ಚಂದ್ರಯಾನ-3 ಬಳಿಕ ವಿಜ್ಞಾನದತ್ತ ಹೆಚ್ಚಿದ ಒಲವು: ನೆಹರು, ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಮಕ್ಕಳ ಕಲರವ

| Updated By: ವಿವೇಕ ಬಿರಾದಾರ

Updated on: May 15, 2024 | 8:06 AM

ಕಿಕ್ಕಿರಿದು ಬರುತ್ತಿರುವ ಜನರು, ವಿಜ್ಞಾನ ಲೋಕದಲ್ಲಿ ಬ್ಯುಸಿಯಾಗಿರುವ ಮಕ್ಕಳು, ಮಕ್ಕಳ ಜೊತೆಗೆ ಹಲವು ವಿಚಾರಗಳನ್ನ ತಿಳಿದುಕೊಳ್ಳುತ್ತಿರುವ ಪೋಷಕರು, ಇಡೀ ಗ್ರಹಗಳು ಭೂಲೋಕದಲ್ಲಿ‌ ಇವೆ ಎಂಬಂತೆ ಭಾಸವಾಗುತ್ತಿರುವ ಮ್ಯುಸಿಯಂ, ಬಂದಂತಹ‌ ಜನರನ್ನು ನಿಭಾಯಿಸಲು ಪರದಾಡುತ್ತಿರುವ ಸಿಬ್ಬಂದಿಗಳು. ಈ ಎಲ್ಲ ಪ್ರಸಂಗಗಳು ನಿಮಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಕಾಣಸಿಗುತ್ತದೆ. ಧಿಡೀರನೆ ಜನರ ಸಂಖ್ಯೆ ಹೆಚ್ಚಾಗಲು ಕಾರಣವೇನು? ಈ ಸುದ್ದಿ ಓದಿ..

ಚಂದ್ರಯಾನ-3 ಬಳಿಕ ವಿಜ್ಞಾನದತ್ತ ಹೆಚ್ಚಿದ ಒಲವು: ನೆಹರು, ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಮಕ್ಕಳ ಕಲರವ
ವಿಶ್ವೇಶ್ವರಯ್ಯ ಮ್ಯೂಸಿಯಂ
Follow us on

ಬೆಂಗಳೂರು, ಮೇ 15: ಕಳೆದ ವರ್ಷ ಆಗಸ್ಟ್​ 23 ರಂದು ಇಸ್ರೋ (ISRO) ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 (Chandrayan-3) ಅನ್ನು ಸಾಫ್ಟ್​ ಲ್ಯಾಂಡಿಂಗ್​ ಮಾಡುವ ಮೂಲಕ ಇತಿಹಾಸ ನಿರ್ಮಿಸಿತ್ತು. ಚಂದ್ರಯಾನ-3 ಯಶಸ್ಸಿನ ಬಳಿಕ ಉಜನರಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಜಾಸ್ತಿಯಾಗಿದೆ. ‌ಹೀಗಾಗಿ ನಗರದ ಜವಾಹರ್‌ಲಾಲ್‌ ನೆಹರು ತಾರಾಲಯ (Jawahar Lal Nehru Planetarium) ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂಗೆ (Visvesvaraya Museum) ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ ‌
ಚಂದ್ರಯಾನ-3 ಯಶಸ್ಸಿನ ನಂತರ ಜನರಲ್ಲಿ ವಿಜ್ಞಾನದ‌ ಬಗ್ಗೆ ಆಸಕ್ತಿ ಜಾಸ್ತಿಯಾಗಿದೆ. ಹೀಗಾಗಿ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಬೇಸಿಗೆ ರಜೆಗೆ ಜವಾಹರ್‌ಲಾಲ್‌ ನೆಹರು ತಾರಾಲಯ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಆಗಮಿಸುತ್ತಿದ್ದು, ಎಲ್ಲಿ ನೋಡಿದರೂ ಮಕ್ಕಳ ಚಿಲಿಪಿಲಿಯೇ ಕಾಣಿಸುತ್ತಿದೆ.

ನಗರದ ವಿಶ್ವೇಶ್ವರಯ್ಯ ಮ್ಯೂಸಿಯಂ ಹಾಗೂ ನೆಹರೂ ತಾರಾರಲಯದ ವಿಜ್ಞಾನ ಲೋಕ ಕಂಡು ಮಕ್ಕಳು ಅಕ್ಷರಶಃ ಬೆರಾಗಾಗುತ್ತಿದ್ದಾರೆ. ವಿಶ್ವೇಶ್ವರಯ್ಯ ಮ್ಯುಸಿಯಂನ ಎಂಜಿನ್ ಹಾಲ್, ಹೌತಿಂಗ್ ವರ್ಕ್ಸ್, ಬಾಲ್ ಪೇಯಿಟಿಂಗ್, ಕ್ಲಾಕ್, ಶಿವನ ಸಮುದ್ರ ಮಾಡೆಲ್, ಆಧಿತ್ಯ L1, ಚಂದ್ರಯಾನ-3, ನಾಸಾ ಬಗ್ಗೆ ವಿಶೇಷ ಪ್ರದರ್ಶನಗಳಿದ್ದು, ಮಕ್ಕಳು ಈ ನೋಡಿ ಚಕಿತರಾಗುತ್ತಿದ್ದಾರೆ. ಅಲ್ಲದೆ ಗ್ರಹಗಳ ಚಲನವಲನಗಳ ಬಗ್ಗೆ ಮಕ್ಕಳಿಗೆ ಇಷ್ಟವಾಗುವ ರೀತಿ ಪ್ರದರ್ಶನ ಆಯೋಜಿಸಿದ್ದು, ಇವುಗಳನ್ನ ನೋಡಲು ಬೆಂಗಳೂರು ಅಷ್ಟೇ ಅಲ್ಲದೆ ಬೇರೆ ಬೇರೆ ಭಾಗಗಳಿಂದಲೂ ಜನರು ಬರುತ್ತಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಮತ್ತು ಚೀನಾದ ಚಿಂತೆಗಳು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಿಕೆ ಮತ್ತು ಭವಿಷ್ಯದ ಯೋಜನೆಗಳು

ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ

ಈ ಎರಡೂ ಮ್ಯೂಸಿಯಂಗೆ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡುತ್ತಿದ್ದಾರೆ. ‌ಇನ್ನು ಇಷ್ಟು ದಿನಗಳ ಕಾಲ ಶಾಲೆ ವತಿಯಿಂದ ಮಾತ್ರ ಮಕ್ಕಳು ಮ್ಯುಸಿಯಂಗೆ ಬರುತ್ತಿದ್ದರು. ಆದರೆ ಈ ಪೋಷಕರು ಕೂಡ ಮಕ್ಕಳನ್ನು ಕರೆದುಕೊಂಡು ಮ್ಯುಸಿಯಂಗಳಿಗೆ ಕರೆದುಕೊಂಡು ಬರುತ್ತಿದ್ದು, ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಮಕ್ಕಳಿಗೆ 80 ರೂ. ಟಿಕೆಟ ದರ ನಿಗದಿ ಮಾಡಿದ್ದು, ಮಕ್ಕಳಿಗಾಗಿ ಮುಸ್ಯಿಂ ಸಿಬ್ಬಂದಿ ವಿಶೇಷ ಪ್ರಾಜೆಕ್ಟ್​ಗಳನ್ನ ಮಾಡಿದ್ದಾರೆ.

ಚಂದ್ರಯಾನ ನಂತರ, ನಮ್ಮ ಮಕ್ಕಳನ್ನು ಕೂಡ ವಿಜ್ಞಾನಿಗಳನ್ನಾಗಿ ಮಾಡಬೇಕು ಎಂಬ ಆಸಕ್ತಿ ನಮ್ಮಲಿ ಮೂಡಿದೆ. ಹೀಗಾಗಿ ದೂರದ ಊರುಗಳಿಂದ ಮ್ಯುಸಿಯಂ ನೋಡುವುದಕ್ಕೆ ಆಗಮಿಸಿದ್ದೇವೆ. ಇಲ್ಲಿಗೆ ಬಂದು ತುಂಬ ಖುಷಿಯಾಗುತ್ತಿದೆ. ಮಕ್ಕಳು ಸಾಕಷ್ಟು ವಿಚಾರ ತಿಳಿದುಕೊಳ್ಳುತ್ತಿದ್ದಾರೆ ಎಂದು ಪೋಷಕರಾದ ಪ್ರಿಯಾಂಕ ಸುರನಾ, ಸ್ವರೂಪ ಹೇಳಿದರು.

ಒಟ್ಟಿನಲ್ಲಿ, ಇಷ್ಟು ದಿನ ಬೇಸಿಗೆ ಕಾಲ ಬಂದರೆ ಸಾಕು ಹೋಟೆಲ್, ಮೂವಿ ಅಂತ ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದ ಪೋಷಕರು ಇದೀಗ ವಿಜ್ಞಾನ ಕ್ಷೇತ್ರದತ್ತ ಮುಖ ಮಾಡುತ್ತಿದ್ದು, ಮಕ್ಕಳು ಸಹ ಹೆಚ್ಚು ತಿಳಿದುಕೊಳ್ಳಲು ಮುಂಬರುತ್ತಿರುವುದು ಸಂತೋಷದ ಸಂಗತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Wed, 15 May 24