ಬೆಂಗಳೂರು, ಅ.11: ಆನ್ಲೈನ್ ರಮ್ಮಿ ಗೀಳಿಗೆ ಬಿದ್ದು 20 ಲಕ್ಷ ಕಳೆದುಕೊಂಡ ಬ್ಯಾಂಕ್ ಉದ್ಯೋಗಿಯೊಬ್ಬರು ಸಾಲ ತೀರಿಸಲಾಗದೇ ಮನೆಬಿಟ್ಟು ಹೋದ ಘಟನೆ ಬೆಂಗಳೂರಿನ ಮುದ್ದಿನಪಾಳ್ಯ(Muddinapalya)ದಲ್ಲಿ ನಡೆದಿದೆ. ಭರತ್, ನಾಪತ್ತೆಯಾದವನು. ಇತ ಆನ್ಲೈನ್ ರಮ್ಮಿ ಆಡಲು ಬ್ಯಾಂಕ್ನಿಂದ 20 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಇಎಮ್ಐ(EMI) ಕಟ್ಟಲು ಸಾಧ್ಯವಾಗುತ್ತಿಲ್ಲವೆಂದು ವಿಡಿಯೋ ಮಾಡಿ ನಾಪತ್ತೆಯಾಗಿದ್ದಾರೆ.
ಹೌದು, ಸೆಲ್ಪೀ ವಿಡಿಯೋ ಮಾಡಿರುವ ಭರತ್ ‘ನಾನು ಜೀವನದಲ್ಲಿ ಸೋತಿದ್ದೇನೆ. ನನ್ನನ್ನು ಹುಡುಕಬೇಡಿ. ನಾನು ಮನೆಬಿಟ್ಟು ಹೋಗುತ್ತಿದ್ದೇನೆಂದು ವಿಡಿಯೋ ಮಾಡಿ, ಮೊಬೈಲ್ ಮನೆಯಲ್ಲೇ ಬಿಟ್ಟು ಭರತ್ ತೆರಳಿದ್ದಾನೆ. ಸದ್ಯ ಭರತ್ ಪತ್ನಿ ಚೈತ್ರಾ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದು, ಹೇಗಾದರೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ಆನ್ಲೈನ್ ಗೇಮ್ ವ್ಯಾಮೋಹಕ್ಕೆ ಸಿಲುಕಿ ಯುವಕ ಆತ್ಮಹತ್ಯೆಗೆ ಶರಣು
ಶಿವಮೊಗ್ಗ: ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ತಾಲೂಕಿನ ಮುದುವಾಲದಲ್ಲಿ ಬುಧವಾರ(ಅ.09) ಚಿನ್ನಿಕಟ್ಟೆ ಗ್ರಾಮದ ಇಕ್ಬಾಲ್ (40) ಎಂಬುವವರು ಮಳೆಯಿಂದಾಗಿ ರಭಸವಾಗಿ ಹರಿಯುತ್ತಿದ್ದ ಕೊಂಡಜ್ಜಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಮೃತದೇಹಕ್ಕಾಗಿ ಹಳ್ಳದಲ್ಲಿ ಶೋಧ ಕಾರ್ಯ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿಗೆ, ಇದೀಗ ಮೂರು ದಿನದ ಬಳಿಕ ಹಳ್ಳದ ಒಂದು ಕಿ.ಮೀ. ದೂರದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Fri, 11 October 24