ನಿಯಾನ್ ಬಣ್ಣಗಳಿಂದ ಹಿಡಿದು ಮೆಟಾಲಿಕ್ಸ್ ವರೆಗೆ: ಬೇಸಿಗೆಯಲ್ಲಿ ಯಾವ ರೀತಿಯ ಉಡುಗೆ ತೊಡಬೇಕು? ಇಲ್ಲಿದೆ ನಿಮಗಾಗಿ ಫ್ಯಾಷನ್ ಟಿಪ್ಸ್

ಬೇಸಿಗೆಯಲ್ಲಿ ಶಾಖದಿಂದ ದೂರವಿರಲು ವಿವಿಧ ರೀತಿಯ ಬಟ್ಟೆಗಳನ್ನು ತೊಡುವುದರ ಜೊತೆಗೆ ಫ್ಯಾಷನ್ ಕೂಡ ತಲೆಯಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇದು ನಿಮ್ಮ ವ್ಯಕ್ತಿತ್ವವನ್ನು ವ್ಯಕ್ತಪಡಿಸಲು ಸಾಲು ಸಾಲು ಉಡುಗೆಗಳ ಆಯ್ಕೆಯನ್ನು ನಿಮ್ಮ ಮುಂದಿಡುತ್ತದೆ. ಹಾಗಾದರೆ ನಿಮ್ಮ ಆಯ್ಕೆ ಯಾವುದು ಇಲ್ಲಿದೆ ಮಾಹಿತಿ.

ನಿಯಾನ್ ಬಣ್ಣಗಳಿಂದ ಹಿಡಿದು ಮೆಟಾಲಿಕ್ಸ್ ವರೆಗೆ: ಬೇಸಿಗೆಯಲ್ಲಿ ಯಾವ ರೀತಿಯ ಉಡುಗೆ ತೊಡಬೇಕು? ಇಲ್ಲಿದೆ ನಿಮಗಾಗಿ ಫ್ಯಾಷನ್ ಟಿಪ್ಸ್
summer fashion trendsImage Credit source: College Candy
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Apr 30, 2023 | 6:30 AM

ಬೇಸಿಗೆ ಶಾಖ ಹೆಚ್ಚಾಗುತ್ತಿದ್ದಂತೆ ನಾವು ಬಟ್ಟೆಗಳನ್ನು ಬೇಸಿಗೆಗೆ ತಕ್ಕಂತೆ ಬದಲಾಯಿಸಬೇಕು. ಇದು ನಿಮ್ಮ ವಾರ್ಡ್ರೋಬ್ ಅನ್ನು ಇತ್ತೀಚಿನ ಫ್ಯಾಷನ್ ಪ್ರವೃತ್ತಿಗಳೊಂದಿಗೆ ನವೀಕರಿಸುವ ಸಮಯವೂ ಹೌದು. ದೊಡ್ಡ ಗಾತ್ರದ ಶರ್ಟ್ ಗಳಿಂದ ಹಿಡಿದು ಟೈ-ಡೈ ಪ್ರಿಂಟ್ ಗಳವರೆಗೆ ಫ್ಯಾಷನ್ ಈ ಬೇಸಿಗೆಗೆ ಸೂಕ್ತ ಆಯ್ಕೆಯಾಗಿದೆ. ನೀವು ಕ್ಲಾಸಿಕ್ ಇಷ್ಟಪಡುತ್ತೀರೋ ಅಥವಾ ಹೊಸ ರೀತಿಯ ಪ್ರಯೋಗ ಮಾಡುತ್ತಿರೋ ಮಾಡಬಹುದು. ಆಯ್ಕೆ ನಿಮ್ಮದು.

ಈ ಋತುವಿನಲ್ಲಿ ಬೇಸಿಗೆಯ ಶಾಖ ಎಲ್ಲರನ್ನು ಹಣ್ಣು-ಗಾಯಿ, ನೀರು-ಗಾಯಿ ಮಾಡಿಬಿಟ್ಟಿದೆ. ಆದರೆ ಬೇಸಿಗೆ ರಜೆಯಾದ್ದರಿಂದ ತಿರುಗಾಟ ಮಾಡದೇ ಮನೆಯಲ್ಲಿರುವುದು ಸಹ ಸಾಧ್ಯವಿಲ್ಲ. ಹಾಗಾಗಿ ನೀವು ಪ್ರವಾಸಕ್ಕೆ ಹೋಗುವ ಮೊದಲೇ ಎಲ್ಲ ಸಿದ್ಧತೆಗಳ ಜೊತೆಗೆ ಯಾವ ರೀತಿಯ ಬಟ್ಟೆಗಳನ್ನು ತೊಡಬೇಕು ಎಂಬುದರ ಬಗ್ಗೆಯೂ ಚಿಂತನೆ ಮಾಡಿ. ಕಡಲತೀರಕ್ಕೆ ಭೇಟಿ ನೀಡುವ ಯೋಚನೆ ಇದ್ದಲಿ ಅದ್ಕಕೆ ಹೊಂದುವ ಬಟೆಯನ್ನೇ ತೊಟ್ಟುಕೊಳ್ಳಿ. ಅಥವಾ ಬೇರೆ ಬೇರೆ ನಗರಗಳಿಗೆ ಹೋಗಲು ಬಯಸುತ್ತಿದ್ದರೆ ಅದಕ್ಕೆ ತಕ್ಕ ಹಾಗೇ ನಿಮ್ಮ ಉಡುಪನ್ನು ತೊಡಲು ಸಿದ್ದರಾಗಿ.

ಬೇಸಿಗೆ ಫ್ಯಾಷನ್ ಪ್ರವೃತ್ತಿಗಳು:

ವೈಡ್- ಲೆಗ್ ಡೆನಿಮ್:

ಬೇಸಿಗೆಯ ಬಿಸಿಗೆ ಈ ಶೈಲಿಯ ಬಟ್ಟೆ ತೊಡುವುದರಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿ ಕೊಡುತ್ತದೆ. ಟೈಟ್ ಜೀನ್ಸ್ ತೊಡುವುದಕ್ಕಿಂತ ಈ ರೀತಿಯ ವೈಡ್-ಲೆಗ್ ಡೆನಿಮ್ ಉತ್ತಮ ಆಯ್ಕೆಯಾಗಿದೆ. ಈ ಪ್ಯಾಂಟ್ಗಳು ಬಹು ಆಕರ್ಷಕವಾಗಿದ್ದು ನೀವು ಅವುಗಳನ್ನು ಕ್ರಾಪ್ ಟಾಪ್ ಅಥವಾ ಬ್ಲೌಸ್ ತರಹದ ಶಾರ್ಟ್ ಟಾಪ್ ಜೊತೆಗೆ ತೊಟ್ಟುಕೊಳ್ಳಬಹುದು.

ರೋಸೆಟ್:

ಬೇಸಿಗೆಯ ಉಡುಗೆಗೆ ಇದು ಪರಿಪೂರ್ಣ ಸೇರ್ಪಡೆಯಾಗಿದೆ. ಈ ಸೊಗಸಾದ ಅಲಂಕಾರವೂ ಕೆಂಪು ಗೌನ್ನಿಂದ ಹಿಡಿದು, ಶೂಗಳವರೆಗೆ ಎಲ್ಲದರಲ್ಲೂ ಕಾಣಬಹುದಾಗಿದೆ. ದೊಡ್ಡ ದೊಡ್ಡ ಸೆಲೆಬ್ರೆಟಿಗಳು ಕೂಡ ಈ ಡಿಸೈನ್ಗಳನ್ನು ತಮ್ಮ ಡ್ರೆಸ್ಗಳಲ್ಲಿ ಬಳಸಿಕೊಳ್ಳುತ್ತಾರೆ.

ಮೆಟಾಲಿಕ್ಸ್:

ಈ ಋತುವಿನಲ್ಲಿ ಬೆಳ್ಳಿಯ ಸಕ್ವಿನ್ ಗಳಿಂದ ಹಿಡಿದು ಮೆಟಾಲಿಕ್ ಸ್ಟ್ರಾಪ್ ಲೆಸ್ ಗೌನ್ ಗಳವರೆಗೆ ಈ ರೀತಿಯ ಬಟ್ಟೆಗಳು ಬೇಸಿಗೆಗೆ ಸೂಕ್ತವಾಗಿದೆ. ಈ ಹೊಳೆಯುವ ಬಟ್ಟೆಗಳು ನಿಮ್ಮನ್ನು ಸುಂದರವಾಗಿ ಕಾಣಿಸುವುದರ ಜೊತೆಗೆ ಸೆಕೆಗೂ ಸೂಕ್ತ ಆಯ್ಕೆಯಾಗಿದೆ.

ಇದನ್ನೂ ಓದಿ: ಪರಿಸರ ಸ್ನೇಹಿ ಕಾರ್ಯದಲ್ಲಿ ತೊಡಗಿಸಿಕೊಂಡ ನಟಿ ಅನುಪಮಾ ಗೌಡ

ಸ್ಟೇಟ್ಮೆಂಟ್ ತೋಳು:

ಉಬ್ಬಿದ ಮತ್ತು ದೊಡ್ಡದಾದ ಕೈ ಹೊಂದಿರುವ ಬಟ್ಟೆಗಳಾಗಿದೆ. ಇದು ಬೇಸಿಗೆಗೂ ಹಾಗೂ ಸುಂದರವಾದ ಶೈಲಿಯಲ್ಲಿರುವ ಬಟ್ಟೆಗಳಾಗಿವೆ. ಈ ರೀತಿಯ ತೋಳುಗಳು ನಿಮ್ಮ ಉಡುಪನ್ನು ಸುಂದರವಾಗಿ ಕಾಣುವದರ ಜೊತೆಗೆ, ನಿಮಗೂ ಹೊಸ ಲುಕ್ ನೀಡುತ್ತದೆ.

ಹೂವಿನ ಪ್ರಿಂಟ್ ಗಳಿರುವ ಬಟ್ಟೆಗಳು:

ಬೇಸಿಗೆ ಫ್ಯಾಷನ್ ಗೆ ನೀವು ತೊಡಲೇಬೇಕಾದ ಬಟ್ಟೆ ಎಂದರೆ ಅದು ಹೂವಿನ ಪ್ರಿಂಟ್ ಗಳಿರುವ ಗೌನ್ ಅಥವಾ ಶರ್ಟ್. ಉಡುಪುಗಳಿಂದ ಟಾಪ್ ಗಳವರೆಗೆ ಎಲ್ಲದರಲ್ಲೂ ಬೋಲ್ಡ್ ಆಗಿರುವ ಶೈಲಿಯನ್ನು ಹೊಂದಿದ್ದು ಸುಂದರವಾಗಿ ಕಾಣುತ್ತದೆ.

ಟು ಟೋನ್ ಡೆನಿಮ್:

ಈ ಕ್ಲಾಸಿಕ್ ಫ್ಯಾಬ್ರಿಕ್ ಹೊಸ ರೂಪವಾಗಿದ್ದು. ಇದು ನೀಲಿ ಅಥವಾ ಬಿಳಿಯ ಮಿಶ್ರಣದ ಎರಡು ವಿಭಿನ್ನ ಛಾಯೆಗಳಿರುವ ಪ್ಯಾಂಟ್ ಗಳಾಗಿವೆ. ಇವು ಕ್ಲಾಸಿಕ್ ಆಗಿ ಕಾಣುವುದರ ಜೊತೆಗೆ ಬೇಸಿಗೆಯ ಶಾಖಕ್ಕೆ ಒಳ್ಳೆಯ ಆಯ್ಕೆಯಾಗಿದೆ.

ಟೈ ಡೈ:

ಇದು ಹಳೆಯ ಫ್ಯಾಷನ್ ಆಗಿದ್ದರು ಮತ್ತೆ ಪುನರಾಗಮನ ಮಾಡಿದೆ. ಇದು ನಿಯಾನ್ ಬಣ್ಣಗಳಿಂದ ನೀಲಿ ಬಣ್ಣಗಳವರೆಗೆ, ಈ ಬೇಸಗೆಯ ಟ್ರೆಂಡ್ ಗೆ ಅತೀ ಸೂಕ್ತವಾಗಿದೆ.

ನಿಯಾನ್ ಬಣ್ಣದ ಬಟ್ಟೆಗಳು:

ಈ ಋತುವಿನಲ್ಲಿ ಟ್ರೆಂಡಿಂಗ್ ನಲ್ಲಿರುವ ನಿಯಾನ್ ಬಣ್ಣದ ಬಟ್ಟೆಗಳು ಹೈಲೈಟರ್ ಹಳದಿಯಿಂದ ಪ್ರಕಾಶಮಾನವಾದ ಗುಲಾಬಿಯವರೆಗೆ ನಿಮಗೆ ಲಭ್ಯವಾಗಲಿದೆ. ಈ ಬಣ್ಣಗಳು ನಿಮ್ಮ ವಾರ್ಡ್ರೋಬ್ ಅನ್ನು ಕಲರ್ ಫುಲ್ ಆಗಿಸುವುದರ ಜೊತೆಗೆ ಬೇಸಿಗೆಗೆ ಸೂಕ್ತವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: