ಬೆಂಗಳೂರಲ್ಲಿ ಟ್ರೈನ್​ ಕ್ರಾಸಿಂಗ್​ ವೇಳೆ ಉಂಟಾಗುವ ಟ್ರಾಫಿಕ್​​ಗೆ ಸಿಗಲಿದೆ ಮುಕ್ತಿ; 26 ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ನಿರ್ಮಾಣ

| Updated By: ವಿವೇಕ ಬಿರಾದಾರ

Updated on: Aug 19, 2023 | 10:41 AM

ರಾಜ್ಯ ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂಡರ್ ಪಾಸ್, ಮೇಲ್ಸೇತುವೆಗಳು ನಿರ್ಮಾಣವಾಗುತ್ತಿವೆ. ಈ ನಡುವೆ ಭಾರತೀಯ ರೈಲ್ವೆ ಇಲಾಖೆಯು ಬೆಂಗಳೂರಿನಲ್ಲಿ 26 ಕಡೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

ಬೆಂಗಳೂರಲ್ಲಿ ಟ್ರೈನ್​ ಕ್ರಾಸಿಂಗ್​ ವೇಳೆ ಉಂಟಾಗುವ ಟ್ರಾಫಿಕ್​​ಗೆ ಸಿಗಲಿದೆ ಮುಕ್ತಿ; 26 ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ನಿರ್ಮಾಣ
ರೈಲ್ ಅಂಡರ್‌ ಬ್ರಿಡ್ಜ್‌
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆ (Traffic) ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂಡರ್ ಪಾಸ್, ಮೇಲ್ಸೇತುವೆಗಳು ನಿರ್ಮಾಣವಾಗುತ್ತಿವೆ. ಈ ನಡುವೆ ಭಾರತೀಯ ರೈಲ್ವೆ ಇಲಾಖೆಯು ಬೆಂಗಳೂರಿನಲ್ಲಿ 26 ಕಡೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ (26 Railway Level Crossing) ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. ರೈಲು ಕ್ರಾಸಿಂಗ್ ವೇಳೆ ಆಗುವ ಟ್ರಾಫಿಕ್ ಸಮಸ್ಯೆ, ಅಪಘಾತ ನಿಯಂತ್ರಣಕ್ಕೆ ನಗರದ 11 ಕಡೆ ರೈಲ್ ಓವರ್ ಬ್ರಿಡ್ಜ್ (ROB) ಹಾಗೂ 9 ಕಡೆ ರೈಲ್ ಅಂಡರ್‌ ಬ್ರಿಡ್ಜ್‌ (RUB) ನಿರ್ಮಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ – ರೈಡ್) ಯೋಜನೆ ರೂಪಿಸಿದೆ.

ಇದನ್ನು ತಪ್ಪಿಸಲು ರೈಲು ಕ್ರಾಸಿಂಗ್ ಕಡೆಗಳಲ್ಲಿ ಮೇಲ್ಸೆತುವೆ ಮತ್ತು ಕೆಳ ಸೇತುವೆ ನಿರ್ಮಾಣ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಇಲ್ಲವಾಗುತ್ತದೆ. ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ರೈಲ್ವೆ ಕ್ರಾಸಿಂಗ್‌ಗಳನ್ನು ನಾಲ್ಕು ಕಾರಿಡಾರ್‌ ವಿಭಾಗಗಳಾಗಿ ವಿಂಗಡಿಸಲಾಗಿದೆ.

ಇದನ್ನೂ ಓದಿ: ಉದ್ಯಾನ್​​ ಎಕ್ಸ್​ಪ್ರೆಸ್​​​​ ರೈಲಿನಲ್ಲಿ ಅಗ್ನಿ ಅವಘಡ; ತಪ್ಪಿದ ಭಾರಿ ದುರಂತ

ಯಾವ ವಿಭಾಗದಲ್ಲಿ ಎಷ್ಟು ಕ್ರಾಸಿಂಗ್‌

ಕಾರಿಡಾರ್ 1: ಕೆ‌ಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ – ಯಲಹಂಕವರೆಗೆ 6 ಕ್ರಾಸಿಂಗ್‌

ಕಾರಿಡಾರ್ 2: ಬೆನ್ನಿಗಾನಹಳ್ಳಿ- ಚಿಕ್ಕಬಾಣಾವರದವರೆಗೆ 7 ಕ್ರಾಸಿಂಗ್‌

ಕಾರಿಡಾರ್ 3: ಕೆಂಗೇರಿಯಿಂದ – ವೈಟ್​​ಫಿಲ್ಡ್​​ವರೆಗೆ 2 ಕ್ರಾಸಿಂಗ್​

ಕಾರಿಡಾರ್ 4: ಹೀಲಲಿಗೆಯಿಂದ -ಬೈಯಪ್ಪನಹಳ್ಳಿವರೆಗೆ 6 ಕ್ರಾಸಿಂಗ್​, ಬೈಯಪ್ಪನಹಳ್ಳಿ-ಯಲಹಂಕ 1 ಮತ್ತು ಯಲಹಂಕ-ರಾಜಾನುಕುಂಟೆ ವಿಭಾಗದಲ್ಲಿ 4 ರೈಲ್ವೆ ಲೆವೆಲ್ ಕ್ರಾಸ್‌ಗಳನ್ನು ರೈಲ್ವೆ ಇಲಾಖೆ ಗುರುತಿಸಿದೆ.

  1. ಯಶವಂತಪುರ -ಯಲಹಂಕ ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಕೊಡಿಗೇಹಳ್ಳಿಯಲ್ಲಿ ರೈಲ್ವೆ ಓವರ್ ಬ್ರಿಡ್‌ (ROB)
  2. ಯಲಹಂಕ-ದೇವನಹಳ್ಳಿ ವಿಭಾಗದಲ್ಲಿ ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಹಿಂದೆ (RUB)
  3. ದೊಡ್ಡಜಾಲ (ROB)
  4. ವಿಮಾನ ನಿಲ್ದಾಣ KIADB (RUB)
  5. ದೇವನಹಳ್ಳಿ ಎರಡು ಕಡೆಗಳಲ್ಲಿ (RUB)
  6. ಬೈಯಪ್ಪನಹಳ್ಳಿ ಪ್ಯಾನೆಲ್-ಯಶವಂತಪುರ-ಚಿಕ್ಕಬಾನವರ ವಿಭಾಗದ ಗ್ಯಾರಿಸನ್ ಬಾಣಸವಾಡಿ(RUB)
  7. ಕಾವೇರಿ ನಗರ (RUB)
  8. ನಾಗವಾರದಲ್ಲಿ ಎರಡು ಕಡೆಗಳಲ್ಲಿ (RUB)
  9. ಕನಕನಗರದಲ್ಲಿ ಮೂರು ಕಡೆಗಳಲ್ಲಿ(RUB)
  10. ಕೆಂಗೇರಿ-ಕೆಎಸ್ಆರ್ ಬೆಂಗಳೂರು ನಗರ ವಿಭಾಗದಲ್ಲಿ ಜ್ಞಾನಭಾರತಿ (RUB)/(ROB)
  11. ಆರ್‌ವಿ ಕಾಲೇಜು (RUB)/(ROB)
  12. ಹೀಲಳಿಗೆ-ಬೈಪ್ಪನಹಳ್ಳಿ ಪ್ಯಾನಲ್ ವಿಭಾಗ ವ್ಯಾಪ್ತಿಯಲ್ಲಿ ಸಿಂಗೇನ ಅಗ್ರಹಾರ (ROB)
  13. ಹುಸ್ಕೂರ್​ನಲ್ಲಿ ಎರಡು ಕಡೆಗಳಲ್ಲಿ (RUB)
  14. ಅಂಬೇಡ್ಕರ್ ನಗರ (ROB)
  15. ಮಾರತಹಳ್ಳಿ (ROB)
  16. ಕಗ್ಗದಾಸಪುರ (RUB)/(ROB)
  17. ಬೈಯಪ್ಪನಹಳ್ಳಿ ಫಲಕ-ಚನ್ನಸಂದ್ರ-ಯಲಹಂಕ ವಿಭಾಗ ವ್ಯಾಪ್ತಿಯಲ್ಲಿ ಜಕ್ಕೂರು (ROB)
  18. ಯಲಹಂಕ-ರಾಜನುಕುಂಟೆ ವಿಭಾಗದಲ್ಲಿ ಯಲಹಂಕದ KPCL ಅನಿಲ ವಿದ್ಯುತ್ ಸ್ಥಾವರ ಬಳಿ (RUB)
  19. ಮುದ್ದನಹಳ್ಳಿ(RUB)
  20. ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಸಮೀಪದಲ್ಲಿ (RUB)
  21. ರಾಜಾನುಕುಂಟೆ (RUB)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:41 am, Sat, 19 August 23