KPTCL ಹೈಟೆನ್ಷನ್ ಲೈನ್ ಕೆಳಗೆ ಮಸೀದಿ ನಿರ್ಮಾಣ: ತೆರವಿಗೆ ಹಿಂದೂ ಸಂಘಟನೆಗಳು ಪಟ್ಟು, ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಸೂಚನೆ

| Updated By: ವಿವೇಕ ಬಿರಾದಾರ

Updated on: Feb 04, 2023 | 1:32 PM

ಬಿಬಿಎಂಪಿ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿಯ ಬಳಿ ಇರುವ ಸಿಂಗಸಂದ್ರದ KPTCL ಹೈಟೆನ್ಷನ್ ಲೈನ್ ಕೆಳಗೆ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ ಎಂದು ಬಿಬಿಎಂಪಿ ವಿರುದ್ಧ ಹಿಂದೂ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ.

KPTCL ಹೈಟೆನ್ಷನ್ ಲೈನ್ ಕೆಳಗೆ ಮಸೀದಿ ನಿರ್ಮಾಣ: ತೆರವಿಗೆ ಹಿಂದೂ ಸಂಘಟನೆಗಳು ಪಟ್ಟು, ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಸೂಚನೆ
ಅಕ್ರಮವಾಗಿ ಮಸೀದಿ ನಿರ್ಮಾಣ (ಎಡಚಿತ್ರ) ಹಿಂದೂ ಸಂಘಟನೆಗಳಿಂದ ದೂರು ಪತ್ರ (ಬಲಚಿತ್ರ)
Follow us on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿಯ ಬಳಿ ಇರುವ ಸಿಂಗಸಂದ್ರದ KPTCL ಹೈಟೆನ್ಷನ್ ಲೈನ್ ಕೆಳಗೆ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ ಎಂದು ಬಿಬಿಎಂಪಿ ವಿರುದ್ಧ ಹಿಂದೂ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ಮತ್ತು ಮಸೀದಿ ತೆರವುಮಾಡುವಂತೆ ಬಿಬಿಎಂಪಿ ಕಮೀಷನರ್​​ಗೆ ಸಂಘಟನೆಗಳು ಮನವಿ ಮಾಡಿವೆ.

KPTCL ಹೈ-ಟೆನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ

KPTCL ಹೈ-ಟೆನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವುದು ಸುರಕ್ಷತಾ ದೃಷ್ಟಿಯಿಂದ ಸರಿಯಲ್ಲ. ಆದರು ಸಿಂಗಸಂದ್ರದಲ್ಲಿ 3-4 ಅಂತಸ್ತಿನ ಅಕ್ರಮ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿನ ಸ್ಥಳಿಯರು ದೂರು ಸಲ್ಲಿಸಿದರು ಬಿಬಿಎಂಪಿ, ಬೆಸ್ಕಾಂ, kptcl ಅಥವಾ ರಾಜ್ಯ ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಹಿಂದೂ ಜನಜಾಗೃತಿ ಸಮಿತಿಯ ಅಧ್ಯಕ್ಷ ಮೋಹನ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಈ ಕೂಡಲೇ ತೆರವು ಮಾಡಬೇಕು. ರಾಜ್ಯಸರ್ಕಾರ ಬೆಂಗಳೂರಲ್ಲಿ ಇರುವ ಹಿಂದೂ ದೇವಸ್ಥಾನಗಳನ್ನ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಸಾವಿರಾರು ದೇವಸ್ಥಾನಗಳನ್ನು ತೆರವು ಮಾಡಿದೆ. ಆದರೆ ಅನ್ಯ ಧರ್ಮಿಯರ ದೇವಸ್ಥಾನಗಳು ಅಕ್ರಮವಾಗಿ ನಿರ್ಮಾಣವಾಗಿದ್ದರೂ, ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲೈನ್ ಕೆಳಗೆ ತಮ್ಮ ಭೂಮಿ ಇದ್ದರೂ ನಿರ್ಮಾಣಕ್ಕೆ ನಿರ್ಬಂಧವಿದೆ

KPTCL​ ಲೈನ್ ಕೆಳಗೆ ಲೈನ್ ಕೆಳಗೆ ತಮ್ಮ ಭೂಮಿ ಇದ್ದರೂ ನಿರ್ಮಾಣಕ್ಕೆ ನಿರ್ಬಂಧವಿದೆ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ಹೇಳಿದ್ದಾರೆ. ಈಗ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ನಾವು ಅನುಮತಿ ನೀಡಿಲ್ಲ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದರೆ ಜಾಗದ ಮಾಲೀಕರಿಗೆ ಹೇಳಿ ಕಟ್ಟಡ ನೆಲಸಮಕ್ಕೆ ಸೂಚಿಸುತ್ತೇವೆ. ಸದ್ಯ ಇದನ್ನ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ