
ಬೆಂಗಳೂರು, ಮೇ.12: ರಾಜಧಾನಿ ಬೆಂಗಳೂರು ಕಳೆದ ಮೂರು ತಿಂಗಳಿನಿಂದಾ ಕಾದ ಕೆಂಡವಾಗಿತ್ತು. ಇದೀಗಾ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಸಿಲಿಕಾನ್ ಸಿಟಿ ಕೊಂಚ ಹೀಟ್ ಇಂದ ಕೂಲ್ ಆಗಿದೆ. ಆದ್ರೆ ಈ ದಿಢೀರ್ ಹವಾಮಾನ ವೈಪರಿತ್ಯದಿಂದಾಗಿ ಆರೋಗ್ಯದ ಮೇಲೆ ಕೊಂಚ ಪರಿಣಾಮ ಬೀರುತ್ತಿದ್ದು, ಫಂಗಲ್ ಇನ್ಫೆಕ್ಷನ್ (Fungal Infection) ಹಾಗೂ ಥ್ರೋಟ್ ಇನ್ಫೆಕ್ಷನ್ (Throat Infection) ಕೇಸ್ಗಳು 10% ರಷ್ಟು ಹೆಚ್ಚಳವಾಗಿವೆ.
ಹವಾಮಾನ ವೈಪರಿತ್ಯದಿಂದಾಗಿ ಥ್ರೋಟ್ ಇನ್ಫೆಕ್ಷನ್ ಜಾಸ್ತಿಯಾಗಿವೆ. ಹೆಚ್ಚು ಬಿಸಿಲು ಅಂತ ಅತೀವವಾದ ತಣ್ಣನೆಯ ಆಹಾರ ಪದಾರ್ಥಗಳನ್ನ ಸೇವಿಸುವುದರ ಜೊತೆಗೆ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಹವಾಮಾನದಲ್ಲಿನ ಬದಲಾವಣೆಗೆ ದೇಹ ತಕ್ಷಣಕ್ಕೆ ಹೊಂದಿಕೊಳ್ಳುವುದಿಲ್ಲ. ಈ ವೇಳೆ ಥ್ರೋಟ್ ಇನ್ಫೆಕ್ಷನ್ ಕೇಸ್ಗಳು ಹೆಚ್ಚಾಗಿ ಕಂಡು ಬರಲಿದೆ. ಅಂದ ಹಾಗೇ ಈ ಥ್ರೋಟ್ ಇನ್ಫೆಕ್ಷನ್ ಬಂದಾಗ ಕಂಟಲು ನೋವು ಬರುವುದು, ಏರು ಉಸಿರು ಕಾಣಿಸಿಕೊಳ್ಳುವುದು, ತಲೆಭಾರವಾಗುವುದು, ಅಲರ್ಜಿ ಆಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಧ್ಯ ಸಿಲಿಕಾನ್ ಸಿಟಿಯಲ್ಲಿ 10% ರಷ್ಟು ಥ್ರೋಟ್ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತಿದ್ದು, ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹೀಗಾಗಿ ರಸ್ತೆಯ ಅಕ್ಕಪಕ್ಕದ ತಿಂಡಿಗಳು ತಿನ್ನುವುದನ್ನ ಕಡಿಮೆ ಮಾಡಿ ಎಂದು ವೈದ್ಯರಾದ ಡಾ ಶರದ್ ಕುಲಕರ್ಣಿ ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಏಕಾಏಕಿ ಮಳೆಗೆ ತುಂಬಿ ಹರಿದ ಲಕ್ಷ್ಮೀ ಹಳ್ಳ: ಕೊಚ್ಚಿ ಹೋದ 2 ಕಾರು, 1 ಪಿಕಪ್ ವಾಹನ
ಇನ್ನು, ಥ್ರೋಟ್ ಇನ್ಫೆಕ್ಷನ್ ಜೊತೆಗೆ ಫಂಗಲ್ ಇನ್ಫೆಕ್ಷನ್ ಕೇಸ್ಗಳು ಸಹ ಹೆಚ್ಚಾಗುತ್ತಿವೆ. ಮಳೆ ಬಂದಂತಹ ಸಂದರ್ಭದಲ್ಲಿ ತೇವಾಂಶದ ಅಂಶ ಹೆಚ್ಚು ಇದ್ದಾಗಾ ಫಂಗಲ್ ಇನ್ಫೆಕ್ಷನ್ ಕೇಸ್ಗಳು ಹೆಚ್ಚಾಗುತ್ತವೆ. ಮಳೆಯ ಸಂದರ್ಭದಲ್ಲಿ ತೇವದ ಬಟ್ಟೆ, ತೇವಾದ ಒಳಡುಪುಗಳು, ನೀರಿನಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ಸ್ಕಿನ್ ಮೇಲೆ ಫಂಗಸ್ಗಳು ಉಂಟಾಗುತ್ತವೆ. ಈ ಫಂಗಲ್ ಇನ್ಫೆಕ್ಷನ್ ಹೆಚ್ಚಾದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ ಸ್ಕಿನ್ನಲ್ಲಿ ವೈಟ್ ಪ್ಯಾಚಾಸ್ ಉಂಟಾಗುವುದು, ಸ್ಕಿನ್ ಡ್ರೈ ಆಗುವುದು, ತುರುಕೆ ಬರುವುದು ಹೆಚ್ಚಾಗುತ್ತದೆ. ಇಂತಹ ಗುಣಲಕ್ಷಣಗಳು ಕಂಡುಬಂದಾಗ ಆರೋಗ್ಯದ ಮೇಲೆ ನಿಗಾ ವಹಿಸಿ ಅಂತ ವೈದ್ಯರು ತಿಳಿಸಿದ್ದಾರೆ.
ಒಟ್ನಲ್ಲಿ, ಥ್ರೋಟ್ ಇನ್ಫೆಕ್ಷನ್ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಮಕ್ಕಳು ಆರೋಗ್ಯದ ಮೇಲೆ ನಿಗಾ ಇರಿಸಬೇಕಾಗಿದೆ. ಇನ್ನು ಫಂಗಲ್ ಇನ್ಫೆಕ್ಷನ್ ಗುಣ ಲಕ್ಷಣಗಳು ಕಂಡುಬಂದ್ರೆ ಆದಷ್ಟು ಬಿಸಿ ವಾತಾವರಣದಲ್ಲಿ ಇದ್ರೆ ಒಳ್ಳೆದು ಎಂದು ಡಾಕ್ಟರ್ಸ್ ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ