ಬೆಂಗಳೂರು: ಪ್ರವಾಹದಿಂದ ಇವತ್ತು ಬೆಂಗಳೂರು ನಗರ ನಲುಗುತ್ತಿದೆ. ಬೆಂಗಳೂರು ನಗರವನ್ನು ಬಿಜೆಪಿ ಈ ಅವಾಂತರಕ್ಕೆ ತಂದಿದೆ. ಬಿಜೆಪಿ ಸಂಸದರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಹಾನಿಯಾಗಿದೆ. ಸರ್ಕಾರ ಕೂಡಲೇ ತಲಾ 5 ಲಕ್ಷ ರೂ ಪರಿಹಾರ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ವೇವಾಲ ಆಗ್ರಹಿಸಿದರು. ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ನಾಯಕರ ಜಂಟಿ ಸುದ್ದಿಗೋಷ್ಠಿ ಅವರು ಮಾತನಾಡಿದರು. ಬೆಂಗಳೂರು ಪರಿಸ್ಥಿತಿ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಸರ್ಕಾರಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯಿಸಿದರು. ನಿನ್ನೆ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಪರಿಶೀಲನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಬೆಂಗಳೂರಲ್ಲಿ ಒತ್ತುವರಿ ಜಾಗ ತೆರವು ಮಾಡಿಲ್ಲ. ಬೆಂಗಳೂರಿನ ಕೆರೆ ಹಾಗೂ ರಾಜಕಾಲುವೆಯಲ್ಲೂ ಹೂಳು ತೆಗೆದಿಲ್ಲ ಎಂದು ಹೇಳಿದರು.
ಭಾರಿ ಮಳೆಯಿಂದ ನಗರದಲ್ಲಿ ಪೀಠೋಪಕರಣ, ವಾಹನಗಳು ಸಹ ಹಾಳಾಗಿವೆ ಎಂದು ಸರ್ಕಾರದ ವಿರುದ್ಧ ರಣದೀಪ್ ಸಿಂಗ್ ಸುರ್ಜೇವಾಲ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ರಾಮಲಿಂಗಾರೆಡ್ಡಿ, ಜಿ.ಪರಮೇಶ್ವರ್, ಸಲೀಂ ಅಹ್ಮದ್, ಪ್ರಿಯಾಂಕ್ ಖರ್ಗೆ, ವಿ.ಎಸ್.ಉಗ್ರಪ್ಪ, ರಾಜೀವ್ ಗೌಡ ಸೇರಿ ಹಲವರು ಉಪಸ್ಥಿತರಿದ್ದರು.
ಸರ್ಕಾರ ಸೂಕ್ತ ಕ್ರಮ ಯಾಕೆ ಜರುಗಿಸಿಲ್ಲ? ಒತ್ತುವರಿಯಾಗಿರುವುದನ್ನ ಯಾಕೆ ತೆರವು ಮಾಡಿಲ್ಲ? ಮಳೆಯಲ್ಲಿ ಮುಳುಗಿರುವ ಮನೆಗೆ ತಲಾ ೫ ಲಕ್ಷ ರೂ ಪರಿಹಾರವನ್ನ ನೀಡಬೇಕು. ಪೀಠೋಪಕರಣ,ವಾಹನಗಳು ಹಾಳಾಗಿವೆ. ಅವುಗಳ ಮರು ಹೊಂದಾಣಿಕೆಗೆ ಪರಿಹಾರ ನೀಡಬೇಕು. ಕೂಡಲೇ ಸಹಾಯ ಕೇಂದ್ರಗಳನ್ನ ಪ್ರಾರಂಭಿಸಬೇಕು ಎಂದು ಸರ್ಕಾರಕ್ಕೆ ಸುರ್ಜೇವಾಲ ಏಳು ಪ್ರಶ್ನೆ ಕೇಳುವ ಮೂಲಕ ಒತ್ತಾಯಿಸಿದರು. ಇನ್ನೂ ಸುದ್ದಿಗೋಷ್ಠಿಯಲ್ಲಿ ಭಾರತ್ ಐಕ್ಯತಾ ಯಾತ್ರೆಯ ವೆಬ್ಸೈಟ್ನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಲಾಂಚ್ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.