ರಾಜಾಜಿನಗರದ ಮಂಜುನಾಥ ನಗರದಲ್ಲಿ ಒಳ ಚರಂಡಿ ಕಾಮಗಾರಿ ಅರ್ಥಂಬರ್ಧ; ವಾಹನ ಸವಾರರ ಆಕ್ರೋಶ
ಅದು ಪ್ರಮುಖ ರಸ್ತೆ ಅಲ್ಲಿ ಪ್ರತಿನಿತ್ಯ ನೂರಾರು ವಾಹನ ಸವಾರರು ಓಡಾಡ್ತಾರೆ. ಅದೇ ರಸ್ತೆಯಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಆದರೆ ಕಳೆದ ಒಂದು ತಿಂಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ನಡು ರಸ್ತೆ ಅಗೆದು ಅರ್ಧಬಂರ್ಧ ಕಾಮಗಾರಿಯಿಂದಾಗಿ ಸುತ್ತಿ ಬಳಸಿ ಓಡಾಡಬೇಕಾದ ಪರಸ್ಥಿತಿ ಇದೆ.
ಬೆಂಗಳೂರು, ಅ.12: ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಜುನಾಥ ನಗರ ಮುನೇಶ್ವರ ಸ್ವಾಮಿ ದೇವಾಲಯದ 40 ಅಡಿ ಮುಖ್ಯ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದೆ. ಅದರೆ ಇದೀಗ ಇದೇ ಒಳ ಚರಂಡಿ ಕಾಮಗಾರಿ ಸಂಕಷ್ಟ ತಂದಿಟ್ಟಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ ಕಳೆದ ಒಂದು ತಿಂಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ಗುತ್ತಿಗೆದಾರ ಅರ್ಧಕ್ಕೆ ಕಾಮಗಾರಿ ಬಿಟ್ಟಿದ್ದು, ನಡು ರಸ್ತೆ ಅಗೆದು ಅರ್ಧಬಂರ್ಧ ಕಾಮಗಾರಿಯಿಂದಾಗಿ ಸುತ್ತಿ ಬಳಸಿ ಓಡಾಡಬೇಕಾದ ಪರಸ್ಥಿತಿ ಎದುರಾಗಿದೆ. ವೃದ್ಧರು ಮಕ್ಕಳು ಓಡಾಡದ ಪರಸ್ಥಿತಿ ಎದುರಾಗಿದ್ದು, ಅಂಗಡಿಗಳ ವ್ಯಾಪಾರಸ್ಥರು ವ್ಯಾಪರ ಅಗುತ್ತಿಲ್ಲ ಅಂತ ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನೂ ಅಕ್ಕ ಪಕ್ಕ ಆಸ್ಪತ್ರೆಗಳಿವೆ. ಹೀಗಾಗಿ ಆ್ಯಂಬುಲೆನ್ಸ್ ಗಳು ಇದೆ ದಾರಿಯಲ್ಲಿ ಹೋಗುತ್ತವೆ. ಅಲ್ಲದೇ ಶಾಲಾ ವಾಹನಗಳು ಸೇರಿದಂತೆ ಸಾರ್ವಜನಿಕರು ಕೂಡ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇದೀಗ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ ಚರಂಡಿ ನೀರು ಹರಿಯುತ್ತಿದೆ.
ಇದನ್ನೂ ಓದಿ: ಉಡುಪಿ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಉದ್ಯೋಗಕ್ಕೆಂದು ಬಂದಿದ್ದ ಬಾಂಗ್ಲಾದ 9 ಪ್ರಜೆಗಳು ವಶ
ಸ್ವಲ್ಪ ಮಳೆ ಬಂದ್ರು ಕೂಡ ರಸ್ತೆಯ ಮೇಲೆ ನೀರು ಹರಿಯೋ ದುಸ್ಥಿತಿ ಇದೆ. ಅತ್ತ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ನಾಮಫಲಕ ಹಾಕದ ಪರಿಣಾಮ ವಾಹನಗಳು ಬಂದು ಮತ್ತೆ ವಾಪಸ್ ಹೋಗಬೇಕು. ಹೀಗಾಗಿ ಆದಷ್ಟು ಬೇಗನೇ ಕಾಮಗಾರಿ ಮುಗಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಅರ್ಧಕ್ಕೆ ನಿಂತ ಒಳ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರು ಪರದಾಡುವಂತಾಗಿದ್ದು, ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಯುಜಿಡಿ ಕಾಮಗಾರಿ ಮುಗಿಸೋ ಮೂಲಕ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡ್ತಾರಾ ಇಲ್ವಾ ಕಾದು ನೋಡಬೇಕು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ