ಸಾರ್ವಜನಿಕರ ಮನವಿ ಮೇರೆಗೆ ತಾತ್ಕಾಲಿಕವಾಗಿ ಟೋಯಿಂಗ್ ನಿಲ್ಲಿಸಿದ್ದೇವೆ: ಆರಗ ಜ್ಞಾನೇಂದ್ರ ಹೇಳಿಕೆ

ಒಂದೇ ಏಜೆನ್ಸಿಗೆ ಟೋಯಿಂಗ್‌ನ್ನು ನೀಡಿಲ್ಲ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದರು. ಈ ಬಗ್ಗೆ ಅರಮನೆ ಮೈದಾನದಲ್ಲಿ ಸಭೆ ಬಳಿಕ ರವಿಕಾಂತೇಗೌಡ ಮಾಹಿತಿ ನೀಡಿದ್ದರು.

ಸಾರ್ವಜನಿಕರ ಮನವಿ ಮೇರೆಗೆ ತಾತ್ಕಾಲಿಕವಾಗಿ ಟೋಯಿಂಗ್ ನಿಲ್ಲಿಸಿದ್ದೇವೆ: ಆರಗ ಜ್ಞಾನೇಂದ್ರ ಹೇಳಿಕೆ
ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)
TV9kannada Web Team

| Edited By: ganapathi bhat

Feb 02, 2022 | 7:34 PM


ಬೆಂಗಳೂರು: ನಗರದಲ್ಲಿ ತಾತ್ಕಾಲಿಕವಾಗಿ ಟೋಯಿಂಗ್​ ನಿಲ್ಲಿಸಿದ್ದೇವೆ. ಸಾರ್ವಜನಿಕರ ಮನವಿ ಮೇರೆಗೆ ಟೋಯಿಂಗ್​​​ ನಿಲ್ಲಿಸಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡ್ತೇವೆ. ಹೊಸ ವ್ಯವಸ್ಥೆ ಜಾರಿಗೆ ತರುವ ಕುರಿತು ಚರ್ಚೆ ಮಾಡುತ್ತೇವೆ ಎಂದು ಸಭೆ ಬಳಿಕ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಬುಧವಾರ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಗೊಂದಲ ವಿಚಾರವಾಗಿ ಟೋಯಿಂಗ್‌ ಸಂಬಂಧ ನಡೆಸಿದ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಸಿಬ್ಬಂದಿ ಜವಾಬ್ದಾರಿ, SOP ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಒಂದೇ ಏಜೆನ್ಸಿಗೆ ಟೋಯಿಂಗ್‌ನ್ನು ನೀಡಿಲ್ಲ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದರು. ಈ ಬಗ್ಗೆ ಅರಮನೆ ಮೈದಾನದಲ್ಲಿ ಸಭೆ ಬಳಿಕ ರವಿಕಾಂತೇಗೌಡ ಮಾಹಿತಿ ನೀಡಿದ್ದರು.

ಅವರ ಜವಾಬ್ದಾರಿ ಎಸ್ಒಪಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಟೋಯಿಂಗ್ ಅನ್ನು ಒಂದು ಏಜೆನ್ಸಿಗೆ ಕೊಟ್ಟಿಲ್ಲ. ಫೀಡ್ ಬ್ಯಾಕ್ ಸಂಗ್ರಹಿಸಿ ಎಸ್ಓಪಿ ಕುರಿತು ಮನವರಿಕೆ ಮಾಡಿಕೊಡಲಾಗಿದೆ ಎಂದು ಸಭೆ ಬಳಿಕ ಜಂಟಿ‌ ಪೋಲಿಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದರು.

ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ; ಡಾ.ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ

ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಬಗ್ಗೆ ಬೆಂಗಳೂರಿನಲ್ಲಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದರು. ಟೋಯಿಂಗ್ ಮಾಡುವ ವೇಳೆ ವ್ಯಕ್ತಿ ವಾಹನದ ಹಿಂದೆ ಹೋಗಿದ್ದ. ಟೋಯಿಂಗ್ ವೇಳೆ ನಿಯಮ ಪಾಲಿಸಿಲ್ಲ ಎಂಬ ಆರೋಪವಿದೆ. ಆದರೆ ವಿಡಿಯೋ ಎಡಿಟ್ ಮಾಡಿ ಬಿಡುಗಡೆ ಮಾಡಲಾಗಿದೆ. ಜೆ.ಬಿ. ನಗರದಲ್ಲಿ ವ್ಯಕ್ತಿಯ ದ್ವಿಚಕ್ರ ವಾಹನ ಬಿಟ್ಟು ಕಳಿಸಲಾಗಿದೆ. 15 ಮೀಟರ್ ದೂರ ಹೋದ ಬಳಿಕ ಬೈಕ್ ಬಿಟ್ಟು ಕಳಿಸಿದ್ದಾರೆ. ದ್ವಿಚಕ್ರ ವಾಹನದ ಮಾಲೀಕನಿಗೆ ದಂಡವನ್ನು ಕೂಡ ವಿಧಿಸಿಲ್ಲ ಎಂದು ಬೆಂಗಳೂರಿನಲ್ಲಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದ್ದರು.

ಟೋಯಿಂಗ್ ವೇಳೆ ವಾಹನಗಳ ಮಾಲೀಕರಿಗೆ ಕಿರುಕುಳ ವಿಚಾರವಾಗಿ ರವಿಕಾಂತೇಗೌಡ ಮಾಹಿತಿ ನೀಡಿದ್ದರು. ಬೆಂಗಳೂರಿನ ಎಸ್.ಜೆ.ಪಾರ್ಕ್ ಬಳಿ ನಡೆದ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ವಾಹನ ಟೋಯಿಂಗ್ ಮಾಡುವಾಗ ಮಹಿಳೆ ಕಲ್ಲು ತೂರಿದ್ದಾರೆ. ಪ್ರಕರಣ ದಾಖಲಿಸಿ, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ 2 ಬಾರಿ ಹಲ್ಲೆ ಮಾಡಿರುವುದಾಗಿ ಕೇಸ್ ದಾಖಲಾಗಿದೆ. ಮಹಿಳಾ ಸಿಬ್ಬಂದಿ ಮೇಲೆ ಕಲ್ಲು ತೂರಿರುವ ಆರೋಪವೂ ಇದೆ. ವೈರಲ್ ಆದ ವಿಡಿಯೋದಲ್ಲಿ ಎಎಸ್‌ಐ ಹಲ್ಲೆ ನಡೆಸಿದ್ದಾರೆ. ಮಹಿಳೆ ಮೇಲೆ ASI ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಎಎಸ್‌ಐರನ್ನು ಕೂಡಲೇ ಅಮಾನತು ಮಾಡಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಜೊತೆ ಸಭೆ ಎಫೆಕ್ಸ್: ಬೆಂಗಳೂರಿನಲ್ಲಿ ಸದ್ಯಕ್ಕೆ ವಾಹನ ಟೋಯಿಂಗ್‌ ಕ್ಯಾನ್ಸಲ್ ಎಂದ ಆಯುಕ್ತ ಕಮಲ್ ಪಂತ್

ಇದನ್ನೂ ಓದಿ: ಅಂಗಲಾಚಿದ್ದರೂ ಬೈಕ್ ಟೋಯಿಂಗ್ ಮಾಡಿದ್ದ ಪ್ರಕರಣದ ತನಿಖೆಗೆ ಆದೇಶ, 4 ಲಕ್ಷ ಮೌಲ್ಯದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada