ಬೆಂಗಳೂರು, ಅ.12: ರಾಜ್ಯ ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ (Rain) ಅಲರ್ಟ್ ಘೋಷಿಸಲಾಗಿದ್ದು, ಇದರ ಬೆನ್ನಲ್ಲೇ ಮಧ್ಯಾಹ್ನದಿಂದಲೇ ನಗರದ ರಿಚ್ಮಂಡ್ ವೃತ್ತ, ಶಾಂತಿನಗರ, ಆಡುಗೋಡಿ, K.R.ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಜಿಟಿಜಿಟಿ ಮಳೆ ಶುರುವಾಗಿದೆ. ಜೊತೆಗೆ ಇಂದಿನಿಂದ ಅಕ್ಟೋಬರ್ 17ರ ವರೆಗೆ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ ಎಸ್ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಹವಾಮಾನ ಇಲಾಖೆ ತಜ್ಞ ಸಿಎಸ್ ಪಾಟೀಲ್, ‘ಮುಂದಿನ 7 ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದಿದ್ದಾರೆ. ಇನ್ನು ಹಾವೇರಿ 17 ಸೆ.ಮೀ, ಇಲಕಲ್ 7 ಸೆ.ಮೀ, ಶಿವಮೊಗ್ಗ 10 ಸೆ.ಮೀ ಮಳೆಯಾಗಿದೆ. ಪೂರ್ವ ಅರಬ್ಬೀ ಸಮುದ್ರ ತೀರದಲ್ಲಿ ತೀವ್ರವಾಗಿ ವಾಯುಭಾರ ಕುಸಿತವಾಗಿದ್ದು, 5.8 ಕಿ.ಮೀ ಎತ್ತರದ ವರೆಗೆ ಗಾಳಿ ಪರಿಚಲನೆ ಇದೆ. ಬಂಗಾಲ ಉಪಸಾಗರದ ಆಗ್ನೇಯ ಭಾಗದಲ್ಲೂ ಗಾಳಿಯ ಪರಿಚಲನೆ 5.8 ಎತ್ತರವಿದೆ. ಪರಿಣಾಮ ಅಕ್ಟೋಬರ್ 14ರಂದು ತೀವ್ರವಾಗಿ ವಾಯುಭಾರ ಕುಸಿತ ಸಾಧ್ಯತೆ ಇದೆ.
ಇದನ್ನೂ ಓದಿ:Karnataka Rains: ಕರ್ನಾಟಕದ ಈ 16 ಜಿಲ್ಲೆಗಳಲ್ಲಿ ಅ.15ರವರೆಗೆ ವಿಪರೀತ ಮಳೆ
ಈ ಹಿನ್ನಲೆ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಅ. 15ರ ವರೆಗೆ ಹಲವು ಕಡೆ ಮಳೆ ಸಾಧ್ಯತೆಯಿದೆ. ಅ.16ರಂದು ಕರಾವಳಿಯಲ್ಲಿ 16 ರಿಂದ 18ರ ವರೆಗೆ ವ್ಯಾಪಕ ಮಳೆಯಾಗುವ ಸಂಭವವಿದೆ. ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ತುಮಕೂರು ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗಬಹುದು.
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಮಂಡ್ಯ, ಮೈಸೂರು ಕೊಡಗು ಹಾಗೂ ಹಾಸನ ಜಿಲ್ಲೆಯ ಕೆಲವು ಕಡೆ ಭಾರಿ ಮಳೆ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ಅಕ್ಟೋಬರ್ 16, 17ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಇವತ್ತಿನಿಂದ ಅಕ್ಟೋಬರ್ 17ರ ವರೆಗೆ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ ಎಸ್ ಪಾಟೀಲ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Sat, 12 October 24