ಏರಿಕೆ ಆಗಿಯೇಬಿಡ್ತು ಹೋಟೆಲ್ ತಿಂಡಿ ತಿನಿಸು ದರ; ಗ್ರಾಹಕರ ಕೈ ಸುಡುವಂತಿದೆ ಶೇ. 5-10ರಷ್ಟು ಬೆಲೆ ಏರಿಕೆ

ಪಾರ್ಸೆಲ್ ದರವೂ ಶೇ.5ರಿಂದ 10ರಷ್ಟು ಹೆಚ್ಚಳವಾಗಿದ್ದು ಸೆಲ್ಫ್ ಸರ್ವಿಸ್ ಆಹಾರದ ಬೆಲೆಯಲ್ಲೂ ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಶೇ.5ರಿಂದ 10ರಷ್ಟು ದರ ಹೆಚ್ಚಳ ಮಾಡಿದ್ದಾರೆ.

ಏರಿಕೆ ಆಗಿಯೇಬಿಡ್ತು ಹೋಟೆಲ್ ತಿಂಡಿ ತಿನಿಸು ದರ; ಗ್ರಾಹಕರ ಕೈ ಸುಡುವಂತಿದೆ ಶೇ. 5-10ರಷ್ಟು ಬೆಲೆ ಏರಿಕೆ
ವೆಜ್ ಬಿರಿಯಾನಿ (ಪ್ರಾತಿನಿಧಿಕ ಚಿತ್ರ)
Edited By: ಆಯೇಷಾ ಬಾನು

Updated on: Nov 08, 2021 | 12:40 PM

ಬೆಂಗಳೂರು: ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಹೋಟೆಲ್ಗಳಲ್ಲಿ ದರ ಏರಿಕೆ ಮಾಡಲಾಗುತ್ತಿದ್ದು ಹೋಟೆಲ್ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿಲಿದೆ. ಊಟ, ತಿಂಡಿ, ಕಾಫಿ ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆ ಏರಿಕೆ ಮಾಡಲಾಗಿದೆ. ಪಾರ್ಸೆಲ್ ದರವೂ ಶೇ.5ರಿಂದ 10ರಷ್ಟು ಹೆಚ್ಚಳವಾಗಿದ್ದು ಸೆಲ್ಫ್ ಸರ್ವಿಸ್ ಆಹಾರದ ಬೆಲೆಯಲ್ಲೂ ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಶೇ.5ರಿಂದ 10ರಷ್ಟು ದರ ಹೆಚ್ಚಳ ಮಾಡಿದ್ದಾರೆ.

ನಿರಂತರವಾಗಿ ಏರಿಕೆಯಾಗ್ತಿರೊ ವಾಣಿಜ್ಯ ಅಡುಗೆ ಅನಿಲ ಬೆಲೆ, ದಿನಸಿ ಸಾಮಾಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಅಡುಗೆ ಎಣ್ಣೆಯ ಬೆಲೆಯೂ ದುಬಾರಿಯಾಗಿದೆ. 1794 ರೂಪಾಯಿಗೆ ಸಿಗಬೇಕಿದ್ದ 19 ಕೆ.ಜಿ. ತೂಕದ ವಾಣಿಜ್ಯ ಸಿಲೆಂಡರ್ ದರ 2 ಸಾವಿರ ರೂ. ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ಗಳು ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ಹಂಚಿಕೊಂಡಿದ್ದರು. ಸದ್ಯ ದೀಪಾವಳಿ ಬಳಿಕ ದರ ಏರಿಕೆ ಜಾರಿ ಮಾಡಿವುದಾಗಿ ತಿಳಿಸಿದ್ದ ಪಿ.ಸಿ.ರಾವ್, ಇಂದಿನಿಂದ ದರ ಏರಿಕೆ ನಿಯಮ ಜಾರಿ ಮಾಡಲು ಹೋಟೆಲ್ಗಳಿಗೆ ಸೂಚಿಸಿದ್ದಾರೆ.

ಹೋಟೆಲ್ ಹೊಸ ದರ ಹೀಗಿದೆ
ಮಸಾಲೆ ದೋಸೆಯ ಬೆಲೆ 65ರಿಂದ 75ರೂ.ಗೆ ಏರಿಕೆ
ಇಡ್ಲಿ, ವಡೆ 35 ರೂ.ನಿಂದ 40ರೂಪಾಯಿಗೆ ಏರಿಕೆ
ಕಾಫೀ, ಟೀ ಬೆಲೆ 15 ರೂ.ನಿಂದ 20 ರೂಪಾಯಿಗೆ ಏರಿಕೆ
ಚೌಚೌ ಬಾತ್ 60 ರೂ.ನಿಂದ 70ರೂಪಾಯಿಗೆ ಏರಿಕೆ
ಸೌಥ್ ಇಂಡಿಯನ್ ಊಟ 85 ರೂ.ನಿಂದ $95ಕ್ಕೆ ಏರಿಕೆ
ರೈಸ್ ಬಾತ್ 40 ರೂ.ನಿಂದ 50 ರೂಪಾಯಿಗೆ ಹೆಚ್ಚಳ
ರವಾ ಇಡ್ಲಿ ಬೆಲೆ 40 ರೂ.ನಿಂದ 45 ರೂಪಾಯಿಗೆ ಏರಿಕೆ
ಅಕ್ಕಿ ರೊಟ್ಟಿ ಬೆಲೆ 45 ರೂ.ನಿಂದ 50 ರೂಪಾಯಿಗೆ ಏರಿಕೆ
ಫ್ರೈಡ್ ರೈಸ್ ಬೆಲೆ 100 ರೂ.ನಿಂದ 110 ರೂಪಾಯಿಗೆ ಏರಿಕೆ
ಗೋಬಿ ಮಂಚೂರಿ 1 ಪ್ಲೇಟ್ ₹100ರಿಂದ 110ರೂ.ಗೆ ಏರಿಕೆ
ಪನ್ನೀರ್ ಮಂಚೂರಿ ₹110ರಿಂದ 120 ರೂಪಾಯಿಗೆ ಹೆಚ್ಚಳ
ಒಂದು ಪ್ಲೇಟ್ ಪೂರಿ ₹65ರಿಂದ 70ರೂಪಾಯಿಗೆ ಏರಿಕೆ

ಇದನ್ನೂ ಓದಿ: Hotels to hike food price: ದರ ದರನೇ ಏರುತ್ತಿರುವ ಗ್ಯಾಸ್​ ರೇಟ್, ಗ್ರಾಹಕನಿಗೆ ಬರೆ ಎಳೆಯಲು ಹೋಟೆಲ್ ಮಾಲೀಕರ​ ಸಿದ್ಧತೆ

TV9 Web

TV9 Kannada

Read More
Loading...
Unable to load recommendations.
Follow Us