ಬೆಂಗಳೂರು: ಬೆಂಗಳೂರಿನ ಕೆಲವೆಡೆ ವರುಣ(Bengaluru Rain) ಆರ್ಭಟ ಜೋರಾಗಿದ್ದು ಅಕ್ಷರಶಃ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೀಕರ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಮುಳುಗಿವೆ. ಸುಮಾರು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಸದ್ಯ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು ಆರ್.ಆರ್.ನಗರ ಕ್ಷೇತ್ರದ ಶಾಸಕ, ಸಚಿವ ಮುನಿರತ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಮಸ್ಯೆ ಬಗೆಹರಿಸದಿದ್ರೆ ನಾನು ಮುಂದಿನ ಚುನಾವಣೆಗೆ ನಿಲ್ಲಲ್ಲ ಎಂದಿದ್ದಾರೆ.
ಇಲ್ಲಿನ ಸಮಸ್ಯೆಗೆ ಫುಲ್ ಸ್ಟಾಪ್ ಇಡೋದು ನನ್ನ ಕೆಲಸ, ಕರ್ತವ್ಯ. ಇಲ್ಲವಾದ್ರೆ ನಾನು ಎಲೆಕ್ಷನ್ ನಲ್ಲಿ ಸ್ಪರ್ಧಿಸೊಲ್ಲ. ಆದಷ್ಟುಬೇಗ ಐಡಿಯಲ್ ಹೋಮ್ಸ್ ಲೇಔಟ್ ಸಮಸ್ಯೆ ಇತ್ಯರ್ಥವಾಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ. ಜನಪ್ರತಿನಿಧಿಗಳು ಇರೋದು ಜನರ ಸಮಸ್ಯೆ ಆಲಿಸೋಕೆ. ಜನರ ಸಮಸ್ಯೆ, ನೋವಿಗೆ ಸ್ಪಂಧಿಸದಿದ್ರೆ ಇದ್ದು ಏನ್ ಪ್ರಯೋಜನ? ಜನ ನಮ್ಮನ್ನ ಆಯ್ಕೆ ಮಾಡಿ ಕಳಿಸಿದ್ದಾರೆ, ಅವರ ಕಷ್ಟಕ್ಕೆ ಸ್ಪಂದಿಸಬೇಕು. ಜನರ ಕಷ್ಟಕ್ಕೆ ಸ್ಪಂದಿಸದಿದ್ರೆ ಜನಪ್ರತಿನಿದಿಗಳು ಬದುಕಿದ್ದೂ ಸತ್ತಂತೆ ಎಂದು Tv9ಗೆ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ ನಾಯ್ಡು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: Kerala Rain: ಕೇರಳದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಮನೆ ಹಾನಿಯಾದವರಿಗೆ 25 ಸಾವಿರ ಪರಿಹಾರ ನೀಡ್ತೇವೆ
ಇನ್ನು ಬೆಂಗಳೂರಿನ ಆರ್.ಆರ್.ನಗರದಲ್ಲಿ ಮಳೆಯಿಂದ ಹಾನಿ ವಿಚಾರಕ್ಕೆ ಸಂಬಂಧಿಸಿ ಆದಷ್ಟು ಬೇಗ ಮನೆ ಹಾನಿಯಾದವರಿಗೆ ಪರಿಹಾರ ನೀಡುತ್ತೇವೆ ಎಂದು ಸಚಿವ ಮುನಿರತ್ನ ಭರವಸೆ ಕೊಟ್ಟಿದ್ದಾರೆ. ಮನೆ ಹಾನಿಯಾದವರಿಗೆ ಶೀಘ್ರ 25 ಸಾವಿರ ಪರಿಹಾರ ನೀಡ್ತೇವೆ ಎಂದರು. ಮನೆ ಹಾನಿಯಾದವರಿಗೆ ತಲಾ 25 ಸಾವಿರ ಪರಿಹಾರ ನೀಡುವುದಾಗಿ ನಿನ್ನೆ ಸಿಎಂ ಬೊಮ್ಮಾಯಿ ಪರಿಹಾರ ಘೋಷಿಸಿದ್ದರು.
ಹಾನಿಗೊಳಗಾದ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೆ. ನಿನ್ನೆ ಸಿಎಂ ಬೊಮ್ಮಾಯಿಯವರು ಸಹ ಭೇಟಿ ನೀಡಿದ್ರು. ಹಾನಿಗೊಳಗಾದ ಪ್ರದೇಶಗಳನ್ನ ಪರಿಶೀಲನೆ ನಡೆಸಿದ್ದೇವೆ. ದಿನದ 24 ಗಂಟೆಯೂ ಅಧಿಕಾರಿಗಳಿಗೆ ಅಲರ್ಟ್ ಇರುವಂತೆ ಸೂಚಿಸಿದ್ದೇವೆ. ಯಾವುದೇ ಕರೆ ಬಂದ್ರೂ ರಿಸೀವ್ ಮಾಡಿ ಸ್ಥಳಕ್ಕೆ ಭೇಟಿ ಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜಕಾಲುವೆ ಒತ್ತುವರಿ ಇಡೀ ಬೆಂಗಳೂರನ್ನೇ ಆವರಿಸಿಕೊಂಡಿದೆ. ರಾಜಕಾಲುವೆ ಒತ್ತುವರಿ ಸಂಬಂಧ ಕೂಡಲೇ ಸರ್ವೇ ಮಾಡ್ತೀವಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಆರ್.ಆರ್ ನಗರದಲ್ಲಿ ಎಲ್ಲೆಲ್ಲಿ ಒತ್ತುವರಿ ಆಗಿದೆ ಎಂಬುದರ ಕುರಿತು ಸರ್ವೇ ಮಾಡ್ತೀವಿ. ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಯಾಗಿದ್ರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸಿದ್ದವಿದೆ. ಮಳೆ ಬಂದ್ರೆ ಪದೇಪದೆ ಒಂದೇ ಕಡೆ ಹಾನಿಯೊಗೊಲ್ಲ. ಕ್ಷೇತ್ರದ ಬೇರೆ ಬೇರೆ ಭಾಗಗಳಲ್ಲಿ ಹಾನಿಯುಂಟಾಗಿದೆ. ಇಡೀ ಕ್ಷೇತ್ರದಲ್ಲಿ ಎಷ್ಟು ನಷ್ಟ ಆಗಿದೆ ಎಂಬುದರ ಸರ್ವೇ ನಡೆಸಲಾಗುತ್ತೆ. ಕಂದಾಯ ಇಲಾಖೆ ಅಧಿಕಾರಿಗಳಿಂದ ನಷ್ಟ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ರಾಜ್ಯದಲ್ಲಿ ಆಗುತ್ತಿರುವ ಭೀಕರ ಮಳೆಯಿಂದಾಗಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರೆಡ್ ಅಲರ್ಟ್ ಜಿಲ್ಲೆಗಳ ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ R.ಅಶೋಕ್ ಚರ್ಚಿಸಿದ್ದಾರೆ. ಮಳೆಯಿಂದ ಬೆಳೆಹಾನಿಗೆ ಒಳಗಾದ ಜಿಲ್ಲೆಗಳಲ್ಲಿ ಪರಿಹಾರ ನೀಡಿ ಎಂದು ಸಭೆಯಲ್ಲಿ ಡಿಸಿಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಸೂಚಿಸಿದ್ದಾರೆ. ಇದನ್ನೂ ಓದಿ: ಮಳೆ ಹಾನಿ ಪ್ರದೇಶಗಳಿಗೆ ವಿಪಕ್ಷ ನಾಯಕ ಭೇಟಿ: ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
ಮಳೆ ಹಾನಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇನ್ನೂ 3-4 ತಿಂಗಳು ಕಾರ್ಯಾಚರಣೆ ವೇಗ ಹೆಚ್ಚಿಸಬೇಕು. ಎಲ್ಲೇ ಭೂಕುಸಿತ, ನೆರೆ ಬಂದ್ರೂ ಖುದ್ದು ಡಿಸಿ ಭೇಟಿ ನೀಡಬೇಕು. ತ್ವರಿತವಾಗಿ ಪರಿಹಾರ ನೀಡುವ ಕೆಲಸ ಮಾಡಬೇಕು. ಮನೆ, ಪ್ರಾಣಹಾನಿ ಆದಲ್ಲಿ 48 ಗಂಟೆಯಲ್ಲಿ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಕಂಟ್ರೋಲ್ ರೂಮ್ ಸದಾ ಆಕ್ಟೀವ್ ಆಗಿರಬೇಕು. ಕಾಳಜಿ ಕೇಂದ್ರದಲ್ಲಿ ಊಟೋಪಚಾರ ವ್ಯವಸ್ಥೆ ಮಾಡಬೇಕು. ಇಲಾಖೆ ಸೂಚಿಸಿದ ಪ್ರಕಾರವೇ ಊಟೋಪಚಾರ ವ್ಯವಸ್ಥೆ ಮಾಡಬೇಕು. ಭೂಕುಸಿತ ಆಗುವ ಸಾಧ್ಯತೆ ಇರುವ ಪ್ರದೇಶದ ಜನರ ಸ್ಥಳಾಂತರವನ್ನು ಖುದ್ದು ಡಿಸಿಗಳೇ ಜನರ ಮನವೊಲಿಸಿ ಸ್ಥಳಾಂತರ ಮಾಡಿಸಬೇಕು. ಅಗತ್ಯ ಇರುವ ಸಾಮಗ್ರಿಗಳನ್ನು ತಕ್ಷಣ ಖರೀದಿಸಲು ಸೂಚಿಸಿದ್ದಾರೆ. ಈಗ ಬೆಳೆಹಾನಿಯಾದ ಜಿಲ್ಲೆಗಳಲ್ಲಿ ತ್ವರಿತವಾಗಿ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ಡಿಸಿಗಳಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
Published On - 8:14 pm, Thu, 19 May 22