ಏಕಾಏಕಿ ಮಳೆಗೆ ತುಂಬಿ ಹರಿದ ಲಕ್ಷ್ಮೀ ಹಳ್ಳ: ಕೊಚ್ಚಿ ಹೋದ 2 ಕಾರು, 1 ಪಿಕಪ್‌ ವಾಹನ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಲಕ್ಷ್ಮೀ ಹಳ್ಳ ಏಕಾಏಕಿ ತುಂಬಿ ಹರಿದ ಪರಿಣಾಮ 2 ಕಾರು, 1 ಪಿಕಪ್‌ ವಾಹನ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ಭಾರಿ ಮಳೆಯಿಂದ ಅವಾಂತರಗಳು ಸಂಭವಿಸಿದ್ದು, ರೈತ ಉತ್ಪಾದಕರ ಕೇಂದ್ರದ ಮೇಲ್ಚಾವಣಿ ಹಾರಿ ಹೋಗಿದೆ. ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಅವಾಂತರ ಸಂಭವಿಸಿದೆ. 250ಕ್ಕೂ ಹೆಚ್ಚು ರಸಗೊಬ್ಬರದ ಮೂಟೆಗಳು ಹಾನಿ ಆಗಿವೆ.

ಏಕಾಏಕಿ ಮಳೆಗೆ ತುಂಬಿ ಹರಿದ ಲಕ್ಷ್ಮೀ ಹಳ್ಳ: ಕೊಚ್ಚಿ ಹೋದ 2 ಕಾರು, 1 ಪಿಕಪ್‌ ವಾಹನ
ಏಕಾಏಕಿ ಮಳೆಗೆ ತುಂಬಿ ಹರಿದ ಲಕ್ಷ್ಮೀ ಹಳ್ಳ: ಕೊಚ್ಚಿ ಹೋದ 2 ಕಾರು, 1 ಪಿಕಪ್‌ ವಾಹನ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:May 11, 2024 | 10:48 PM

ಬೆಳಗಾವಿ, ಮೇ 11: ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಬಹುತೇಕ ಕಡೆ ವ್ಯಾಪಕ ಮಳೆಯಾಗುತ್ತಿದೆ (rain). ಆ ಮೂಲಕ ಮಳೆರಾಯ ಜೋರಾಗಿ ಅಬ್ಬರಿಸುತ್ತಿದ್ದಾನೆ. ಇಂದು ಕೂಡ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ (Sankeshwar) ಲಕ್ಷ್ಮೀ ಹಳ್ಳ ಏಕಾಏಕಿ ತುಂಬಿ ಹರಿದ ಪರಿಣಾಮ 2 ಕಾರು, 1 ಪಿಕಪ್‌ ವಾಹನ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದೆ. ವಾಹನ ಸವಾರರು ಪರದಾಡಿದ್ದಾರೆ. ಇನ್ನು ಸಂಕೇಶ್ವರದ ಲಕ್ಷ್ಮೀ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದೆ. ಹಳ್ಳದ ನೀರು ಮನೆಗಳಿಗೆ ನುಗ್ಗುವ ಆತಂಕದಲ್ಲಿ ಸ್ಥಳೀಯರಿದ್ದಾರೆ.

ಹಾರಿ ಹೋದ ರೈತ ಉತ್ಪಾದಕರ ಕೇಂದ್ರದ ಮೇಲ್ಚಾವಣಿ

ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರಗಳು ಸಂಭವಿಸಿದ್ದು, ರೈತ ಉತ್ಪಾದಕರ ಕೇಂದ್ರದ ಮೇಲ್ಚಾವಣಿ ಹಾರಿ ಹೋಗಿದೆ. ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಅವಾಂತರ ಸಂಭವಿಸಿದೆ. 250ಕ್ಕೂ ಹೆಚ್ಚು ರಸಗೊಬ್ಬರದ ಮೂಟೆಗಳು ಹಾನಿ ಆಗಿವೆ. ಮನೋಹರ ದಿನ್ನಮನಿ ಎಂಬುವವರಿಗೆ ಸೇರಿದ್ದ ಶೆಡ್ ಹಾರಿ ಹೋಗಿದೆ. ಸದಾಶಿವ ನಗರದಲ್ಲಿ ರಸ್ತೆಯಲ್ಲಿ ಮರ ಬಿದಿದ್ದು, ಒಂದು ಬದಿಯಲ್ಲಿ ಮಾತ್ರ ವಾಹನಗಳು ಓಡಾಡುತ್ತಿವೆ.

ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇವತ್ತು ಸಹ ಬಿರುಸಿನ ಗಾಳಿಯೊಂದಿಗೆ ಭಾರೀ ಮಳೆ, ಮಲೆನಾಡಿಗೆ ಎಂದಿನ ಕಳೆ!

ಒಂದು ಕಡೆ ಏಕಿಏಕಿ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿದ್ದು, ಇನ್ನೊಂದೆಡೆ ಜಿಲ್ಲೆಯಾದ್ಯಂತ ಸುರಿದ ವರ್ಷಧಾರೆಗೆ ರೈತಾಪಿ ವರ್ಗ ಫುಲ್ ಖುಷಿ ಆಗಿದೆ. ಮಳೆಯಲ್ಲಿ ನೆನೆಯುತ್ತ ರೈತ ರಮೇಶ್ ಮಗದುಮ್ಮ ನೃತ್ಯ ಮಾಡಿ ವರುಣನಿಗೆ ಸ್ವಾಗತ ಕೋರಿದ್ದಾರೆ.

ಓ ಪ್ರೇಮದ ಗಂಗೆಯೇ ಇಳಿದು ಬಾ ಇಳಿದು ಬಾ ಇಳಿದು ಬಾ ಎಂಬ ಹಾಡಿಗೆ ರಮೇಶ್ ‌ನೃತ್ಯ ಮಾಡಿದ್ದಾರೆ. ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಬೆಳಗಾವಿ ರೈತರ ಮೊಗದಲ್ಲಿ ವರುಣ ಮಂದಹಾಸ ಮೂಡಿಸಿದ್ದಾರೆ. ಮಳೆಯಲ್ಲಿ ನೃತ್ಯ ಮಾಡಿದ ರೈತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧರೆಗುರುಳಿದ ವಿದ್ಯುತ್​ ಕಂಬಗಳು

ಇನ್ನು ಗದಗ ಜಿಲ್ಲೆಯ ಹಲವೆಡೆ ಕೂಡ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿವೆ. ಶಿರೋಳ ಗ್ರಾಮದಲ್ಲಿ ವಿದ್ಯುತ್​ ಕಂಬಗಳು ಧರೆಗುರುಳಿವೆ. ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡಿದ್ದಾರೆ. ಶಿರಹಟ್ಟಿ ಹೊರವಲಯದಲ್ಲಿ ಸಿಡಿಲಿಗೆ ಒಂದು ಕುರಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಳೆಗಾಲದ ವೇಳೆ ಧರೆಗುರುಳುವ ಮರದ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲು 39 ತಂಡಳನ್ನು ನಿಯೋಜಿಸಿದ ಬಿಬಿಎಂಪಿ

ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ಭಾರಿ ಮಳೆಯಿಂದ ಅವಾಂತರಗಳು ಸಂಭವಿಸಿವೆ. ಮಳೆಯಿಂದ ಮರ ಧರೆಗುರುಳಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:46 pm, Sat, 11 May 24

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!