ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ದಾಳಿ; 1 ಕೋಟಿಗೂ ಅಧಿಕ ಮೌಲ್ಯದ ಪ್ಲಾಸ್ಟಿಕ್ ಕವರ್ ವಶಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 27, 2024 | 6:17 PM

ಪ್ಲಾಸ್ಟಿಕ್ ಕವರ್ ಗೋದಾಮಿನ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇಂದು(ಗುರುವಾರ) ವರ್ತೂರು(Varthur) ಸಮೀಪದ ಮತ್ಸಸಂದ್ರದಲ್ಲಿರುವ ಪ್ಲಾಸ್ಟಿಕ್ ಕವರ್ ಗೋದಾಮಿನ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಸಂಗ್ರಹಿಸಿದ್ದ 1 ಕೋಟಿಗೂ ಅಧಿಕ ಮೌಲ್ಯದ ಪ್ಲಾಸ್ಟಿಕ್(Plastic) ಕವರ್​ನ್ನು ವಶಕ್ಕೆ ಪಡೆಯಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ದಾಳಿ; 1 ಕೋಟಿಗೂ ಅಧಿಕ ಮೌಲ್ಯದ ಪ್ಲಾಸ್ಟಿಕ್ ಕವರ್ ವಶಕ್ಕೆ
1 ಕೋಟಿಗೂ ಅಧಿಕ ಮೌಲ್ಯದ ಪ್ಲಾಸ್ಟಿಕ್ ಕವರ್ ವಶಕ್ಕೆ
Follow us on

ಬೆಂಗಳೂರು, ಜೂ.27: ಬೆಂಗಳೂರಿನ ವರ್ತೂರು(Varthur) ಸಮೀಪದ ಮತ್ಸಸಂದ್ರದಲ್ಲಿರುವ ಪ್ಲಾಸ್ಟಿಕ್ ಕವರ್ ಗೋದಾಮಿನ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸಂಗ್ರಹಿಸಿದ್ದ 1 ಕೋಟಿಗೂ ಅಧಿಕ ಮೌಲ್ಯದ ಪ್ಲಾಸ್ಟಿಕ್(Plastic) ಕವರ್​ನ್ನು ವಶಕ್ಕೆ ಪಡೆಯಲಾಗಿದೆ. ಜಿ.ಆರ್.ಬಾಬು ಎಂಬುವವರ ದೂರಿನ ಮೇರೆಗೆ ಈ ದಾಳಿ ನಡೆಸಲಾಗಿದೆ.  ಇನ್ನು ಇದು ಬಾಬುತ್ ಮಾಲೀಕತ್ವದ ಪ್ಲಾಸ್ಟಿಕ್ ಕವರ್ ಗೋದಾಮು ಆಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಬಾಲಚಂದ್ರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಜನವರಿ ತಿಂಗಳಲ್ಲೂ ಅಧಿಕಾರಿಗಳು ದಾಳಿ ನಡೆಸಿದ್ದರು.

ಇನ್ನು ಇತ್ತೀಚೆಗಷ್ಟೇ ಶಿರಾ ನಗರಸಭೆ ಅಧಿಕಾರಿಗಳು ಸೇರಿಕೊಂಡು ನಗರದ ಸಂತೆಪೇಟೆಯ ಗೋದಾಮುವೊಂದರ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ನಿಷೇಧಿತ ಪ್ಲಾಸ್ಟಿಕ್​ನ್ನು ವಶಪಡಿಸಿಕೊಂಡಿದ್ದರು. ನಗರಸಭೆ ಆಯುಕ್ತ ರುದ್ರೇಶ್‌  ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಂದಾಜು 100 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್‌ ಚೀಲಗಳನ್ನು ವಶಪಡಿಸಿಕೊಂಡಿದ್ದರು.

ಇದನ್ನೂ ಓದಿ:ನಿಮಗೇ ಗೊತ್ತಿಲ್ಲದಂತೆ ಈ ಆಹಾರಗಳ ಮೂಲಕ ಪ್ಲಾಸ್ಟಿಕ್ ಸೇವಿಸುತ್ತೀರಿ!

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ರುದ್ರೇಶ್ ಮಾತನಾಡಿ, ಪಟ್ಟಣ, ನಗರ ವ್ಯಾಪ್ತಿಗೆ ಬರುವ

ಇನ್ನು ಈಗಾಗಲೇ ನಗರಸಭೆ ಕಡೆಯಿಂದ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡುವುದರ ಜತೆಗೆ ದ್ವನಿವರ್ಧಕಗಳಲ್ಲಿ ಕೂಡ ಪ್ರಚಾರ ಮಾಡಲಾಗಿದ್ದು, ಎಲ್ಲ ಅಂಗಡಿ-ಮುಂಗಟ್ಟು ವ್ಯಾಪಾರಿಗಳಿಗೆ, ಹೋಟೆಲ್‌ ಮಾಲೀಕರಿಗೆ, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಜವಳಿ ಅಂಗಡಿ ಮಾಲೀಕರಿಗೂ ಕೂಡಾ ನಿಷೇಧಿತ ಪ್ಲಾಸ್ಟಿಕ್‌ ಕವರ್‌ ಬಳಸದಂತೆ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಈ ನಡುವೆ ವರ್ತೂರಿನಲ್ಲಿ ಅಕ್ರಮವಾಗಿ 1 ಕೋಟಿಗೂ ಅಧಿಕ ಪ್ಲಾಸ್ಟಿಕ್​ ಸಂಗ್ರಹಿಸಿಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ