ಮೈಸೂರಿನಲ್ಲಿ ಹೆಚ್ಚಿದ ಪ್ರಿ ವೆಡ್ಡಿಂಗ್​, ಪ್ರೆಗ್ನೆನ್ಸಿ ಫೋಟೋಶೂಟ್: ಟ್ರಾಫಿಕ್​ ಕಿರಿಕಿರಿ

ಸಾಂಕೃತಿಕ ನಗರಿ ಮೈಸೂರಿಗೆ ನವಜೋಡಿಗಳು, ಗರ್ಭಿಣಿಯರು ಫೋಟೋ ಶೂಟ್​ಗೆ ಆಗಮಿಸುತ್ತಾರೆ. ಇಲ್ಲಿ ಅರಮನೆ ಮುಂದಿನ ರಸ್ತೆಯಲ್ಲಿ, ಚಾಮರಾಜ ಒಡೆಯರ್ ವೃತ್ತದಲ್ಲಿ ನಿಂತು ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸವಾರರು ದೂರುತ್ತಿದ್ದಾರೆ.

ಮೈಸೂರಿನಲ್ಲಿ ಹೆಚ್ಚಿದ ಪ್ರಿ ವೆಡ್ಡಿಂಗ್​, ಪ್ರೆಗ್ನೆನ್ಸಿ ಫೋಟೋಶೂಟ್: ಟ್ರಾಫಿಕ್​ ಕಿರಿಕಿರಿ
ಪ್ರೆಗ್ನೆನ್ಸಿ ಫೋಟೋಶೂಟ್
Follow us
ವಿವೇಕ ಬಿರಾದಾರ
|

Updated on:Aug 09, 2023 | 12:03 PM

ಮೈಸೂರು: ಇತ್ತೀಗೆ ಹೊಸ ಟ್ರೆಂಡ್​ವೊಂದು ಶುರುವಾಗಿದೆ. ಅದು ಪ್ರಿ ವೆಡ್ಡಿಂಗ್​​ ಪೋಟೋಶೂಟ್ (Photo Shoot)​ ಮತ್ತು ಪ್ರೆಗ್ನೆನ್ಸಿ ಫೋಟೋಶೂಟ್​​ ಜಾಸ್ತಿಯಾಗಿದೆ. ಈ ಫೋಟೋಶೂಟ್​ಗಳಿಗಾಗಿ ನವಜೋಡಿ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಅಲ್ಲಿ ಐತಿಹಾಸಿಕ ಕಟ್ಟಡಗಳ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳುವುದು ರೂಢಿಯಾಗಿದೆ. ಇದೇರೀತಿಯಾಗಿ ಸಾಂಕೃತಿಕ ನಗರಿ ಮೈಸೂರಿಗೆ (Mysore) ನವಜೋಡಿಗಳು, ಗರ್ಭಿಣಿಯರು ಫೋಟೋಶೂಟ್​ಗೆ ಆಗಮಿಸುತ್ತಾರೆ. ಇಲ್ಲಿ ಅರಮನೆ ಮುಂದಿನ ರಸ್ತೆಯಲ್ಲಿ, ಚಾಮರಾಜ ಒಡೆಯರ್ ವೃತ್ತದಲ್ಲಿ ನಿಂತು ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಸವಾರರು ದೂರುತ್ತಿದ್ದಾರೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಫೋಟೋಶೂಟ್‌ಗಳನ್ನು ಸಾಮಾನ್ಯವಾಗಿ ಬೆಳಗಿನ ಜಾವದಲ್ಲೇ ಮಾಡಲಾಗುತ್ತದೆ. ಫೋಟೋಶೂಟ್​​ಗೆ ಅರಮನೆ, ಚಾಮರಾಜ ಒಡೆಯರ್ ವೃತ್ತ, ಲಾಂಗ್ ಶಾಟ್‌ಗಳಿಗಾಗಿ ಸಿಲ್ವರ್ ಜ್ಯೂಬಿಲಿ ಕ್ಲಾಕ್ ಟವರ್ (ದೊಡ್ಡ ಗಡಿಯಾರ), ಡಾ. ರಾಜ್‌ಕುಮಾರ್ ಪಾರ್ಕ್, ಡಾ. ವಿಷ್ಣುವರ್ಧನ್ ಪಾರ್ಕ್ ಮತ್ತು ಟೌನ್ ಹಾಲ್, ಮೈಸೂರು ಅರಮನೆ ಜಂಕ್ಷನ್ ಮತ್ತು ನಗರದ ಕೆಲವು ಜನಪ್ರಿಯ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸ್ಥಳಗಳು ನಗರದ ಹೃದಯಭಾಗದಲ್ಲಿದ್ದು ಫೋಟೋಶೂಟ್​ನಿಂದ ಸಂಚಾರದ ದಟ್ಟಣೆ ಉಂಟಾಗುತ್ತಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆ ಮತ್ತು ಫೋಟೋಶೂಟ್​ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಗರ ಸಂಚಾರ ಪೊಲೀಸರಿಗೆ ತಿಳಿಸಲಾಗಿತ್ತು. ಫೋಟೋಶೂಟ್‌ನಲ್ಲಿ ತೊಡಗಿರುವವರ ವಿರುದ್ಧ ನಗರ ಪೊಲೀಸರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ಕ್ರಮ ಕೈಗೊಂಡಿದ್ದರೂ, ಫೋಟೋ ಶೂಟ್​​ ಮಾತ್ರ ಕಡಿಮೆಯಾಗಲ್ಲ.

ಇದನ್ನೂ ಓದಿ: ಮೈಸೂರು ದಸರಾ-2023: ಗಜಪಡೆ ಪಟ್ಟಿ ತಯಾರಿ, ಮೊದಲ ಹಂತದಲ್ಲಿ ಅರಮನೆಗೆ ಆಗಮಿಸಲಿರುವ ಆನೆಗಳ ವಿವರ ಇಲ್ಲಿದೆ

ಜನಿಬಿಡ ವೃತ್ತಗಳು ಮತ್ತು ರಸ್ತೆಗಳಲ್ಲಿ ಈ ಫೋಟೋಶೂಟ್‌ಗಳು ನನ್ನ ಗಮನಕ್ಕೆ ಬಂದಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಹೆಚ್ಚಿನ ಜನರು ಫೋಟೋ ಶೂಟ್​​ಗೆ ಅರಮನೆಯ ಮುಂಭಾಗದ ಪ್ರದೇಶವನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಅರಮನೆ ಆವರಣಕ್ಕೆ ಪ್ರತಿನಿತ್ಯ ಬರುವ ಸಾವಿರಾರು ಪಾರಿವಾಳಗಳಿಗೆ ತೊಂದರೆಯಾಗುತ್ತಿದೆ. ಅಲ್ಲಿ ಜನರು ನೀಡಿವ ಆಹಾರವನ್ನು ತಿನ್ನಲು ಸಾವಿರಾರು ಪಾರಿವಾಳಗಳು ಪ್ರತಿದಿನ ಬರುತ್ತವೆ. ಹೀಗೆ ಬಂದ ಪಕ್ಷಿಗಳ ಹಾರುವ ಫೋಟೋವನ್ನು ಸೆರೆಹಿಡಿಯಲು ಫೋಟೋಗ್ರಾಫರ್​​ಗಳು ಆಗಾಗ್ಗೆ ಪಕ್ಷಿಗಳನ್ನು ಹೆದರಿಸುತ್ತಾರೆ, ಇದು ಸ್ಥಳದ ನೈಸರ್ಗಿಕ ವಾತಾವರಣವನ್ನು ಹಾಳು ಮಾಡುತ್ತಿದೆ.

ಪಾರಿವಾಳಗಳಿಗೆ ಆಹಾರ ನೀಡುವ ಆವರಣದೊಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದರೂ, ಫೋಟೋಗ್ರಾಫರ್​ಗಳು ಮತ್ತು ನವಜೋಡಿಗಳು ಫೋಟೋಗಾಗಿ ಮತ್ತು ವೀಡಿಯೊಗಾಗಿ ಈ ಪ್ರದೇಶವನ್ನು ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ಸರಿಸಿ ಅಕ್ರಮವಾಗಿ ಒಳಗೆ ಬರುತ್ತಾರೆ.

ಅರಮನೆ ಸುತ್ತ ಮತ್ತು ಒಳಗೆ ಡ್ರೋನ್ ಹಾರಾಟ ನಿಷಿದ್ಧ

ಕೆಲವು ಫೋಟೋಗ್ರಾಫರ್​ಗಳು ಚಿತ್ರಗಳನ್ನು ಸೆರೆಹಿಡಿಯಲು ಡ್ರೋನ್‌ಗಳನ್ನು ಬಳಸುತ್ತಾರೆ. ಡ್ರೋನ್ ಹಾರಾಟಕ್ಕೆ ಅವರು ಅನುಮತಿ ಪಡೆದಿದ್ದಾರೆಯೇ ಎಂದು ಜನರು ಪ್ರಶ್ನಿಸಿದ್ದಾರೆ.

ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಮೈಸೂರು ಅರಮನೆಯ ಒಳಗೆ ಮತ್ತು ಹೊರಗೆ ಡ್ರೋನ್ ಕ್ಯಾಮೆರಾಗಳ ಬಳಕೆಯನ್ನು ನಿರ್ಬಂಧಿಸಿ ಮೈಸೂರು ಅರಮನೆ ಮಂಡಳಿ ಆದೇಶ ಹೊರಡಿಸಿದೆ. ಅರಮನೆ ಪ್ರದೇಶ ಮತ್ತು ಅದರ ಸುತ್ತಲಿನ ಪ್ರಾಂಗಣವನ್ನು ಹಳದಿ ವಲಯ ಎಂದು ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಡ್ರೋನ್ ಕ್ಯಾಮೆರಾಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಬಳಸಲು ಪೂರ್ವಾನುಮತಿ ಅಗತ್ಯ. ಡ್ರೋನ್ ಕ್ಯಾಮೆರಾ ಬಳಕೆಗೆ ಅನುಮತಿ ಪಡೆಯದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:49 am, Wed, 9 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ