ಬೆಂಗಳೂರು: ಚಾಕುವಿನಿಂದ ಪತ್ನಿ ಕುತ್ತಿಗೆ ಕೊಯ್ದು ಬಳಿಕ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಗ್ರಾಮ ಯಡವನಹಳ್ಳಿ ಎಂಬಲ್ಲಿ ನಡೆದಿದೆ. ಲಾವಣ್ಯ (26) ಹತ್ಯೆಗೈದು, ಸಂಪತ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಂಪತ್ ಕುಮಾರ್‌ನಿಂದ ಪತ್ನಿ ಹತ್ಯೆ ಮಾಡಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ನಿನ್ನೆ ರಾಜಿ ಪಂಚಾಯಿತಿ ನಡೆದಿತ್ತು. ರಾಜಿ ಪಂಚಾಯಿತಿ ಬಳಿಕ ಪತಿ ಸಂಪತ್ ಪತ್ನಿ ಹತ್ಯೆಗೈದಿದ್ದಾರೆ. ಮನೆಯಲ್ಲಿದ್ದ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯವಾಗಿದೆ. ಘಟನಾ ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: 2 ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಸಂಪಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದರೋಡೆ ಪ್ರಕರಣದಲ್ಲಿ ಸೈಯದ್ ಅರ್ಬಾಜ್, ಮೊಹಮ್ಮದ್ ಅರ್ಬಾಜ್, ಬೈಕ್ ಕಳ್ಳತನ ಪ್ರಕರಣದಲ್ಲಿ ಶೇಕ್ ಮುದಾಸೀರ್ ಅಹ್ಮದ್, ಸೈಯದ್ ನಜೀಮ್ ಬಂಧನ ಮಾಡಲಾಗಿದೆ. 5 ಲಕ್ಷ ರೂ. ಮೌಲ್ಯದ ಚಿನ್ನದ ಸರ, ಬೆಳ್ಳಿ ಸರ, 3 ಬೈಕ್, ಆಟೋ ವಶಕ್ಕೆ ಪಡೆಯಲಾಗಿದೆ.
ಗದಗ: ಮುಂಡರಗಿ ತಾಲೂಕಿನ ಬಿದರಹಳ್ಳಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 14 ಲಕ್ಷ 83 ಸಾವಿರ ನಗದು, 4 ಕಾರು, 18 ಮೊಬೈಲ್ ಜಪ್ತಿ ಮಾಡಲಾಗಿದೆ. ಗದಗ ಮೂಲದ 15 ಕ್ಕೂ ಹೆಚ್ಚು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಚಿತ್ರದುರ್ಗ, ಹಾವೇರಿ, ದಾವಣಗೆರೆ, ವಿಜಯನಗರ, ಬಳ್ಳಾರಿ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ.
ಹುಬ್ಬಳ್ಳಿ: ಇಲ್ಲಿ ಅಂತಾರಾಜ್ಯ ದರೋಡೆಕೋರರ ಬಂಧನ ಮಾಡಲಾಗಿದೆ. ರಾಜಸ್ಥಾನ ಮೂಲದ ಮೂವರು ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರ ಬಳಿಯಿದ್ದ 7.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ವಾಹನ ತಪಾಸಣೆ ವೇಳೆ ASIಗೆ ಬೈಕ್ ಡಿಕ್ಕಿ, ಬೆಂಗಳೂರಿನಲ್ಲಿ ಮದ್ಯದ ನಶೆಯಲ್ಲಿ ಜೀಪ್ ಚಲಾಯಿಸಿ ಸರಣಿ ಅಪಘಾತ
ಇದನ್ನೂ ಓದಿ: ಮಂಡ್ಯದಲ್ಲಿ ಸ್ನೇಹಿತನ ಕೊಲೆ ಮಾಡಿ ಮಾದಪ್ಪನ ದರ್ಶನ ಮುಗಿಸಿ ಮೈಸೂರಿನಲ್ಲಿ ಅಡಗಿ ತುಳಿತಿದ್ದ ಕಿರಾತಕರು ಅರೆಸ್ಟ್