AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಸಿಎಂ ಪುತ್ರಿ ಕಂಪನಿಗೆ ಅಕ್ರಮ ಹಣ ಸಂದಾಯ: ಬಲವಂತದ ಬಂಧನ ಮಾಡದಂತೆ ಕರ್ನಾಟಕ ಹೈಕೋರ್ಟ್ ಸೂಚನೆ

ಯಾವುದೇ ಸೇವೆ ನೀಡದಿದ್ದರೂ ಕೊಚ್ಚಿನ್ ಮಿನರಲ್ಸ್‌ನಿಂದ ಕೇರಳದ ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ ರೂಪಾಯಿ ನೀಡಲಾಗಿದೆ. ಈ ಪೈಕಿ 1.72 ಕೋಟಿ ರೂಪಾಯಿಗಳನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ಟಿ.ವೀಣಾ ನಿರ್ದೇಶಕಿಯಾಗಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ. ನೀಡಲಾಗಿದೆ ಎಂದು ಐಟಿ ದಾಳಿ ವೇಳೆ ತಿಳಿದುಬಂದಿತ್ತು.

ಕೇರಳ ಸಿಎಂ ಪುತ್ರಿ ಕಂಪನಿಗೆ ಅಕ್ರಮ ಹಣ ಸಂದಾಯ: ಬಲವಂತದ ಬಂಧನ ಮಾಡದಂತೆ ಕರ್ನಾಟಕ ಹೈಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್
Ramesha M
| Edited By: |

Updated on:Feb 12, 2024 | 5:12 PM

Share

ಬೆಂಗಳೂರು, ಫೆ.12: ಅಕ್ರಮ ಹಣ ಸಂದಾಯ ಪ್ರಕರಣ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಪುತ್ರಿಯೂ ಆಗಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ. ನಿರ್ದೇಶಕಿ ಟಿ.ವೀಣಾ ಅವರ ವಿರುದ್ಧ ಬಲವಂತದ ಬಂಧನದಂತಹ ಕ್ರಮಗಳನ್ನು ಕೈಗೊಳ್ಳದಂತೆ ಕೇಂದ್ರ ಸರ್ಕಾರದ ತನಿಖಾ ದಳ ಎಸ್ಎಫ್ಐಒಗೆ ಕರ್ನಾಟಕ ಹೈಕೋರ್ಟ್ (Karnataka High Court) ಸೂಚನೆ ನೀಡಿದೆ. ಅಲ್ಲದೆ, ಪ್ರಕರಣ ಸಂಬಂಧ ತನಿಖಾ ದಳಕ್ಕೆ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದೆ.

ಯಾವುದೇ ಸೇವೆ ನೀಡದಿದ್ದರೂ ಕೊಚ್ಚಿನ್ ಮಿನರಲ್ಸ್‌ನಿಂದ ಕೇರಳದ ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಅಂಶ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ತಿಳಿದುಬಂದಿತ್ತು. ಅಲ್ಲದೆ, ಈ ಹಣದ ಪೈಕಿ 1.72 ಕೋಟಿ ರೂಪಾಯಿಗಳನ್ನು ಟಿ.ವೀಣಾ ನಿರ್ದೇಶಕಿಯಾಗಿರುವ ಕರ್ನಾಟಕದಲ್ಲಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ.ಗೆ ವರ್ಗಾವಣೆಯಾಗಿರುವುದು ಕಂಡುಬಂದಿತ್ತು.

ಯಾವುದೇ ಸೇವೆ ನೀಡದಿದ್ದರೂ ಹಣ ಸಂದಾಯ ಮಾಡಿದ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಎಸ್ಎಫ್ಐಒ ಗಮನಕ್ಕೆ ತಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್ಎಫ್ಐಒ ತನಿಖೆ ನಡೆಸುತ್ತಿದೆ. ಇದರ ವಿರುದ್ಧ ವೀಣಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 40% ಕಮಿಷನ್​ ಆರೋಪ: ಆದೇಶವಿದ್ದರೂ ವಿಚಾರಣೆ ವಿಳಂಬಕ್ಕೆ ಕಾರಣವೇನು?: ಸರ್ಕಾರಕ್ಕೆ ಹೈಕೋರ್ಟ್​​​​ ಪ್ರಶ್ನೆ

ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ತನಿಖಾದಳಕ್ಕೆ ಕಂಪನಿ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿತು. ಅಲ್ಲದೆ, ಯಾವುದೇ ಬಂಧನದಂತಹ ಬಲವಂತದ ಕ್ರಮ ಕೈಗೊಳ್ಳದಂತೆ ಎಸ್ಎಫ್ಐಒ ಸೂಚನೆ ನೀಡಿತು.

ಸಿಎಂ ವಿಜಯನ್ ಪುತ್ರಿ ಟಿ.ವೀಣಾರ ಕಂಪನಿಗೆ ಕೊಚ್ಚಿನ್ ಮಿನರಲ್ಸ್ ಹಣ ಸಂದಾಯ ಮಾಡಿದೆ. ಮಾಹಿತಿ ಕೇಳಿದರೆ ಜಿಎಸ್‌ಟಿ ಪಾವತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಹಲವು ವ್ಯವಹಾರಗಳು ಅನುಮಾನಾಸ್ಪದವಾಗಿವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಅರವಿಂದ್ ಕಾಮತ್ ವಾದಮಂಡನೆ ಮಾಡಿದರು.

ವ್ಯವಹಾರದ ಮಾಹಿತಿ ನೀಡದಿರುವುದು ವಂಚನೆಯಾಗುವುದಿಲ್ಲ. ಯಾವುದೇ ಅಪರಾಧವೆಸಗದಿದ್ದರೂ ತನಿಖೆ ಕಾನೂನುಬಾಹಿರ ಎಂದು ಟಿ.ವೀಣಾ ಪರ ವಕೀಲರು ವಾದಮಂಡನೆ ಮಾಡಿದರು. ವಾದ ಪ್ರತಿವಾದ ಆಲಿಸಿದ ಪೀಠ, ಆದೇಶ ಕಾಯ್ದಿರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Mon, 12 February 24