ಬೆಂಗಳೂರು, ಜನವರಿ 13: ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿ (BMTC) ಗುಡ್ ನ್ಯೂಸ್ ನೀಡಿದೆ. ಜನವರಿ 17 ರಂದು ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಇಂಡಿಯಾ ಹಾಗೂ ಅಫ್ಘಾನಿಸ್ತಾನ ಟಿ20 (IND-AFG T20) ಹೊನಲು ಬೆಳಕಿನ ಪಂದ್ಯ ನಡೆಯಲಿದೆ. ಈ ಪಂದ್ಯ ವೀಕ್ಷಣೆಗೆ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್ ಸೇವೆಯನ್ನು ಒದಗಿಸಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ 12 ಕಡೆಗಳಿಗೆ ಹೆಚ್ಚುವರಿ ಬಸ್ ಕಾರ್ಯಾಚರಣೆ ನಡೆಸಲಿವೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕೆಂಗೇರಿ, ನೆಲಮಂಗಲ, ಯಲಹಂಕ 5ನೇ ಹಂತ 5ನೇ ಹಂತ, ಬಾಗಲೂರು, ಹೊಸಕೋಟೆಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ.
ಮಾರ್ಗಸಂಖ್ಯೆ ಎಸ್‍ಬಿಎಸ್ -1ಕೆ ಬಸ್ ಎಚ್‍ಎಎಲ್ ಮಾರ್ಗವಾಗಿ ಕಾಡುಕೋಡಿ ತಲುಪಲಿದೆ. ಎಸ್‍ಬಿಎಸ್-13ಕೆ ನಂಬರಿನ ಬಸ್ ಹೂಡಿ ಮಾರ್ಗವಾಗಿ ಕಾಡುಗೋಡಿ ಬಸ್ ನಿಲ್ದಾಣ ತಲುಪಲಿದೆ. ಜಿ-2 ಬಸ್ ಅಗರ, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ, ಜಿ-3ಬಸ್ ಹೊಸೂರು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ, ಜಿ-4 ಜಯದೇವ ಆಸ್ಪತ್ರೆ ಮಾರ್ಗವಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ತಲುಪಲಿದೆ.
ಇದನ್ನೂ ಓದಿ: IND vs AFG T20I: ಭಾರತ-ಅಫ್ಘಾನಿಸ್ತಾನ ಎರಡನೇ ಟಿ20 ಪಂದ್ಯ ಯಾವಾಗ?, ಎಲ್ಲಿ?: ಇಲ್ಲಿದೆ ಎಲ್ಲ ಮಾಹಿತಿ
ಜಿ-6 ಬಸ್ ಮೈಸೂರು ರಸ್ತೆ, ನಾಯಂಡಹಳ್ಳಿ ಮಾರ್ಗವಾಗಿ ಕೆಂಗೇರಿ ಕೆಎಚ್‍ಬಿ ಕ್ವಾಟ್ರಸ್ ತಲುಪಿದರೆ ಜಿ-7 ಬಸ್ ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‍ಶಿಪ್ ಹಾಗೂ ಜಿ-8 ಬಸ್ ಯಶವಂತಪುರ ಮಾರ್ಗವಾಗಿ ನೆಲಮಂಗಲ ಸಂಚರಿಸಲಿದೆ. ಜಿ-9 ಬಸ್ ಹೆಬ್ಬಾಳ ಮಾರ್ಗವಾಗಿ ಯಲಹಂಕ 5ನೇ ಹಂತ, ಜಿ-10ರ ಬಸ್ ನಾಗವಾರ, ಟಾನರಿ ರಸ್ತೆ ಮೂಲಕ ಹೆಗಡೆನಗರ, ಯಲಹಂಕ ತಲುಪಲಿದೆ.
ಜಿ-11ರ ಬಸ್ ಹೆಣ್ಣೂರು ರಸ್ತೆ ಮೂಲಕ ಬಾಗಲೂರುವರೆಗೆ ಸಂಚರಿಸಲಿದ್ದು, ಕೆಎಚ್‍ಬಿ-12 ಎಚ್‍ಕೆ ಬಸ್ ಟಿನ್ ಫ್ಯಾಕ್ಟ್ರಿ ಮೂಲಕ ಹೊಸಕೋಟೆವರೆಗೂ ಸಂಚರಿಸಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ