ಬೆಂಗಳೂರು, ಜೂನ್ 15: ಬೆಂಗಳೂರಿನಲ್ಲಿ (Bengaluru) ಒಂದು ವಾರದಿಂದ ಹವಮಾನದಲ್ಲಿ ಭಾರಿ (Climate Change) ಬದಲಾವಣೆಯಾಗುತ್ತಿದ್ದು, ಹವಮಾನ ವೈಪರಿತ್ಯದಿಂದ ಜನರಲ್ಲಿ ಹಲವು ಆರೋಗ್ಯ ಸಮಸ್ಯೆಗಳು (health Issues) ಕಾಡುವುದಕ್ಕೆ ಶುರುವಾಗಿದೆ. ಮಳೆಯಲ್ಲಿ ಸ್ವಲ್ಪ ನೆನೆದರೂ ಚಳಿ, ಜ್ವರ, ಕೆಮ್ಮು, ನೆಗಡಿ, ತಲೆನೋವಿನಂತಹ ಕಾಯಿಲೆಗಳು ಬಾಧಿಸುವುದಕ್ಕೆ ಶುರುವಾಗಿದ್ದು, ನಗರದ ಆಸ್ಪತ್ರೆಗಳಲ್ಲಿ ಆಸ್ಪತ್ರೆಗೆ ದಾಖಾಲಾಗುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ವಯಸ್ಕರಿಂದ ಹಿಡಿದು ಮಕ್ಕಳವರೆಗೂ ಜ್ವರ, ಕೆಮ್ಮು, ಶೀತ, ಡೆಂಗ್ಯೂ, ಚಿಕೂನ್ ಗುನ್ಯಾ, ವಾಂತಿಯಂತಹ ಪ್ರಕರಣಗಳು ಹೆಚ್ಚಳವಾಗಿದ್ದು, ಆರೋಗ್ಯದ ಮೇಲೆ ನಿಗಾ ಇರಿಸುವಮಂತೆ ವೈದ್ಯರು ಸಲಹೆ ನೀಡಿದ್ದಾರೆ. ಸದ್ಯ ನಗರದಲ್ಲಿ ಬೆಳಗ್ಗೆ ಬಿಸಿಲಿನ ವಾತಾವರಣ, ಮಧ್ಯಾಹ್ನ ಚಳಿಯ ವಾತಾವರಣ, ಸಂಜೆಯ ಮೇಲೆ ಮಳೆ, ಚಳಿ ಕಂಡುಬರುತ್ತಿದ್ದು, ಈ ಬದಲಾವಣೆ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಜೊತೆಗೆ ಈ ಅವಧಿಯಲ್ಲಿ ಫುಡ್ ಪಾಯಿಸನ್ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಎಲ್ಲೆಂದರಲ್ಲಿ ನೀರು, ತಿಂಡಿ, ಊಟ ಮಾಡುವುದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ ಸಂಜಯ್ ಕೂಡ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಸೂಕ್ತ ಆಹಾರ ತಪಾಸಣೆಗೆ ರಾಜ್ಯ ಸರ್ಕಾರ ಸೂಚನೆ
ಒಟ್ಟಿನಲ್ಲಿ ಮಂಗಾರು ಮಳೆ ಈಗಷ್ಟೇ ಚುರುಕಾಗಿದ್ದು, ಮುಂದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜನರು ಆರೋಗ್ಯದ ಬಗ್ಗೆ ನಿಗಾವಹಿಸಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ