Bengaluru: 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಬೆಂಗಳೂರಿನಲ್ಲಿ ಭಾರತದಲ್ಲೇ ಮೊದಲ ಅಂಚೆ ಕಚೇರಿ ನಿರ್ಮಾಣ

| Updated By: ಸುಷ್ಮಾ ಚಕ್ರೆ

Updated on: Aug 26, 2022 | 1:32 PM

ಬೆಂಗಳೂರಿನ ಹಲಸೂರಿನಲ್ಲಿ ಅಂಚೆ ಇಲಾಖೆಗೆ ಸ್ವಂತ ನಿವೇಶನವಿದ್ದು, ಇಲ್ಲಿಯೇ 3ಡಿ ತಂತ್ರತಜ್ಞಾನವನ್ನು ಬಳಸಿ ಹೊಸ ಅಂಚೆ ಕಚೇರಿಯನ್ನು ನಿರ್ಮಿಸಲಾಗುತ್ತಿದೆ. 

Bengaluru: 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಬೆಂಗಳೂರಿನಲ್ಲಿ ಭಾರತದಲ್ಲೇ ಮೊದಲ ಅಂಚೆ ಕಚೇರಿ ನಿರ್ಮಾಣ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಭಾರತದ ಮೊದಲ ತ್ರೀಡಿ ಪ್ರಿಂಟಿಂಗ್ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, ಇನ್ನು 1 ತಿಂಗಳೊಳಗೆ ಸಂಪೂರ್ಣ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ 3 ಅಂತಸ್ತಿನ ತ್ರೀಡಿ ಮುದ್ರಿತ ಕಟ್ಟಡವು ಈ ಸೌಲಭ್ಯಗಳನ್ನು ಹೊಂದಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಈ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಇದನ್ನು ಎಲ್ ಆ್ಯಂಡ್ ಟಿ ನಿರ್ವಹಿಸಲಿದೆ.

ಈ ಪ್ರಿಂಟಿಂಗ್ ನಿರ್ಮಾಣದಿಂದ ಯೋಜನೆಯ ವೆಚ್ಚ ಸಾಂಪ್ರದಾಯಿಕ ಮಾದರಿಯಲ್ಲಿ ಖರ್ಚು ಮಾಡಿದ ಮೊತ್ತದ ನಾಲ್ಕನೇ ಒಂದು ಭಾಗಕ್ಕೆ ಕಡಿಮೆಯಾಗುತ್ತದೆ. ಇದು ನಿರ್ಮಾಣ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಪ್ರಕಾರ, 1,000 ಚದರ ಅಡಿ ಉದ್ದದ ಈ ಕಟ್ಟಡವನ್ನು 3D ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು 25 ಲಕ್ಷಕ್ಕಿಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿರಿಯ ಸಚಿವರು ಇರುವಾಗ ಬೆಂಗಳೂರು ಉಸ್ತುವಾರಿ ಇನ್ನೂ ಕೂಡಾ ಸಿಎಂ ಬೊಮ್ಮಾಯಿ ಬಳಿಯೇ ಯಾಕೆ?

ಭಾರತದಲ್ಲಿ ಪ್ರಸ್ತುತ ನಿರ್ಮಾಣಕ್ಕಾಗಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸುತ್ತಿರುವ ಏಕೈಕ ಕಂಪನಿಯಾಗಿರುವ ಎಲ್ ಆ್ಯಂಡ್ ಟಿ, ಈಗಾಗಲೇ ಕಟ್ಟಡ ವಿನ್ಯಾಸಗಳನ್ನು ಅಂಚೆ ಇಲಾಖೆಗೆ ಸಲ್ಲಿಸಿದೆ. ಇನ್ನು ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಬಜಾರ್ ಉಪ ಅಂಚೆ ಕಚೇರಿ ನಿರ್ಮಿಸಲು ಲಾರ್ಸನ್ ಮತ್ತು ಟೂಬ್ರೊ ಕನ್‌ಸ್ಟ್ರಕ್ಷನ್ ಅನ್ನು ಸಂಪರ್ಕಿಸಲಾಗಿದೆ. ಭಾರತದಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿ ನಿರ್ಮಾಣವನ್ನು ಕೈಗೊಳ್ಳುತ್ತಿರುವ ಏಕೈಕ ಕಂಪನಿ ಇದಾಗಿದೆ ಎಂದು ಹೇಳಲಾಗುತ್ತಿದೆ.

ಐಐಟಿ ಮದ್ರಾಸ್ ಸಹಯೋಗದಲ್ಲಿ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೂ ಮೊದಲು, ಭಾರತದ ಮೊದಲ 3D-ಮುದ್ರಿತ ಮನೆಯನ್ನು ಐಐಟಿ-ಮದ್ರಾಸ್ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಯಿತು. ಇದು 600 ಚದರ ಅಡಿ ವಿಸ್ತೀರ್ಣ, ಮಲಗುವ ಕೋಣೆ, ಹಾಲ್ ಮತ್ತು ಅಡುಗೆಮನೆಯನ್ನು ಹೊಂದಿದೆ. ಈ ಕಡಿಮೆ ವೆಚ್ಚದ ತಂತ್ರಜ್ಞಾನವು ಪ್ರಸ್ತುತ ಅಂಚೆ ಕಚೇರಿಗಳನ್ನು ಹೊಂದಿರದ ಪ್ರದೇಶಗಳಿಗೆ ಹೆಚ್ಚಿನ ಅಂಚೆ ಕಚೇರಿಗಳನ್ನು ಒದಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅವೈಜ್ಞಾನಿಕ ರಸ್ತೆಗೆ ಮತ್ತೊಂದು ಜೀವ ಬಲಿ, ಗೂಡ್ಸ್ ಆಟೋದಿಂದ ಬಿದ್ದು ಮಹಿಳೆ ಸಾವು

ಹಲಸೂರಿನಲ್ಲಿ ಅಂಚೆ ಇಲಾಖೆಗೆ ಸ್ವಂತ ನಿವೇಶನವಿದ್ದು, ಇಲ್ಲಿಯೇ 3ಡಿ ತಂತ್ರತಜ್ಞಾನವನ್ನು ಬಳಸಿ ಹೊಸ ಅಂಚೆ ಕಚೇರಿಯನ್ನು ನಿರ್ಮಿಸಲಾಗುತ್ತಿದೆ. ಸುಮಾರು 1,000 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿದರೆ 25 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚವಾಗುತ್ತದೆ. ಇದು ಸಾಮಾನ್ಯ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚದ ಕೇವಲ ಶೇ. 25ರಷ್ಟಾಗುತ್ತದೆ. ಈ ತಂತ್ರಜ್ಞಾನವು ಇಲಾಖೆಗೆ ತನ್ಮೂಲಕ ಅಗತ್ಯವಿರುವ ಪ್ರದೇಶಗಳಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಿಸಲು ಉತ್ತಮ ಪರ್ಯಾಯವನ್ನು ನೀಡಬಹುದು’ ಎಂದು ಮಾಹಿತಿ ನೀಡಿದ್ದಾರೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಟ್ಟಡ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಪ್ರಮೋಷನ್ ಕೌನ್ಸಿಲ್ ಹಾಗೂ IIT ಮದ್ರಾಸ್‌ನಿಂದ ಗ್ರೌಂಡ್ ಸೇರಿದಂತೆ ಮೂರು ಮಹಡಿಗಳ ಕಟ್ಟಡ ನಿರ್ಮಾಣಕ್ಕಾಗಿ ತಂತ್ರಜ್ಞಾನವನ್ನು ಬಳಸುವ ಅನುಮೋದನೆಯನ್ನು L&T ಸಂಸ್ಥೆಯು ಪಡೆದುಕೊಂಡಿದೆ ಎಂದು ಸಿಪಿಎಂಜಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ