ಅನಿವಾರ್ಯತೆ ಇಲ್ಲದಿದ್ದರೆ ರಾಜ್ಯಪಾಲರಿಗೆ ಉತ್ತರ ಕೊಡುವುದಿಲ್ಲ, ಯಾವುದಕ್ಕೆ ಕೊಡಬೇಕೋ ಕೊಡುತ್ತೇವೆ -ಡಾ.ಪರಮೇಶ್ವರ್

ರಾಜ್ಯಪಾಲರ ಹುದ್ದೆ ಅತ್ಯಂತ ಜವಾಬ್ದಾರಿಯುತ ಸ್ಥಾನ. ಸಂವಿಧಾನ ರಕ್ಷಣೆ ಮಾಡುವ ಸ್ಥಾನ ಕೊಟ್ಟಿದ್ದಾರೆ. ಪ್ರತಿ ನಿತ್ಯ ಆಡಳಿತದಲ್ಲಿ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ. ಆದರೆ ದಿನ ನಿತ್ಯ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿದ್ದಾರೆ ಎಂದಿ ಡಾ.ಪರಮೇಶ್ವರ್​​ ಅವರು ಕಿಡಿಕಾರಿದ್ದಾರೆ.

ಅನಿವಾರ್ಯತೆ ಇಲ್ಲದಿದ್ದರೆ ರಾಜ್ಯಪಾಲರಿಗೆ ಉತ್ತರ ಕೊಡುವುದಿಲ್ಲ, ಯಾವುದಕ್ಕೆ ಕೊಡಬೇಕೋ ಕೊಡುತ್ತೇವೆ -ಡಾ.ಪರಮೇಶ್ವರ್
ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್
Follow us
| Updated By: ಆಯೇಷಾ ಬಾನು

Updated on: Sep 23, 2024 | 12:48 PM

ಬೆಂಗಳೂರು, ಸೆ.23: ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿದ್ದ ಜಮೀನು ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ರಾಜ್ಯಪಾಲರು (Thawar Chand Gehlot) ಸರ್ಕಾರಕ್ಕೆ (Karnataka Government) ಪತ್ರ ಬರೆಯುತ್ತಿದ್ದಾರೆ. ಈ ಸಂಬಂಧ ರಾಜ್ಯಪಾಲರು ಪದೇ ಪದೆ ಸರ್ಕಾರಕ್ಕೆ ಪತ್ರ ಬರೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ (Dr G Parameshwar) ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿನಿತ್ಯ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ. ಆದರೆ ಪ್ರತಿ ದಿನ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿದ್ದಾರೆ.

ರಾಜ್ಯಪಾಲರು ಹಾಗೂ ಸರ್ಕಾರದ ಮಧ್ಯೆ ಗುಡ್ ರಿಲೇಷನ್​ಶಿಪ್ ಇರುತ್ತೆ. ಆದರೆ ಹೀಗಾದರೆ ಸ್ಮೂತ್ ಆಗಿ ಆಗೋದಿಲ್ಲ. ಮುಂದೆ ಏನು ಮಾಡಬೇಕೆಂದು ಸಿಎಂ ಜತೆ ಚರ್ಚೆ ಮಾಡುತ್ತೇವೆ. ಅನಿವಾರ್ಯತೆ ಇಲ್ಲದಿದ್ದರೆ ರಾಜ್ಯಪಾಲರಿಗೆ ಉತ್ತರ ಕೊಡುವುದಿಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಕೊಡುತ್ತೇವೆ. ಸಂಪುಟದಲ್ಲಿ ರಾಜ್ಯಪಾಲರ ನಡವಳಿಕೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಅವರು ರಾಜ್ಯಪಾಲರ ನಡೆಗೆ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ, ಸರ್ಕಾರದಿಂದ ವಿವರ ಕೋರಿದ ರಾಜ್ಯಪಾಲರು

ರಾಜ್ಯಪಾಲರ ಹುದ್ದೆ ಅತ್ಯಂತ ಜವಾಬ್ದಾರಿಯುತ ಸ್ಥಾನ. ಸಂವಿಧಾನ ರಕ್ಷಣೆ ಮಾಡುವ ಸ್ಥಾನ ಕೊಟ್ಟಿದ್ದಾರೆ. ಸಂವಿಧಾನ ಯಾವ ರೀತಿ ರಕ್ಷಣೆ ಮಾಡಬೇಕು ಅಂತ ಅಧಿಕಾರ ಕೊಟ್ಟಿದ್ದಾರೆ. ಪ್ರಥಮಬಾರಿಗೆ ಈ ರೀತಿಯಾಗಿದೆ. ಪ್ರತಿ ನಿತ್ಯ ಆಡಳಿತದಲ್ಲಿ ಸರ್ಕಾರದ ಕಾರ್ಯದ ಬಗ್ಗೆ ರಾಜ್ಯಪಾಲರು ಮಾಹಿತಿ ಕೇಳಿದ್ದ ಸಂದರ್ಭಗಳೇ ಇಲ್ಲ. ಇತಿಹಾಸದಲ್ಲಿ ಕರ್ನಾಟಕದಲ್ಲಿ ಕೇಳಿಲ್ಲ. ಇಲ್ಲಿಯವರೆಗೆ ಅನೇಕ ಗೌರ್ನರ್​ಗಳು ಬಂದಿದ್ದಾರೆ. ಆದರೆ ದಿನ ನಿತ್ಯ ಪತ್ರ ಬರೆದು ಪತ್ರದ ಮೂಲಕ ಮಾಹಿತಿ ಕೊಡಿ ಅಂತಿದ್ದಾರೆ.

ಕೆಲವೊಂದು ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಎಂ, ಕಾನೂನು ಸುವ್ಯವಸ್ಥೆ ವಿಚಾರ ಬಂದರೆ ಗೃಹ ಸಚಿವರು ರಾಜ್ಯಪಾಲರಿಗೆ ಮಾಹಿತಿ ನೀಡುತ್ತಿದ್ದರು. ಅವರಿಗೆ ಸಚಿವರನ್ನ ಕರೆದು ಮಾಹಿತಿ ಪಡೆಯುವ ಹಕ್ಕು ಇದೆ. ಸರ್ಕಾರದಲ್ಲಿ ಸಿಎಂ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡ್ತೇವೆ. ದಿನ ಪತ್ರ ಬರೆದು ಮಾಹಿತಿ ಕೇಳೋದು ಸಂವಿಧಾನ ವಿರೋಧವಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಅನಿವಾರ್ಯತೆ ಇಲ್ಲದಿದ್ದರೆ ನಾವು ರಾಜ್ಯಪಾಲರಿಗೆ ಉತ್ತರ ಕೊಡಲ್ಲ. ಯಾವುದಕ್ಕೆ ಉತ್ತರ ಕೊಡಬೇಕೋ ಕೊಡುತ್ತೇವೆ. ಎಲ್ಲರಿಗೂ ಒಂದೇ ಮಾನದಂಡ. ಸಿದ್ದರಾಮಯ್ಯಗೆ ಒಂದು ಮಾನದಂಡ, ಕುಮಾರಸ್ವಾಮಿಗೆ ಒಂದು ಮಾನದಂಡ ಆಗಲ್ಲ. ನಾಲ್ಕೂ ಜನ ಮಂತ್ರಿ ಮಾಜಿ ಸಿಎಂಗಳ ದೂರಿಗೆ ರಾಜ್ಯಪಾಲರು ನೋಟಿಸ್​ ಅನ್ನೇ ನೀಡಿಲ್ಲ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಮೆರಿಕದ ಟೆಕ್ ಸಿಇಒಗಳಿಂದ ನರೇಂದ್ರ ಮೋದಿ ಶ್ಲಾಘನೆ
ಅಮೆರಿಕದ ಟೆಕ್ ಸಿಇಒಗಳಿಂದ ನರೇಂದ್ರ ಮೋದಿ ಶ್ಲಾಘನೆ
ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್‌
ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್‌
ನ್ಯೂಯಾರ್ಕ್​ನಲ್ಲಿ ಟೆಕ್ ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ
ನ್ಯೂಯಾರ್ಕ್​ನಲ್ಲಿ ಟೆಕ್ ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ
ಮಂತ್ರಾಲಯದಲ್ಲಿ ಪರಿಮಳ ಪ್ರಸಾದ ತಯಾರಿ ಪ್ರಕ್ರಿಯೆ ಹೇಗಿದೆ ಗೊತ್ತಾ?
ಮಂತ್ರಾಲಯದಲ್ಲಿ ಪರಿಮಳ ಪ್ರಸಾದ ತಯಾರಿ ಪ್ರಕ್ರಿಯೆ ಹೇಗಿದೆ ಗೊತ್ತಾ?
ವಿಶ್ವವಿಖ್ಯಾತ ಮೈಸೂರು ದಸರಾ ಕುರಿತು ಜಿಲ್ಲಾಡಳಿತದಿಂದ ವಿಶೇಷ ವಿಡಿಯೋ
ವಿಶ್ವವಿಖ್ಯಾತ ಮೈಸೂರು ದಸರಾ ಕುರಿತು ಜಿಲ್ಲಾಡಳಿತದಿಂದ ವಿಶೇಷ ವಿಡಿಯೋ
ಹೇಗಿತ್ತು ನೋಡಿ ಹರ್ಷಿಕಾ ಪೂಣಚ್ಚ ಬೇಬಿ ಶವರ್; ಯಾರೆಲ್ಲಾ ಬಂದಿದ್ರು?
ಹೇಗಿತ್ತು ನೋಡಿ ಹರ್ಷಿಕಾ ಪೂಣಚ್ಚ ಬೇಬಿ ಶವರ್; ಯಾರೆಲ್ಲಾ ಬಂದಿದ್ರು?
Daily Devotional: ಲಲಿತಾ ಸಹಸ್ರನಾಮದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಲಲಿತಾ ಸಹಸ್ರನಾಮದ ಮಹತ್ವ ಹಾಗೂ ಫಲ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಸೋಮವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಸೋಮವಾರದ ದಿನ ಭವಿಷ್ಯ ತಿಳಿಯಿರಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು