9 Web
| Updated By: ganapathi bhat

Updated on:Feb 02, 2022 | 7:35 PM

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಗೊಂದಲ ವಿಚಾರವಾಗಿ ಟೋಯಿಂಗ್‌ ಸಂಬಂಧ ನಡೆಸಿದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಸಿಬ್ಬಂದಿ ಜವಾಬ್ದಾರಿ, SOP ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಒಂದೇ ಏಜೆನ್ಸಿಗೆ ಟೋಯಿಂಗ್‌ನ್ನು ನೀಡಿಲ್ಲ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಸಭೆ ಬಳಿಕ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಅವರ ಜವಾಬ್ದಾರಿ ಎಸ್ಒಪಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಟೋಯಿಂಗ್ ಅನ್ನು ಒಂದು ಏಜೆನ್ಸಿಗೆ ಕೊಟ್ಟಿಲ್ಲ. ಫೀಡ್ ಬ್ಯಾಕ್ ಸಂಗ್ರಹಿಸಿ ಎಸ್ಓಪಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಭೆ ಬಳಿಕ ಜಂಟಿ‌ ಪೋಲಿಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ವಿಕಾಸ ಸೌಧದಲ್ಲಿ ಗೃಹ ಸಚಿವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿದೆ. ಈ ಹಿನ್ನಲೆ ವಿಕಾಸ ಸೌಧ ಗೃಹಸಚಿವರ ಸಭೆಗೆ ರವಿಕಾಂತೇಗೌಡ ತೆರಳಿದ್ದಾರೆ.

ಟೋಯಿಂಗ್ ಸಂಬಂಧ ಗೃಹಸಚಿವರ ನೇತೃತ್ವದಲ್ಲಿ ಸಭೆ ವಿಚಾರವಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿಗೆ ಮಾಹಿತಿ ನೀಡಲಾಗುತ್ತದೆ. ಹಿರಿಯ ಅಧಿಕಾರಿಗಳ ಅಭಿಪ್ರಾಯ, ವರದಿ ಬಗ್ಗೆ ಸಿಎಂ ಗಮನಕ್ಕೆ ತರಲಾಗುವುದು. ಸಿಎಂ ಜೊತೆ ಕೆಲ ಕಾಲ ಚರ್ಚೆ ಬಳಿಕ ಗೈಡ್‌ಲೈನ್ಸ್‌ ಬಗ್ಗೆ ಮಾಹಿತಿ ನೀಡಲಾಗುವುದು. ಟೋಯಿಂಗ್ ಮಾರ್ಗಸೂಚಿ ಬಗ್ಗೆ ಮಾಹಿತಿಯನ್ನು ಆರಗ ಜ್ಞಾನೇಂದ್ರ ನೀಡಲಿದ್ದಾರೆ.

ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ; ಡಾ.ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ

ಸಭೆಗೂ ಮುನ್ನ, ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಬೆಂಗಳೂರಿನಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದರು. ಟೋಯಿಂಗ್ ಮಾಡುವ ವೇಳೆ ವ್ಯಕ್ತಿ ವಾಹನದ ಹಿಂದೆ ಹೋಗಿದ್ದ. ಟೋಯಿಂಗ್ ವೇಳೆ ನಿಯಮ ಪಾಲಿಸಿಲ್ಲ ಎಂಬ ಆರೋಪವಿದೆ. ಆದರೆ ವಿಡಿಯೋ ಎಡಿಟ್ ಮಾಡಿ ಬಿಡುಗಡೆ ಮಾಡಲಾಗಿದೆ. ಜೆ.ಬಿ. ನಗರದಲ್ಲಿ ವ್ಯಕ್ತಿಯ ದ್ವಿಚಕ್ರ ವಾಹನ ಬಿಟ್ಟು ಕಳಿಸಲಾಗಿದೆ. 15 ಮೀಟರ್ ದೂರ ಹೋದ ಬಳಿಕ ಬೈಕ್ ಬಿಟ್ಟು ಕಳಿಸಿದ್ದಾರೆ. ದ್ವಿಚಕ್ರ ವಾಹನದ ಮಾಲೀಕನಿಗೆ ದಂಡವನ್ನು ಕೂಡ ವಿಧಿಸಿಲ್ಲ ಎಂದು ಬೆಂಗಳೂರಿನಲ್ಲಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದ್ದರು.

ಟೋಯಿಂಗ್ ವೇಳೆ ವಾಹನಗಳ ಮಾಲೀಕರಿಗೆ ಕಿರುಕುಳ ವಿಚಾರವಾಗಿ ರವಿಕಾಂತೇಗೌಡ ಮಾಹಿತಿ ನೀಡಿದ್ದರು. ಬೆಂಗಳೂರಿನ ಎಸ್.ಜೆ.ಪಾರ್ಕ್ ಬಳಿ ನಡೆದ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಾಹನ ಟೋಯಿಂಗ್ ಮಾಡುವಾಗ ಮಹಿಳೆ ಕಲ್ಲು ತೂರಿದ್ದಾರೆ. ಪ್ರಕರಣ ದಾಖಲಿಸಿ, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ 2 ಬಾರಿ ಹಲ್ಲೆ ಮಾಡಿರುವುದಾಗಿ ಕೇಸ್ ದಾಖಲಾಗಿದೆ. ಮಹಿಳಾ ಸಿಬ್ಬಂದಿ ಮೇಲೆ ಕಲ್ಲು ತೂರಿರುವ ಆರೋಪವೂ ಇದೆ. ವೈರಲ್ ಆದ ವಿಡಿಯೋದಲ್ಲಿ ಎಎಸ್‌ಐ ಹಲ್ಲೆ ನಡೆಸಿದ್ದಾರೆ. ಮಹಿಳೆ ಮೇಲೆ ASI ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಎಎಸ್‌ಐರನ್ನು ಕೂಡಲೇ ಅಮಾನತು ಮಾಡಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಟೋಯಿಂಗ್ ನೀತಿ ಪುನರ್​ ಪರಿಶೀಲನೆ ಬಗ್ಗೆ ಚರ್ಚೆ; ರಾಂಗ್​ ಪಾರ್ಕಿಂಗ್​ಗೆ ಬೇರೆ ರೀತಿಯಲ್ಲಿ ಕ್ರಮ: ಕಮಲ್ ಪಂತ್ ಹೇಳಿಕೆ

ಇದನ್ನೂ ಓದಿ: ಟೋಯಿಂಗ್ ಮಾಫಿಯಾವನ್ನು ಕೊನೆಗಾಣಿಸುವ ಭರವಸೆ ನೀಡಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published On - 6:49 pm, Wed, 2 February 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?