ಬೆಂಗಳೂರು: ಈಗಿನ ಬಹುತೇಕ ಜನರಲ್ಲಿ ವಿದೇಶಕ್ಕೆ (Internatioanl) ಹೋಗಿ ಓದಬೇಕು, ದುಡಿಬೇಕು, ಸುತ್ತಾಡಬೇಕು ಎಂಬ ಆಸೆಗಳು ಸಾಮಾನ್ಯ. ಅದರಂತೆಯೇ ಈಗ ಬೆಂಗಳೂರು (Bengaluru), ಮಂಗಳೂರಿನಲ್ಲಿ (Mangaluru) ಪಾಸ್‌ಪೋರ್ಟ್‌ಗಳನ್ನು (Passport) ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನ ರಿಜಿನಲ್ ಪಾಸ್ ಪೋರ್ಟ್ ಆಫೀಸ್ (RPO), ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 79,027 ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ. ಇದು ಪಾಸ್‌ಪೋರ್ಟ್‌ಗಳ ಮುದ್ರಿತ ಮತ್ತು ಹೊಸ ಅರ್ಜಿದಾರರಿಗೆ ಮತ್ತು ನವೀಕರಣ ಮಾಡಿರುವುದು ಒಳಗೊಂಡಿವೆ.
ಬೆಂಗಳೂರಿನ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (ಪಿಎಸ್‌ಕೆ) ಮಾರ್ಚ್ನಲ್ಲೇ ಅತಿ ಹೆಚ್ಚು ಪಾಸ್‌ಪೋರ್ಟ್‌ಗಳನ್ನು ನೀಡಿದ್ದು ಸಿಲಿಕಾನ್ ಸಿಟಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ಇದೆ.
ಮಾಹಾಮಾರಿ ಕೊರೊನಾ ಸಮಯದಲ್ಲಿ, ಅಂತರರಾಷ್ಟ್ರೀಯ ಪ್ರಯಾಣ ನಿಷೇಧದಿಂದಾಗಿ ಪಾಸ್‌ಪೋರ್ಟ್ ಅರ್ಜಿದಾರರ ಸಂಖ್ಯೆ ತೀವ್ರವಾಗಿ ಕುಸಿದಿತ್ತು. ಕೊರೊನಾ ನಂತರ ಪರಿಸ್ಥಿತಿ ಬದಲಾಗಿದ್ದು ಪಾಸ್ಪೋರ್ಟ್ಗಾಗಿ ಹೊಸ ಹೊಸ ಅರ್ಜಿಗಳು ಮತ್ತು ಪಾಸ್‌ಪೋರ್ಟ್‌ಗಳ ನವೀಕರಣಕ್ಕಾಗಿ PSK ಗಳಲ್ಲಿ ಅಪಾಯಿಂಟ್‌ಮೆಂಟ್‌ಗಳು ಹೆಚ್ಚಾಗಿವೆ. ಅದರಲ್ಲೂ 2021 ರಲ್ಲಿ ಪಾಸ್‌ಪೋರ್ಟ್ ಪಡೆಯುವುದು ಕಷ್ಟದ ಕೆಲಸವಾಗಿತ್ತು. ಆದರೆ ಈಗ ಪರಿಸ್ಥಿತಿಯು ಸರಾಗವಾಗಿದೆ ಮತ್ತು ಹೊಸ ಪಾಸ್‌ಪೋರ್ಟ್‌ಗಳು ಮತ್ತು ಪೊಲೀಸ್-ಕ್ಲಿಯರೆನ್ಸ್ ಪ್ರಮಾಣಪತ್ರಗಳ ಅಪಾಯಿಂಟ್‌ಮೆಂಟ್‌ಗಳು ಈಗ ಒಂದು ವಾರ ಅಥವಾ ಎರಡು ವಾರಗಳಲ್ಲಿ ಸಿಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ